ಶಾಸಕರ ಭವನದ ಮುಂದೆ ನಡುರಸ್ತೆಯಲ್ಲೇ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಮಾಜಿ ಶಾಸಕ

ಬಿಜೆಪಿಯ ಮಾಜಿ ಶಾಸಕರೊಬ್ಬರು ಶಾಸಕರ ಭವನದ ಮುಂದೆ ನಡುರಸ್ತೆಯಲ್ಲೇ ಪತ್ನಿ ಮೇಲೆ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಕುಮಾರಸ್ವಾಮಿ - ಸವಿತಾ
ಕುಮಾರಸ್ವಾಮಿ - ಸವಿತಾ
Updated on
ಬೆಂಗಳೂರು: ಬಿಜೆಪಿಯ ಮಾಜಿ ಶಾಸಕರೊಬ್ಬರು ಶಾಸಕರ ಭವನದ ಮುಂದೆ ನಡುರಸ್ತೆಯಲ್ಲೇ ಪತ್ನಿ ಮೇಲೆ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಮನೆಗೆ ಬನ್ನಿ ಅಂತ ಕರೆಯಲು ಬಂದಿದ್ದ ತಮ್ಮ ಪತ್ನಿ ಸವಿತಾ ಅವರಿಗೆ ನಡುರಸ್ತೆಯಲ್ಲೇ ಥಳಿಸಿ ರಂಪಾಟ ಮಾಡಿದ್ದಾರೆ. 
ಕಳೆದ ಆರು ತಿಂಗಳಿಂದ ಮನೆಗೆ ಬಾರದ ಕುಮಾರಸ್ವಾಮಿಯನ್ನು ಪತ್ನಿ ಮನೆಗೆ ಕರೆಯಲು ಶಾಸಕರ ಭವನಕ್ಕೆ ಆಗಮಿಸಿದ್ದರು. ಇದರಿಂದ ಆಕ್ರೋಶಗೊಂಡ ಮಾಜಿ ಶಾಸಕ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. 
ಕೂಡಲೇ ಸ್ಥಳಕ್ಕೆ ಆಗಮಿಸಿದ ಶಾಸಕರ ಭವನ ಪೊಲೀಸ್ ಠಾಣೆ ಪೊಲೀಸರು ಪತಿ, ಪತ್ನಿ ಇಬ್ಬರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಪತ್ನಿ ಸವಿತಾ, ನನ್ನ ಪತಿ ಏನೇ ಆಗಿದ್ದರೂ ಸಹಿಸಿಕೊಳ್ಳಲು ನಾನು ಸಿದ್ಧ. ನನಗೆ ಗಂಡ ಬೇಕು. ನಾನು ಅವರ ವಿರುದ್ಧ ದೂರು ದಾಖಲಿಸಲ್ಲ ಆದರೆ ಅವರನ್ನು ಮನೆಗೆ ಕರೆದೊಯ್ಯಲು ಸಹಕರಿಸಿ ಎಂದು ಮನವಿ ಮಾಡಿದ್ದಾರೆ. 
ಇದೇ ವೇಳೆ ಪತಿಯ ಅನೈತಿಕ ಸಂಬಂಧದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸವಿತಾ, ನನ್ನ ಪತಿ ಕೆಲವರ ಜೊತೆ ಅನೈತಿಕ ಸಂಬಂಧವಿದ್ದು, ಅನೈತಿಕ ಸಂಬಂಧ ಇರಿಸಿಕೊಂಡವರ ಮನೆಯ ಮುಂದೆ ಧರಣಿ ಮಾಡುವುದಾಗಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com