ಶಿವಾಜಿನಗರ ವ್ಯಾಪಾರಿಗಳ ನಿದ್ದೆಗೆಡಿಸಿದ ಮಳೆ!

ಬಿರು ಬೇಸಿಗೆಯಿಂದ ಕಂಗೆಟ್ಟಿದ್ದ ನಗರದ ಜನತೆಗೆ ಕಳೆದೆರಡು ದಿನಗಳಿಂದ ಮಳೆರಾಯ ಕೊಂಚ ಸಮಾಧಾನವನ್ನು ನೀಡಿದ್ದಾನೆ. ಆದರೆ, ಶಿವಾಜಿನಗರದ ವ್ಯಾಪಾರಿಗಳಿಗೆ...
ಜಲಾವೃತ್ತಗೊಂಡಿರುವ ಶಿವಾಜಿನಗರದ ರಸ್ತೆ
ಜಲಾವೃತ್ತಗೊಂಡಿರುವ ಶಿವಾಜಿನಗರದ ರಸ್ತೆ
Updated on

ಬೆಂಗಳೂರು: ಬಿರು ಬೇಸಿಗೆಯಿಂದ ಕಂಗೆಟ್ಟಿದ್ದ ನಗರದ ಜನತೆಗೆ ಕಳೆದೆರಡು ದಿನಗಳಿಂದ ಮಳೆರಾಯ ಕೊಂಚ ಸಮಾಧಾನವನ್ನು ನೀಡಿದ್ದಾನೆ. ಆದರೆ, ಶಿವಾಜಿನಗರದ ವ್ಯಾಪಾರಿಗಳಿಗೆ ಮಾತ್ರ ಈ ಮಳೆ ನಿದ್ದೆಗೆಡುವಂತೆ ಮಾಡಿದೆ.

ಶಿವಾಜಿನಗರದ ಸಾಕಷ್ಟು ರಸ್ತೆಗಳು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದ್ದು, ಮಳೆ ಬರುತ್ತಿದ್ದಂತೆ ಇಲ್ಲಿನ ರಸ್ತೆಗಳಲ್ಲಿ ನೀರು ತುಂಬಿಕೊಳ್ಳಲು ಆರಂಭವಾಗುತ್ತದೆ. ಇದರಿಂದಾಗಿ ಇಲ್ಲಿನ ವ್ಯಾಪಾರಿಗಳು ಮಳೆ ಬಂದರೆ ನಿದ್ದೆಗೆಡುವಂತಾಗಿದೆ.

ಒಂದೇ ವಾರದಲ್ಲಿ ನಾಲ್ಕು ಬಾರಿ ರಸ್ತೆಯಲ್ಲಿ ನೀರು ತುಂಬಿ ಸಮಸ್ಯೆ ಎದುರಾಗುತ್ತಿದೆ. ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತಿರುವುದರಿಂದ ನಮ್ಮ ವ್ಯಾಪಾರಕ್ಕೆ ನಷ್ಟವನ್ನುಂಟು ಮಾಡುತ್ತಿದೆ ಎಂದು ವ್ಯಾಪಾರಿಯೊಬ್ಬರು ಹೇಳಿಕೊಂಡಿದ್ದಾರೆ.

