ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ (ಸಂಗ್ರಹ ಚಿತ್ರ)
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ (ಸಂಗ್ರಹ ಚಿತ್ರ)

ಸಾಮೂಹಿಕ ನಕಲು ಬಹಿರಂಗಗೊಳಿಸಿದ ಅಧಿಕಾರಿ ವಿರುದ್ಧ ಇದೆಂಥಾ ಕ್ರಮ?

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ನಡೆಸಲಾಗಿದ್ದ ಸಾಮೂಹಿಕ ನಕಲನ್ನು ಬಯಲಿಗೆಳೆದಿದ್ದ ಸ್ಕ್ವಾಡ್ ವಿರುದ್ಧವೇ ವಿವಿ ಕ್ರಮ ಕೈಗೊಂಡಿರುವುದು ಇದೀಗ ಬೆಳಕಿಗೆ ಬಂದಿದೆ...

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ನಡೆಸಲಾಗಿದ್ದ ಸಾಮೂಹಿಕ ನಕಲನ್ನು ಬಯಲಿಗೆಳೆದಿದ್ದ ಸ್ಕ್ವಾಡ್ ವಿರುದ್ಧವೇ ವಿವಿ ಕ್ರಮ ಕೈಗೊಂಡಿರುವುದು ಇದೀಗ ಬೆಳಕಿಗೆ ಬಂದಿದೆ.

ರಾಜ್ಯದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ದಂತ ವೈದ್ಯಕೀಯ ಕಾಲೇಜಿನ ಪರೀಕ್ಷೆಯೊಂದರಲ್ಲಿ ನಡೆಯುತ್ತಿದ್ದ ಸಾಮೂಹಿಕ ನಕಲನ್ನು ಪರೀಕ್ಷಾ ಕೊಠಡಿಗೆ ಸ್ಕ್ವಾಡ್ ಆಗಿ ಹೋಗಿದ್ದ ಡಾ.ಕಿರಣ್ ಕುಮಾರ್ ಅವರು ಬಯಲಿಗೆ ತಂದಿದ್ದರು. ಇದೀಗ ಈ ಸ್ಕ್ವಾಡ್ ವಿರುದ್ಧ ವಿವಿ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ರಮ ಪ್ರಶ್ನಿಸಿ ವಿವಿ ಕುಲಪತಿಯವರಿಗೆ ಕಿರಣ್ ಕುಮಾರ್ ಅವರು ಬರೆದಿರುವ ಪತ್ರವೊಂದು ಇದೀಗ ಬಹಿರಂಗಗೊಂಡಿದ್ದು, ಪತ್ರದಿಂದ ಕಿರಣ್ ಕುಮಾರ್ ವಿರುದ್ಧ ವಿವಿ ತೆಗೆದುಕೊಂಡಿರುವ ಕ್ರಮ ಬಯಲಾಗಿದೆ.

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ನಾನು ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳನ್ನು ಪರಿಶೀಲನೆ ನಡೆಸುವ ಸ್ಕ್ವಾಡ್ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. ದಂತ ವೈದ್ಯಕೀಯ ಕಾಲೇಜಿನಲ್ಲಿ ಜೂನ್. 21 ರಂದು ನಡೆದ ಪರೀಕ್ಷೆಯಲ್ಲಿ ವಿದ್ಯಾರ್ತಥಿಗಳು ಸಾಮೂಹಿಕ ನಕಲಿ ಮಾಡುತ್ತಿದ್ದುದ್ದನ್ನು ಸಾಕ್ಷಿ ಸಮೇತವಾಗಿ ತೋರಿಸಿದ್ದೇನೆ ಎಂದು ಪತ್ರದಲ್ಲಿ ರವಿಕುಮಾರ್ ಅವರು ಹೇಳಿದ್ದಾರೆ.

