• Tag results for ದಾಳಿ

ಬಾಲಿವುಡ್ ನಟಿ ಕಂಗನಾ ರಣಾವತ್ ಮನೆಯ ಬಳಿ ಗುಂಡಿನ ಸದ್ದು!

ಬಾಲಿವುಡ್ ನಟಿ ಕಂಗನಾ ರಣಾವತ್ ಮನೆ ಬಳಿ ದುಷ್ಕರ್ಮಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

published on : 1st August 2020

ರಾಮಮಂದಿರ ಶಿಲಾನ್ಯಾಸದ ವೇಳೆ ಅಯೋಧ್ಯೆಯಲ್ಲಿ ದಾಳಿಗೆ ಉಗ್ರರ ಸಂಚು; ಉಗ್ರರಿಗೆ ಐಎಸ್ಐ ತರಬೇತಿ: ಗುಪ್ತಚರ ಇಲಾಖೆ

ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಆಗಸ್ಟ್ 5ರಂದು ನಡೆಯಲಿರುವ ಶಿಲಾನ್ಯಾಸದ ಕಾರ್ಯಕ್ರಮದ ವೇಳೆ ದಾಳಿ ನಡೆಸಲು ಉಗ್ರರು ಸಂಚು ನಡೆಸಿದ್ದು ಉಗ್ರರಿಗೆ ಐಎಸ್ಐ ತರಬೇತಿ ನೀಡುತ್ತಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. 

published on : 29th July 2020

ಮತ್ತೆ ಚೀನಾ ಆ್ಯಪ್ ನಿಷೇಧಿಸಿದ ಭಾರತದ ವಿರುದ್ಧ ಚೀನಾ ರಾಯಭಾರಿ ವಾಗ್ದಾಳಿ!

ಮತ್ತೆ ಚೀನಾ ಆ್ಯಪ್ ಬ್ಯಾನ್ ಮಾಡಿರುವ ಭಾರತದ ಕ್ರಮವನ್ನು ತೀವ್ರವಾಗಿ ಟೀಕಿಸಿರುವ ಭಾರತದಲ್ಲಿನ ಚೀನಾ ರಾಯಭಾರಿ, ಚೀನಾ ವ್ಯವಹಾರ ಸೇರಿದಂತೆ ಭಾರತದಲ್ಲಿನ ಅಂತಾರಾಷ್ಟ್ರೀಯ ಹೂಡಿಕೆದಾರರ ಹಿತಾಸಕ್ತಿ ಮತ್ತು ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸಬೇಕಾದದ್ದು ಭಾರತ ಸರ್ಕಾರದ ಜವಾಬ್ದಾರಿಯಾಗಿದೆ ಎಂದಿದ್ದಾರೆ.

published on : 28th July 2020

ಪಾಕ್'ನಲ್ಲಿ ಘರ್ಷಣೆ: 5 ಪೊಲೀಸರು ಸೇರಿ 7 ಮಂದಿ ಸಾವು

ಉತ್ತರ ಪಾಕಿಸ್ತಾನದ ಗಿಲ್ಗಿಟ್-ಬಲ್ತಿಸ್ತಾನ್ ಪ್ರದೇಶದ ಡೈಮರ್ ಜಿಲ್ಲೆಯಲ್ಲಿ ಪೊಲೀಸರು ಮತ್ತು ಜೈಲಿನಿಂದ ತಪ್ಪಿಸಿಕೊಂಡಿದ್ದವರ ನಡೆದ ಸಶಸ್ತ್ರ ಘರ್ಷಣೆಯಲ್ಲಿ ಐವರು ಪೊಲೀಸರು ಮತ್ತು ಇಬ್ಬರು ನಾಗರಿಕರು ಸೇರಿದಂತೆ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

published on : 28th July 2020

ಅಮೆರಿಕ: 2008ರ ಮುಂಬೈ ದಾಳಿ ಸಂಚುಕೋರ ಉಗ್ರ ರಾಣಾ ಜಾಮೀನು ಅರ್ಜಿ ವಜಾ

2008ರ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಬಂಧನಕ್ಕೀಡಾಗಿರುವ ದಾಳಿ ಪ್ರಕರಣದ ಪ್ರಧಾನ ಸಂಚುಕೋರರಲ್ಲಿ ಒಬ್ಬನಾಗಿರುವ ಉದ್ಯಮಿ ತಹವ್ವೂರ್ ರಾಣಾನ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

