
ಮಂಡ್ಯ: ಹುಚ್ಚುನಾಯಿ ದಾಳಿಯಿಂದ ಮಕ್ಕಳು. ಮಹಿಳೆಯರು ಸೇರಿ ಸುಮಾರು 25 ಮಂದಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಅಗ್ರಹಾರ ಬಾಚಹಳ್ಳಿಯಲ್ಲಿ ನಡೆದಿದೆ.
ಕೇವಲ ಮನುಷ್ಯರ ಮೇಲೆ ಮಾತ್ರವಲ್ಲದೇ ದನ ಕುರಿಗಳನ್ನು ಈ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿದೆ. ಹುಚ್ಚು ನಾಯಿಯ ಹಾವಳಿಯಿಂದ ಗ್ರಾಮದಲ್ಲಿ ಭಯಭೀತ ವಾತಾವರಣ ನಿರ್ಮಾಣವಾಗಿದೆ.
ಹುಚ್ಚುನಾಯಿ ಕಡಿತಕ್ಕೊಳಗಾದವರಿಗೆ ತಾಲೂಕು ಆಸ್ಪತ್ರೆ ಮತ್ತು ಮೈಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆ.ಆರ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement