"ಮಹಾದಾಯಿ" ಬಂದ್: ಕಾಮಗಾರಿ ಪ್ರದೇಶಕ್ಕೆ ಪ್ರವೇಶ ನಿರ್ಬಂಧ

ಮಹಾದಾಯಿ ನ್ಯಾಯಾಧಿಕರಣ ತೀರ್ಪಿನ ಉತ್ತರ ಕರ್ನಾಟಕದಲ್ಲಿ ಆಕ್ರೋಶ ಭುಗಿಲೆದ್ದ ಕಾರಣ ಕಳಸಾ ನಾಲೆಯ ಕಾಮಗಾರಿ ಪ್ರದೇಶಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.
ಮಹಾದಾಯಿ ತೀರ್ಪು ವಿರೋಧಿಸಿ ಉತ್ತರ ಕರ್ನಾಟಕ ಬಂದ್ (ಟಿಎನ್ ಐಇ ಚಿತ್ರ)
ಮಹಾದಾಯಿ ತೀರ್ಪು ವಿರೋಧಿಸಿ ಉತ್ತರ ಕರ್ನಾಟಕ ಬಂದ್ (ಟಿಎನ್ ಐಇ ಚಿತ್ರ)

ಬೆಳಗಾವಿ: ಮಹಾದಾಯಿ ನ್ಯಾಯಾಧಿಕರಣ ತೀರ್ಪಿನ ಉತ್ತರ ಕರ್ನಾಟಕದಲ್ಲಿ ಆಕ್ರೋಶ ಭುಗಿಲೆದ್ದ ಕಾರಣ ಕಳಸಾ ನಾಲೆಯ ಕಾಮಗಾರಿ ಪ್ರದೇಶಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.

ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮದ ದೇವಸ್ಥಾನದಿಂದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಹಿಂಭಾಗದವರೆಗಿನ ಕಳಸಾ ನಾಲೆ ಕಾಮಗಾರಿ  ನಡೆಯುತ್ತಿರುವ ಸ್ಥಳ ಹಾಗೂ ಅದರ ದಂಡೆಯ ಸುತ್ತಮುತ್ತಲಿನ ಸುಮಾರು 1 ಕಿ.ಮೀ. ವ್ಯಾಪ್ತಿಯೊಳಗಿನ ಪ್ರದೇಶದಲ್ಲಿ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಎನ್. ಜಯರಾಮ್ ಆದೇಶ  ಹೊರಡಿಸಿದ್ದಾರೆ.

ಇದೇ ವೇಳೆ ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಿರುವ ರೈತಪರ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಕಾಮಗಾರಿ ಪ್ರದೇಶಕ್ಕೆ ಮುತ್ತಿಗೆ ಹಾಕುವ ಭೀತಿ ಎದುರಾಗಿದ್ದು, ಈ  ಪ್ರದೇಶದಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದೆ.

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಹಲವೆಡೆ ಲಾಠಿ ಪ್ರಹಾರ
ಇಂದು ನಡೆಯುತ್ತಿರುವ ಬಂದ್ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ಗದಗ ಜಿಲ್ಲೆಯ ಬೆಟಗೇರಿ ಪ್ರದೇಶದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣೆ ನೆಲೆಸಿತ್ತು.  ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ನವಲಗುಂದದ ಹುಬ್ಬಳ್ಳಿ ರಸ್ತೆ ಬಳಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪ್ರತಿಭಟನಾಕರರು ರಸ್ತೆ ಬಂದ್  ಮಾಡಿ ನಡುರಸ್ತೆಯಲ್ಲೇ ಟೈರ್ ಗೆ ಬೆಂಕಿ ಹಚ್ಚಲು ಯತ್ನಿಸಿದರು. ಈ ವೇಳೆ ಪೊಲೀಸರು ತಡೆಯಲೆತ್ನಿಸಿದಾಗ ವಾಗ್ವಾದ ನಡೆದು ಲಾಠಿ ಪ್ರಹಾರ ನಡೆಸಲಾಯಿತು. ಘಟನೆಯಲ್ಲಿ ಇಬ್ಬರು ರೈತರು,  ಪತ್ರಕರ್ತರು ಅಸ್ವಸ್ಥಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com