published on : 25th July 2020

ನನ್ನ ನಿಷ್ಠೆ ಕಾಂಗ್ರೆಸ್ ಸಿದ್ಧಾಂತಕ್ಕೆ, ಯಾವುದೇ ವ್ಯಕ್ತಿ, ಕುಟುಂಬಕ್ಕೆ ಅಲ್ಲ: ಗಾಂಧಿ ಕುಟುಂಬದ ವಿರುದ್ಧ ಸಂಜಯ್ ಜಾ ವಾಗ್ದಾಳಿ

ನನ್ನ ನಿಷ್ಠೆ ಕಾಂಗ್ರೆಸ್ ಸಿದ್ಧಾಂತಕ್ಕೆ, ಯಾವುದೇ ವ್ಯಕ್ತಿ ಅಥವಾ ಕುಟುಂಬಕ್ಕೆ ಅಲ್ಲ ಎಂದು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕಾಂಗ್ರೆಸ್ ನಿಂದ ಉಚ್ಟಾಟನೆಗೊಂಡಿರುವ ಸಂಜಯ್ ಜಾ ಅವರು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

published on : 15th July 2020

ರಾಜಸ್ಥಾನ ಸರ್ಕಾರದ ಬಿಕ್ಕಟ್ಟು Live Updates: ಇತ್ತ ಸಿಎಲ್ ಪಿ ಸಭೆ, ಅತ್ತ ಕಾಂಗ್ರೆಸ್ ನಾಯಕರಿಗೆ ಐಟಿ ದಾಳಿಯ ಶಾಕ್! 

ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟ ಜು.13 ರಂದು ಹೊಸ ತಿರುವು ಪಡೆದುಕೊಂಡಿದ್ದು ಕಾಂಗ್ರೆಸ್ ನಾಯಕರ ಮನೆ ಐಟಿ ದಾಳಿ ನಡೆದಿದೆ. ಐಟಿ ದಾಳಿಯ ನಡುವೆಯೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಿಎಲ್ ಪಿ ಸಭೆ ನಡೆಸುತ್ತಿದ್ದಾರೆ.

published on : 13th July 2020

ತುಮಕೂರು: 4 ವರ್ಷದ ಮಗು ಕೊಂದ ಚಿರತೆ; ಆರೇ ತಿಂಗಳಲ್ಲಿ ಮೂರನೇ ಘಟನೆ

ತುಮಕೂರಿನಲ್ಲಿ ಹುಳಿ ದಾಳಿ ಪ್ರಕರಣ ಮುಂದುವರೆದಿದ್ದು, ಇಂದು ನಾಲ್ಕು ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿರುವ ಘಟನೆ ವರದಿಯಾಗಿದೆ.

published on : 11th July 2020

ಪುಲ್ವಾಮಾ ದಾಳಿ ಪ್ರಕರಣ: ಎನ್‍ಐಎನಿಂದ  7ನೇ ಆರೋಪಿ ಬಂಧನ

2019ರ ಫೆಬ್ರವರಿ 14ರಂದು 40 ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹತ್ಯೆಗೈದ ಪುಲ್ವಾಮಾ ದಾಳಿ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ತಿಳಿಸಿದೆ.

published on : 7th July 2020

ಜಮ್ಮು-ಕಾಶ್ಮೀರ: ಸೊಪೋರ್ ನಲ್ಲಿ ಉಗ್ರರ ದಾಳಿಯಲ್ಲಿ ನಲುಗಲಿದ್ದ 3 ವರ್ಷದ ಬಾಲಕನನ್ನು ರಕ್ಷಿಸಿದ ವೀರ ಯೋಧರು!

