ದೊಡ್ಡಬಳ್ಳಾಪುರದಲ್ಲಿ ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದ ಯುವಕರು: ಫಾರ್ಮ್​ಹೌಸ್ ಮೇಲೆ ಪೊಲೀಸರ ದಾಳಿ

ಈ ಪಾರ್ಟಿಯಲ್ಲಿ ಸುಮಾರು 40-50 ಯುವಕರು ಭಾಗವಹಿಸಿದ್ದರು. ಅನುಮತಿ ಪಡೆಯದೆ ಜೋರಾದ ಸಂಗೀತ ಹಾಕಿ ಮೋಜು ಮಸ್ತಿ ಮಾಡುತ್ತಿದ್ದರು.
Raid on party
ಪಾರ್ಟಿ ಮೇಲೆ ದಾಳಿ
Updated on

ದೊಡ್ಡಬಳ್ಳಾಪುರ: ಹೊಸ ವರ್ಷಾಚರಣೆಯನ್ನು ಅಕ್ರಮವಾಗಿ ಸಂಭ್ರಮಿಸುತ್ತಿದ್ದ ಅಡ್ಡಾದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಗ್ಗಡಹಳ್ಳಿಯ ಫಾರ್ಮ್‌ಹೌಸ್ ಒಂದರಲ್ಲಿ ಅನುಮತಿ ಪಡೆಯದೆ ಅಕ್ರಮವಾಗಿ ನಡೆಯುತ್ತಿದ್ದ ಹೊಸ ವರ್ಷಾಚರಣೆಯ ಪಾರ್ಟಿ ಮೇಲೆ ಪೊಲೀಸರು ಮಧ್ಯರಾತ್ರಿ ದಾಳಿ ನಡೆಸಿದ್ದಾರೆ.

ಈ ಪಾರ್ಟಿಯಲ್ಲಿ ಸುಮಾರು 40-50 ಯುವಕರು ಭಾಗವಹಿಸಿದ್ದರು. ಅನುಮತಿ ಪಡೆಯದೆ ಜೋರಾದ ಸಂಗೀತ ಹಾಕಿ ಮೋಜು ಮಸ್ತಿ ಮಾಡುತ್ತಿದ್ದರು.

Raid on party
'ಭಾರತದ ಅತಿದೊಡ್ಡ ಪರಾರಿ ಅಪರಾಧಿಗಳು': ವಿಜಯ್ ಮಲ್ಯ ಜೊತೆಗಿನ ಬರ್ತ್ ಡೇ ಪಾರ್ಟಿ ವಿಡಿಯೋ ಹಂಚಿಕೊಂಡ ಲಲಿತ್ ಮೋದಿ!

ಅತಿಯಾದ ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಾದಿಕ್ ಪಾಷಾ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಪೊಲೀಸರು ಪಾರ್ಟಿಗೆ ಬ್ರೇಕ್ ಹಾಕಿ, ಸ್ಥಳದಲ್ಲಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಫಾರ್ಮ್‌ಹೌಸ್ ಮಾಲೀಕ ಮತ್ತು ಪಾರ್ಟಿ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com