ಸುರಂಗ ಮಾರ್ಗದಲ್ಲೇ ನಿಂತ ಮೆಟ್ರೋ: ಕಕ್ಕಾಬಿಕ್ಕಿಯಾದ ಪ್ರಯಾಣಿಕರು

ನಮ್ಮ ಮೆಟ್ರೋ ನಗರಕ್ಕೆ ಕಾಲಿಟ್ಟಾಗಿನಿಂದ ಜನತೆ ಸಾಕಷ್ಟು ಸಂತಸ ವ್ಯಕ್ತಪಡಿಸುತ್ತಿದೆ. ದಿನಕಳೆಯುತ್ತಿದ್ದಂತೆ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಬಂದಿದೆ. ಇದರಂತೆ ಮೆಟ್ರೋ ನೇರಳೆ ಮಾರ್ಗದ ಸುರಂಗ ಸಂಚಾರದಲ್ಲೂ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಮ್ಮ ಮೆಟ್ರೋ ನಗರಕ್ಕೆ ಕಾಲಿಟ್ಟಾಗಿನಿಂದ ಜನತೆ ಸಾಕಷ್ಟು ಸಂತಸ ವ್ಯಕ್ತಪಡಿಸುತ್ತಿದೆ. ದಿನಕಳೆಯುತ್ತಿದ್ದಂತೆ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಬಂದಿದೆ. ಇದರಂತೆ ಮೆಟ್ರೋ ನೇರಳೆ ಮಾರ್ಗದ ಸುರಂಗ ಸಂಚಾರದಲ್ಲೂ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿದೆ. ಸಂತಸದಲ್ಲಿ ಮೆಟ್ರೋ ಹತ್ತಿದ್ದ ಪ್ರಯಾಣಿಕರಿಗೆ ಅಧಿಕಾರಿಗಳು ಶಾಕ್ ಒಂದನ್ನು ನೀಡಿದ್ದು, ಹಠಾತ್ತನೆ ನಿಂತ ಮೆಟ್ರೋವನ್ನು ನೋಡಿದ್ದ ಪ್ರಯಾಣಿಕರು ಭಾನುವಾರ ಕಕ್ಕಾಬಿಕ್ಕಿಯಾಗಿದ್ದಾರೆ.

ನಮ್ಮ ಮೆಟ್ರೋ ರೈಲು ನಿಗಮದಿಂದ ಸುರಂಗ ಮಾರ್ಗ 2ನೇ ಹಂತದ ಸುರಂಗದಲ್ಲಿ ಸಂಚರಿಸುತ್ತಿದ್ದ ಮೆಟ್ರೋ ರೈಲು ಹಠಾತ್ತನೆ ಸುರಂಗದೊಳಕ್ಕೆ ನಿಂತು ಬಿಟ್ಟಿತು. ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣ ತಲುಪಲು ಇನ್ನೂ 150 ಮೀಟರ್ ಇರುವಾಗಲೇ ರೈಲು ನಿಂಟು ಬಿಟ್ಟಿತ್ತು.

11.14ರ ಸಮಯದಲ್ಲಿ ಮೆಟ್ರೋ ನಿಯಂತ್ರಣ ಕೊಠಡಿಯಿಂದ ರೈಲು ಆಪತ್ತಿನಲ್ಲಿದೆ. ಪ್ರಯಾಣಿಕರು ರೈಲಿನಿಂದ ನಿಲ್ದಾಣಕ್ಕೆ ತೆರಳುವಂತೆ ಸಂದೇಶವನ್ನು ರವಾನಿಸಿತ್ತು. ಸಿಬ್ಬಂದಿಗಳು ಸಂದೇಶವನ್ನು ಕೇಳಿ ಅವಾಕ್ಕಾದ ಪ್ರಯಾಣಿಕರು ಚಿಂತೆಗೀಡಾದರು. ನಂತರ ಸುರಂಗ ಮಾರ್ಗದಲ್ಲಿ ಸಿಲುಕಿದ್ದ ಪ್ರಯಾಣಿಕರು ಹೇಗೆ ಹೊರಬರಬೇಕೆಂದು ಮಾರ್ಗವನ್ನು ಹೇಳಿಕೊಡಲಾಯಿತು.

ನಿಲ್ದಾಣಕ್ಕೆ ಬಂದ ಪ್ರಯಾಣಿಕರಿಗೆ ನಂತರ ಶಾಕ್ ನೀಡಿದ ಮೆಟ್ರೋ ಅಧಿಕಾರಿಗಳು ಇದು ಮೆಟ್ರೋ ನಡೆಸಿದ ಅಣುಕ ಕಾರ್ಯಾಚರಣೆ ಎಂದು ಹೇಳಿದು. ತುರ್ತು ಸಂದರ್ಭ ಬಂದಾಗ ಸಮಸ್ಯೆಯ್ನು ಹೇಗೆ ಬಗೆಹರಿಸಿಕೊಳ್ಳಬೇಕೆಂಬ ತರಬೇತಿಯನ್ನು ನಮ್ಮ ಮೆಟ್ರೋ ಸಿಬ್ಬಂದಿಗೆ ಹಾಗೂ ಪ್ರಯಾಣಿಕರಿಗೆ ನೀಡಲಾಗಿದೆ.

ಬೈಯ್ಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಮಾರ್ಗದಲ್ಲಿ ತೆರಳುವ ಮೆಟ್ರೋ ರೈಲಿನಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಬೆಳಿಗ್ಗೆ ಸುಮಾರು 11.28 ಗಂಟೆಗೆ ಪ್ರಯಾಣಿಕರಿಗೆ ಶಾಕ್ ನೀಡಿಲಾಯಿತು. ಈ ವೇಳೆ ತುರ್ತು ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಹಾಗೂ ಪ್ರಯಾಣಿಕರು ಅಪಾಯದಿಂದ ಹೇಗೆ ಪಾರಾಗಬೇಕೆಂಬುದನ್ನು ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಹೇಳಿಕೊಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com