ಮೇಯರ್ ಸರಿತಾ ಪಾಟೀಲ್ ಹಾಗೂ ಉಪ ಮೇಯರ್ ಸಂಜಯ್ ಶಿಂಧೆ
ರಾಜ್ಯ
ಕನ್ನಡಿಗರ ಕೈತಪ್ಪಿದ ಬೆಳಗಾವಿ ಮಹಾನಗರ ಪಾಲಿಕೆ, ಮೇಯರ್, ಉಪ ಮೇಯರ್ ಸ್ಥಾನಕ್ಕೆ ಎಂಇಎಸ್
ಜಿಲ್ಲೆಯ ಶಾಸಕರು ಹಾಗೂ ಸಂಸದರ ನಿರ್ಲಕ್ಷ್ಯದಿಂದಾಗಿ ಬೆಳಗಾವಿ ಮಹಾನಗರ ಪಾಲಿಕೆ ಕನ್ನಡಿಗರ ಕೈತಪ್ಪಿದ್ದು,...
ಬೆಳಗಾವಿ: ಜಿಲ್ಲೆಯ ಶಾಸಕರು ಹಾಗೂ ಸಂಸದರ ನಿರ್ಲಕ್ಷ್ಯದಿಂದಾಗಿ ಬೆಳಗಾವಿ ಮಹಾನಗರ ಪಾಲಿಕೆ ಕನ್ನಡಿಗರ ಕೈತಪ್ಪಿದ್ದು, ಈ ಬಾರಿಯೂ ಪಾಲಿಕೆ ಗದ್ದುಗೆ ಏರುವಲ್ಲಿ ಎಂಇಎಸ್ ಯಶಸ್ವಿಯಾಗಿದೆ.
ಮೂರನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಇಂದು ನಡೆದೆ ಚುನಾವಣೆಯಲ್ಲಿ ಎಂಇಎಸ್ ನ ಸರಿತಾ ಪಾಟೀಲ್ ಅವರು ಮೇಯರ್ ಆಗಿ ಹಾಗೂ ಸಂಜಯ್ ಶಿಂಧೆ ಅವರು ಉಪ ಮೇಯರ್ ಆಗಿ ಆಯ್ಕೆಯಾದರು.
ಜಿಲ್ಲೆಯಲ್ಲಿ ನಾಲ್ವರು ಶಾಸಕರು ಹಾಗೂ ಇಬ್ಬರು ಸಂಸದರಿದ್ದರೂ ಮೇಯರ್ ಉಪ ಮೇಯರ್ ಚುನಾವಣೆಯಲ್ಲಿ ಭಾಗವಹಿಸಿದ್ದು ಮಾತ್ರ ಕೇವಲು ಒಬ್ಬ ಶಾಸಕರು. ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಫಿರೋಜ್ ಸೇಠ್ ಮಾತ್ರ ಉಪಸ್ಥಿತರಿದ್ದರು. ಇದರಿಂದಾಗಿ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರ ಹಿಡಿಯುವಲ್ಲಿ ಕನ್ನಡಿಗರು ವಿಫಲವಾದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