ಬೆಂಗಳೂರು: 283 ಕೋಟಿ ರೂಪಾಯಿ ಭಾರೀ ಮೊತ್ತದ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಾನ್ಯತಾ ಟೆಕ್ ಪಾರ್ಕ್ ಚರಾಸ್ತಿ ಜಪ್ತಿ ಮಾಡಲು ಬಿಬಿಎಂಪಿ ವಾರಂಟ್ ಜಾರಿ ಮಾಡಿದೆ.
ಬಡ್ಡಿ ಮತ್ತು ದಂಡ ಸೇರಿ ಮಾನ್ಯತಾ ಟೆಕ್ ಪಾರ್ಕ್ 283 ಕೋಟಿ ರೂಪಾಯಿ ಪಾವತಿಸಲು ಬಾಕಿ ಇದೆ, ತೆರಿಗೆ ಪಾವತಿಸಲು ಈಗಾಗಲೇ 4 ನೋಟಿಸ್ ಜಾರಿ ಮಾಡಿದ್ದರೂ ಮಾನ್ಯತಾ ಟೆಕ್ ಪಾರ್ಕ್ ಯಾವುದೇ ಉತ್ತರ ನೀಡಿರಲಿಲ್ಲವಾಗಿತ್ತು.
ಇದೀಗ ತೆರಿಗೆ ವಸೂಲಿಗೆ ಮುಂದಾಗಿರುವ ಬಿಬಿಎಂಪಿ ಮಾನ್ಯತಾ ಟೆಕ್ ಪಾರ್ಕ್ ಆಸ್ತಿ ಜಪ್ತಿಗೆ ವಾರಂಟ್ ಹೊರಡಿಸಿದ್ದು, ಬಿಬಿಎಂಪಿ ಅಧಿಕಾರಿಗಳು, ಪೊಲೀಸರ ನೆರವಿನೊಂದಿಗೆ ಆಸ್ತಿ ಜಪ್ತಿ ಮಾಡಲು ಮುಂದಾಗಿದ್ದಾರೆ.
Advertisement