ಇದೀಗ ವಿವಿ ನನ್ನನ್ನು ಸ್ಕ್ವಾಡ್ ನಿಂದ ತೆಗೆದುಹಾಕಿರುವುದಾಗಿ ಹೇಳಿದೆ. ಅಲ್ಲದೆ, ಯಾವುದೇ ಕಾಲೇಜುಗಳಿಗು ಸ್ಕ್ವಾಡ್ ಆಗಿ ಹೋಗದಂತೆ ತಿಳಿಸಿದ್ದು, ಪ್ರಸ್ತುತ ಬೆಂಗಳೂರಿನ ಜಿಡಿಸಿಯಲ್ಲಿ ಕುಳಿತುಕೊಂಡಿದ್ದೇನೆ. ನಾನು ತಪಾಸಣೆ ನಡೆಸುವ ಸ್ಕ್ವಾಡ್ ಆಗಿದ್ದೇನೋ ಅಥವಾ ಸುಮ್ಮನೆ ಕುಳಿತುಕೊಳ್ಳುವ ಸ್ಕ್ವಾಡ್ ಆಗಿದ್ದೇನೋ ಎಂಬುದರ ಬಗ್ಗೆ ನನಗೆ ಗೊಂದಲ ಆರಂಭವಾಗಿದೆ.

ತಪಾಸಣೆ ವೇಳೆ ಪರೀಕ್ಷಾ ಕೊಠಡಿಗಳಲ್ಲಿ ಯಾವುದೇ ರೀತಿಯ ನಕಲು ಅಥವಾ ಇನ್ನಿತರೆ ಬೆಳವಣಿಗೆಗಳು ಕಂಡುಬಂದರೆ ಮಾಧ್ಯಮಕ್ಕೆ ತಿಳಿಸುವಂತೆ ತನಿಖಾ ಸಮಿತಿ ನನಗೆ ಸೂಚನೆ ನೀಡಿತ್ತು. ಇದೀಗ ನನ್ನ ವಿರುದ್ಧವೇ ತಪ್ಪು ವರದಿಗಳನ್ನು ಸಲ್ಲಿಸಲಾಗಿದೆ. ವೈಯಕ್ತಿಕವಾಗಿ ಭೇಟಿಯಾಗುವ ಉದ್ದೇಶವಿಲ್ಲ. ಹೀಗಾಗಿ ಸ್ಕ್ವಾಡ್ ಸದಸ್ಯ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ಹೇಳಿಕೊಂಡಿದ್ದಾರೆ.

ಪತ್ರದ ಕುರಿತಂತೆ ಮಾತನಾಡಿರುವ ವಿವಿಯ ಉಪಕುಲಪತಿ ಡಾ.ರವೀಂದ್ರನಾಥ್ ಅವರು, ತನಿಖಾ ಸಮಿತಿ ಪ್ರಕರಣ ಸಂಬಂಧ ವರದಿಯನ್ನು ಸಲ್ಲಿಸಿದೆ. ವರದಿಯಲ್ಲಿ ರವಿಕುಮಾರ್ ಅವರೇ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಾನು ಅರ್ಥಮಾಡಿಕೊಂಡಿದ್ದು ತಪ್ಪಾಗಿತ್ತು, ಪರೀಕ್ಷಾ ಕೊಠಡಿಯಲ್ಲಿ ಯಾವುದೇ ಸಾಮೂಹಿಕ ನಕಲು ನಡೆಯುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಯಾವುದೇ ಕಾಲೇಜು ಅಥವಾ ಯಾವುದೇ ವ್ಯಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ನಾನು ಹುದ್ದೆಯಲ್ಲಿಲ್ಲ. ಒಂದು ವೇಳೆ ಪರೀಕ್ಷಾ ಕೊಠಡಿಯಲ್ಲಿ ಅಕ್ರಮಗಳು ನಡೆದಿದ್ದೇ ಆಗಿದ್ದರೆ, ಸ್ವತಃ ನಾನೇ ಪರೀಕ್ಷೆಯನ್ನು ರದ್ದು ಮಾಡುತ್ತಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com