ಜಮ್ಮು ಮತ್ತು ಕಾಶ್ಮೀರದ ಸೊಪೋರ್ ನಲ್ಲಿ ಉಗ್ರರ ದಾಳಿಯಲ್ಲಿ ನಲುಗಿ ಹೋಗಲಿದ್ದ 3 ವರ್ಷದ ಬಾಲಕನನ್ನು ಭಾರತೀಯ ಸೇನಾಪಡೆಯ ವೀರ ಯೋಧರು ರಕ್ಷಣೆ ಮಾಡಿದ್ದಾರೆ. 

published on : 1st July 2020

ಸೊಪೋರ್'ನಲ್ಲಿ ಉಗ್ರರ ದಾಳಿ: ಓರ್ವ ಸಿಆರ್'ಪಿಎಫ್ ಯೋಧ ಹುತಾತ್ಮ, ಮತ್ತೋರ್ವ ನಾಗರೀಕ ಸಾವು, 2 ಯೋಧರ ಸ್ಥಿತಿ ಗಂಭೀರ

ಜಮ್ಮು ಮತ್ತು ಕಾಶ್ಮೀರದ ಸೊಪೋರ್'ನಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಸಿಆರ್'ಪಿಎಫ್ ಯೋಧ ಹುತಾತ್ಮರಾಗಿದ್ದು, ಮತ್ತೋರ್ವ ನಾಗರೀಕ ಸಾವನ್ನಪ್ಪಿದ್ದಾರೆಂದು ಬುಧವಾರ ತಿಳಿದುಬಂದಿದೆ.

published on : 1st July 2020

ಪಾಕ್ ಸ್ಟಾಕ್ ಎಕ್ಸ್ ಚೇಂಜ್ ಮೇಲಿನ ದಾಳಿಯಲ್ಲಿ ಭಾರತದ ಕೈವಾಡ: ಪ್ರಧಾನಿ ಇಮ್ರಾನ್ ಖಾನ್ ಆರೋಪ

ದೇಶದ ಅತಿದೊಡ್ಡ ನಗರ ಕರಾಚಿಯಲ್ಲಿ ಪಾಕಿಸ್ತಾನ ಸ್ಟಾಕ್ ಎಕ್ಸ್ಚೇಂಜ್ (ಪಿಎಸ್ಎಕ್ಸ್) ಮೇಲೆ ಇತ್ತೀಚೆಗೆ ನಡೆದ ದಾಳಿಗೆ ಭಾರತವೇ ಕಾರಣ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಹೇಳಿದ್ದಾರೆ.

published on : 30th June 2020

ವಾಲ್ಮಾರ್ಟ್ ವಿತರಣಾ ಕೇಂದ್ರದಲ್ಲಿ ಗುಂಡಿನ ದಾಳಿ: ಇಬ್ಬರ ಸಾವು, 4 ಮಂದಿ ಗಾಯ

ಕ್ಯಾಲಿಫೋರ್ನಿಯಾದ ರೆಡ್ ಬ್ಲಫ್‌ನಲ್ಲಿರುವ ವಾಲ್‌ಮಾರ್ಟ್ ವಿತರಣಾ ಕೇಂದ್ರದಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಇತರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

published on : 28th June 2020

ಭಾರತಕ್ಕೆ ಮುಂಬೈ ದಾಳಿ ರೂವಾರಿ ಡೇವಿಡ್ ಹೆಡ್ಲಿ ಹಸ್ತಾಂತರವಿಲ್ಲ, ಸದ್ಯದಲ್ಲೇ ರಾಣಾ ವಿಚಾರಣೆ: ಅಮೆರಿಕ

ಮುಂಬೈ ದಾಳಿ ರೂವಾರಿ ಡೇವಿಡ್ ಹೆಡ್ಲಿಯನ್ನು ಸದ್ಯಕ್ಕೆ ಭಾರತಕ್ಕೆ ಹಸ್ತಾಂತರ ಮಾಡಲು ಸಾಧ್ಯವಿಲ್ಲ. ಅಮೆರಿಕದಲ್ಲೇ ಅತನ ವಿಚಾರಣೆ ನಡೆಯಲಿದೆ ಎಂದು ಅಮೆರಿಕ ಸರ್ಕಾರ ಸ್ಪಷ್ಟಪಡಿಸಿದೆ.

published on : 27th June 2020

ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಮನೆ ಮೇಲೆ ಇಡಿ ದಾಳಿ

ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ ಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಅಹ್ಮದ್ ಪಟೇಲ್ ಮನೆ ಮೇಲೆ ಇಡಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

published on : 27th June 2020
1 2 3 4 5 6 >