ಬೆಂವಿವಿಯಿಂದ ಸಿದ್ದರಾಮಯ್ಯಗೆ ಗೌರವ ಡಾಕ್ಟರೇಟ್?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡುವ ವಿಚಾರ ಇದೀಗ ಗಂಭೀರವಾಗುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯ ಇದಕ್ಕೆ ಒಪ್ಪಿಗೆ ಸೂಚಿಸುವುದಾಗಿ ಹೇಳಲಾಗುತ್ತಿದೆ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡುವ ವಿಚಾರ ಇದೀಗ ಗಂಭೀರವಾಗುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯ ಇದಕ್ಕೆ ಒಪ್ಪಿಗೆ ಸೂಚಿಸುವುದಾಗಿ ಹೇಳಲಾಗುತ್ತಿದೆ.

ಶನಿವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡುವುದಕ್ಕೆ ಒಪ್ಪಿಗೆ ಸೂಚಿಸಿದ್ದು, ಡಾಕ್ಟರೇಟ್ ಪಡೆಯುವವರ 21 ಮಂದಿಯ  ಹೆಸರುಗಳ ಪೈಕಿ ಸಿದ್ದರಾಮಯ್ಯ ಅವರ ಹೆಸರು ಕೂಡ ಓಡಾಡುತ್ತಿದೆ ಎಂದು ಹೇಳಲಾಗುತ್ತಿದೆ.

ವಿವಿಯ ಗೌರವ ಡಾಕ್ಟರೇಟ್ ಗಾಗಿ ಈ ಬಾರಿ ಬಂದಿದ್ದ ಸುಮಾರು 30 ಅರ್ಜಿಗಳ ಪೈಕಿ ಅಳೆದು ತೂಗಿ 21 ಹೆಸರುಗಳ ಪಟ್ಟಿಯನ್ನು ವಿವಿ ಸಿದ್ಧಪಡಿಸಿತ್ತು. ಇದರಂತೆ ಶನಿವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವನೆಯಾಯಿತಾದರೂ ಈ ಬಗ್ಗೆ ಹಲವು ಚರ್ಚೆಗಳು ನಡೆದು ಅನುಮೋದನೆಗೊಂಡಿರಲಿಲ್ಲ. ಹೀಗಾಗಿ ಈ ವಿಚಾರಕ್ಕೆ ಸಂಬಂಧಿಸಿ ಮಾರ್ಚ್ 8 ಅಥವಾ 9ಕ್ಕೆ ಸಭೆ ನಡೆಸುವುದಾಗಿ ವಿವಿ ನಿರ್ಧಾರ ಕೈಗೊಂಡಿದ್ದು, ಸಭೆಯಲ್ಲಿ ಈ ವಿಚಾರ ಕುರಿತಂತೆ ಅಧಿಕಾರಿಗಳು ಚರ್ಚೆ ನಡೆಯಲಿದ್ದಾರೆಂದು ತಿಳಿದುಬಂದಿದೆ.

ಈ ವಿಚಾರ ಕುರಿತಂತೆ ಮಾತಾಡಿರುವ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಉಪ ಕುಲಪತಿ ಬಿ. ತಿಮ್ಮೇಗೌಡ ಅವರು, ಸಿಂಡಿಕೇಟ್ ಸಭೆಯಲ್ಲಿ ಸಾಕಷ್ಟು ಸದಸ್ಯರು ಸಿದ್ದರಾಮಯ್ಯ ಅವರ ಹೆಸರನ್ನು ತೆಗೆದುಕೊಂಡರು. ವಿರೋಧಗಳ ಸಂಖ್ಯೆ ಕಡಿಮೆ ಇತ್ತು. ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿಯೂ ಸಹ ಸಾಕಷ್ಟು ಮಂದಿ ಸಿದ್ದರಾಮಯ್ಯ ಅವರ ಹೆಸರನ್ನು ತೆಗೆದುಕೊಂಡರು. ಇದರಂತೆ ಸಿದ್ದರಾಮಯ್ಯ ಹೆಸರನ್ನು ಹೇಳಿ ವಿವಿಗೆ ಸಾಕಷ್ಟು ಪತ್ರಗಳು ಬಂದಿದೆ. ಕೆಲವರು ತಮ್ಮ ವೈಯಕ್ತಿಕ ನಿರ್ಧಾರವನ್ನು ವ್ಯಕ್ತಪಡಿಸಿದ್ದರೆ. ಕೆಲವು ಇನ್ನೊಬ್ಬರ ಅಭಿಪ್ರಾಯದಿಂದ ಪ್ರೇರಿತರಾಗಿ ಹೆಸರನ್ನು ಸೂಚಿಸಿದ್ದಾರೆಂದು ಹೇಳಿದ್ದಾರೆ.

ವಿಚಾರ ಸಂಬಂಧ ಈ ವರೆಗೂ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ. ಹೆಸರು ಅಂತಿಮಗೊಳಿಸುವುದಕ್ಕೂ ಮುನ್ನ ಎಲ್ಲಾ ರೀತಿಯ ಆಯಾಮಗಳನ್ನು ಪರಿಶೀಲಿಸಲಾಗುವುದು. ತಿಳಿದುಬಂದಿರುವ ಮಾಹಿತಿಗಳ ಪ್ರಕಾರ ರಾಜ್ಯಪಾಲ ವಜುಭಾಯ್ ಅವರು ಈ ಬಗ್ಗೆ ತಜ್ಞರ ಸಮಿತಿಯನ್ನು ನೇಮಿಸಲು ನಿರ್ಧಾರಕೈಗೊಳ್ಳಲಾಗಿದ್ದು, ತಜ್ಞರ ಸಮಿತಿಯೇ ಈ ಬಗ್ಗೆ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.

ರಾಜಕೀಯ ಗಣ್ಯರಿಗೆ ಡಾಕ್ಟರೇಟ್ ಇಲ್ಲ?
ಮೂಲಗಳ ಪ್ರಕಾರ ಈ ಹಿಂದೆ ಎನ್ ಪ್ರಭುದೇವ್ ಅವರು ಉಪಕುಲಪತಿಗಳಾಗಿದ್ದ ಸಂದರ್ಭದಲ್ಲಿ ರಾಜಕೀಯ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡುವುದಿಲ್ಲ ಎಂದು ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿರುವ ತಿಮ್ಮೇಗೌಡ ಅವರು ಒಂದು ವೇಳೆ ಈ ರೀತಿಯ ನಿರ್ಣಯಗಳೇನಾದರೂ ಇದ್ದಿದ್ದೇ ಆದರೆ, ನಾವು ಮತ್ತೆ ಸದಸ್ಯರ ನಿರ್ಧಾರಗಳನ್ನು ಪಡೆದು ಹೊಸ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com