ಕಲಬುರ್ಗಿ ನರ್ಸಿಂಗ್ ಕಾಲೇಜಿನಲ್ಲಿ ರ‍್ಯಾಗಿಂಗ್ ನಡೆದಿಲ್ಲ: ತನಿಖಾ ಸಮಿತಿ

ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಕಲಬುರ್ಗಿ ನರ್ಸಿಂಗ್ ಕಾಲೇಜು ಪ್ರಕರಣದಲ್ಲಿ ಯಾವುದೇ ರೀತಿಯ ರ‍್ಯಾಗಿಂಗ್ ನಡೆದಿಲ್ಲ ಎಂದು ತನಿಖಾ ಸಮಿತಿ ಮಂಗಳವಾರ...
ಘಟನೆ ನಡೆದ ಕಲಬುರ್ಗಿಯ ನರ್ಸಿಂಗ್ ಕಾಲೇಜು
ಘಟನೆ ನಡೆದ ಕಲಬುರ್ಗಿಯ ನರ್ಸಿಂಗ್ ಕಾಲೇಜು

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಕಲಬುರ್ಗಿ ನರ್ಸಿಂಗ್ ಕಾಲೇಜು ಪ್ರಕರಣದಲ್ಲಿ ಯಾವುದೇ ರೀತಿಯ ರ‍್ಯಾಗಿಂಗ್ ನಡೆದಿಲ್ಲ ಎಂದು ತನಿಖಾ ಸಮಿತಿ ಮಂಗಳವಾರ ಸ್ಪಷ್ಟಪಡಿಸಿದೆ.

ಹಿರಿಯ ವಿದ್ಯಾರ್ಥಿನಿಯರು ಟಾಯ್ಲೆಟ್ ಕುಡಿಸಿ ರ‍್ಯಾಗಿಂಗ್ ಮಾಡಿದ್ದರು ಎಂದು ಹೇಳಿ ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬಳು ಆರೋಪ ಮಾಡಿದ್ದಳು. ಪ್ರಕರಣ ಸಂಬಂಧ ತನಿಖೆ ನಡೆಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ತನಿಖಾ ಸಮಿತಿಯೊಂದನ್ನು ನಿಯೋಜಿಸಿತ್ತು.

ಇದರಂತೆ ತನಿಖೆ ನಡೆಸಿರುವ ವಿಶೇಷ ತನಿಖಾ ಸಮಿತಿ ಇದೀಗ ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿ ಕಾಲೇಜಿನಲ್ಲಾಗಲಿ ಅಥವಾ ಹಾಸ್ಟೆಲ್ ನಲ್ಲಾಗಲಿ ವಿದ್ಯಾರ್ಥಿನಿಗೆ ಯಾವುದೇ ರೀತಿಯ ರ‍್ಯಾಗಿಂಗ್ ನಡೆದಿಲ್ಲ ಎಂದು ಹೇಳಿದೆ.

ಕೇರಳ ಮೂಲದ ಕೆ.ಪಿ. ಅಶ್ವತಿ ಎಂಬ ವಿದ್ಯಾರ್ಥಿನಿ ಕೋಝಿಕೋಡ್ ನಲ್ಲಿ ರ‍್ಯಾಗಿಂಗ್ ಪ್ರಕರಣವೊಂದನ್ನು ದಾಖಲಿಸಿದ್ದಳು. ಕೇರಳದ ಮೂಲದ ಎಲ್ಲಾ ಹಿರಿಯ ವಿದ್ಯಾರ್ಥಿನಿಯರು ರ‍್ಯಾಗಿಂಗ್ ಮಾಡಿದ್ದು, ಮೇ.9 ರಂದು ಬಲವಂತದಿಂದ ಟಾಯ್ಲೆಟ್ ಕ್ಲೀನರ್ ನ್ನು ಕುಡಿಸಿದ್ದರು ಎಂದು ಹೇಳಿಕೊಂಡಿದ್ದಳು. ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದ ಕೇರಳ ಪೊಲೀಸರು ಪ್ರಕರಣವನ್ನು ಕಲಬುರ್ಗಿ ಪೊಲೀಸರಿಗೆ ರವಾನಿಸಿದ್ದರು. ಪ್ರಕರಣ ಸಂಬಂಧ ಕಲಬುರ್ಗಿ ಪೊಲೀಸರು ಮೂವರು ಯುವತಿಯರನ್ನು ಬಂಧನಕ್ಕೊಳಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com