ಕಟೀಲು ಅಪ್ಪು ಪೈ ಉಪನ್ಯಾಸದಲ್ಲಿ ಭಾಗಿಯಾಗಲಿರುವ ಅಣ್ಣಾ ಹಜಾರೆ
ಶಿವಮೊಗ್ಗ: ಕಟೀಲು ಅಪ್ಪು ಪೈ ಸ್ಮರಣಾ ವಾರ್ಷಿಕ ಉಪನ್ಯಾಸದಲ್ಲಿ ಸಾಮಾಜಿಕ ಹೋರಾಟಗಾರರಾದ ಅಣ್ಣಾ ಹಜಾರೆಯವರು ಭಾಗಿಯಾಗಲಿದ್ದಾರೆಂದು ತಿಳಿದುಬಂದಿದೆ.
ಈ ಕುರಿತಂತೆ ಮಾತನಾಡಿರುವ ಮಾನಸ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಎ. ಅಶೋಕ ಪೈ ಅವರು, ಕಟೀಲು ಅಪ್ಪು ಪೈ ಸ್ಮರಣಾ ವಾರ್ಷಿಕ ಉಪನ್ಯಾಸವನ್ನು ಇದೇ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮಕ್ಕೆ ಆಗಮಿಸುವಂತೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರಿಗೆ ಆಹ್ವಾನ ನೀಡಲಾಗಿತ್ತು. ಈ ಆಹ್ವಾನವನ್ನು ಅಣ್ಣಾ ಹಜಾರೆಯವರು ಸ್ವೀಕರಿಸಿದ್ದು, ಉಪನ್ಯಾಸ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆಂದು ಹೇಳಿದ್ದಾರೆ.
ಪ್ರಸ್ತುತ ಅಣ್ಣಾ ಹಜಾರೆಯವರು ಆರೋಗ್ಯ ಸ್ಥಿತಿ ಸರಿಯಲ್ಲದ ಕಾರಣ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮದಲ್ಲಿ ಅಣ್ಣಾ ಹಜಾರೆಯವರಿಗೆ, ಮನವಶ್ರೀ ರಾಷ್ಟ್ರೀಯ ಪ್ರಶಸ್ತಿ ಹಾಗೂ ರು.2 ಲಕ್ಷ ನಗರು ಬಹುಮಾನವನ್ನು ನೀಡಿ ಗೌರವಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