ಮಳೆ ಬಂದಾಗ ಎರಡು ಅಡಿಗಳಷ್ಟು ನೀರು ರಸ್ತೆಯಲ್ಲಿ ತುಂಬುತ್ತದೆ. ಇದರಿಂದಾಗಿ ರಸ್ತೆಗಳು ಚಿಕ್ಕದ್ದಾದ್ದರಿಂದ ಟ್ರಾಫಿಕ್ ಸಮಸ್ಯೆಗಳು ಎದುರಾಗುತ್ತದೆ. ಇನ್ನು ರಸ್ತೆಗಳಲ್ಲಿ ಈ ರೀತಿಯ ಸಮಸ್ಯೆಗಳು ಎದುರಾದರೆ ಗ್ರಾಹಕರು ಹಣ್ಣನ್ನು ಕೊಳ್ಳಲು ಬರುವುದಿಲ್ಲ. ಹೀಗಾಗಿ ಯಾವುದೇ ದಾರಿಯಿಲ್ಲದೆ, ವ್ಯಾಪಾರವನ್ನು ನಿಲ್ಲಿಸಿ ಮನೆಗೆ ತೆರಳುತ್ತೇನೆಂದು ಮಾವಿನ ಹಣ್ಣಿನ ವ್ಯಾಪಾರಿಯೊಬ್ಬರು ಹೇಳಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಭಾನುವಾರದ ಸಮಯದಲ್ಲಿ ರಜೆಯಲ್ಲಿರುತ್ತಾರೆ. ಒಂದು ವೇಳೆ ಭಾನುವಾರದ ದಿನದ ಮಳೆ ಬಂದರೆ ಸಮಸ್ಯೆ ಆಲಿಸುವವರು ಯಾರೂ ಇರುವುದಿಲ್ಲ. ಒಳಚರಂಡಿಗಳ ನೀರು ಹೋಟೆಲ್ ಒಳಗೆ ನುಗ್ಗುತ್ತಿರುತ್ತದೆ. ಮಳೆ ವೇಳೆ ಅಪಘಾತಗಳು ಆಗುವುದಿಲ್ಲ. ಒಳಚರಂಡಿಗಳ ನೀರು ಹರಿಯುತ್ತಿದ್ದರೂ ಜನರು ವಾಹನಗಳಲ್ಲಿ ಓಡಾಡುತ್ತಿರುತ್ತಾರೆ. ಒಳಚರಂಡಿ ನೀರು ಹೋಟೆಲ್ ನುಗ್ಗುವುದರಿಂದ ಗ್ರಾಹಕರು ಹೋಟೆಲ್ ಗೆ ಬರುವುದಿಲ್ಲ. ಇದರಿಂದಾಗಿ ಹೋಟೆಲ್ ಗೆ ನಷ್ಟವುಂಟಾಗುತ್ತದೆ ಎಂದು ಎಂದು ಹೋಟೆಲ್ ನ ಮಾಲೀಕರೊಬ್ಬರು ಹೇಳಿದ್ದಾರೆ.

ಮಳೆ ಬಂದಾಗ ನಾವು ಅಸಹಾಯಕರಾಗುತ್ತೇವೆ. ನಮ್ಮ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಸಂಬಂಧ ಪಟ್ಟ ಅಧಿಕಾರಿಗಳಿಗೆ ನಮ್ಮ ಸಮಸ್ಯೆಗಳ ಕುರಿತು ಸಾಕಷ್ಟು ಬಾರಿ ದೂರು ನೀಡಿದ್ದೇವೆ. ಆದರೆ, ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಶಿವಾಜಿನಗರದಲ್ಲಿ ವ್ಯಾಪಾರ ಹೆಚ್ಚಾಗಿ ಆಗುವುದರಿಂದ ನಮಗೆ ಬೇರೆ ಪ್ರದೇಶಕ್ಕೆ ಹೋಗಿ ವ್ಯಾಪಾರ ಮಾಡಲು ಇಷ್ಟವಿಲ್ಲ ಎಂದು ಚಪ್ಪಲಿ ಅಂಗಡಿ ಮಾಲೀಕರೊಬ್ಬರು ಹೇಳಿದ್ದಾರೆ.

ಶಿವಾಜಿನಗರ ಬಸ್ ನಿಲ್ದಾಣದ ಪಕ್ಕದಲ್ಲಿ ಕಳೆದ 40 ವರ್ಷಗಳಿಂದಲೂ ಹೂವಿನ ವ್ಯಾಪರ ಮಾಡುತ್ತಿದ್ದೇನೆ. ಮಳೆ ಬಂದರೆ ರಸ್ತೆಗಳಲ್ಲಿ ನೀರು ತುಂಬುತ್ತದೆ. ಈ ವೇಳೆ ರಸ್ತೆಯಲ್ಲಿ ಕುಳಿತು ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ವ್ಯಾಪಾರವನ್ನು ನಿಲ್ಲಿಸಿಬಿಡುತ್ತೇನೆ. ವ್ಯಾಪಾರವಾಗದೆ ಹೂವು ಒಣಗಿ ನಷ್ಟವನ್ನುಂಟು ಮಾಡುತ್ತದೆ ಎಂದು ರಚಿಮಿ ಹೂವಿನ ವ್ಯಾಪಾರಿ ಹೇಳಿಕೊಂಡಿದ್ದಾರೆ.

ಸಮಸ್ಯೆ ಬಗ್ಗೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮೂಲಭೂತ ಅಭಿವೃದ್ಧಿ ಸಚಿವ ರೋಷನ್ ಬೇಗ್ ಅವರನ್ನು ಸಂಪರ್ಕಿಸಿದಾಗ, ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ಕೆಲಸಗಳು ಪ್ರಗತಿಯಲ್ಲಿವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com