ವಿಜಯ್ ಮಲ್ಯ ಬಂಧನಕ್ಕೆ ಕರ್ನಾಟಕ ಹೈಕೋರ್ಟ್ ಮೊರೆ ಹೋದ ಎಸ್ ಬಿಐ

ಉದ್ಯಮಿ ವಿಜಯ್ ಮಲ್ಯ ಅವರನ್ನು ಬಂಧಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ ಹೈಕೋರ್ಟ್ ನ್ನು ಸಂಪರ್ಕಿಸಿದ್ದು...
ಉದ್ಯಮಿ ವಿಜಯ್ ಮಲ್ಯ(ಸಂಗ್ರಹ ಚಿತ್ರ)
ಉದ್ಯಮಿ ವಿಜಯ್ ಮಲ್ಯ(ಸಂಗ್ರಹ ಚಿತ್ರ)

ಬೆಂಗಳೂರು: ಉದ್ಯಮಿ ವಿಜಯ್ ಮಲ್ಯ ಅವರನ್ನು ಬಂಧಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ ಹೈಕೋರ್ಟ್ ನ್ನು ಸಂಪರ್ಕಿಸಿದ್ದು, ಬಹುಕೋಟಿ ರೂಪಾಯಿ ಸಾಲವನ್ನು ಕಟ್ಟದಿರುವುದರಿಂದ ಅವರ ಪಾಸ್ ಪೋರ್ಟ್ ನ್ನು ವಶಪಡಿಸಿಕೊಳ್ಳುವಂತೆ ಕೋರಿದೆ.

ಮಲ್ಯ  ಅವರು ಇತ್ತೀಚೆಗೆ ಕುಟುಂಬದವರ ಜೊತೆ ಬ್ರಿಟನ್ ಗೆ ಹೋಗಿ ನೆಲೆಸುವಂತೆ ಇತ್ತೀಚೆಗೆ ಹೇಳಿಕೆ ನೀಡಿರುವುದರಿಂದ ಅವರ ಪಾಸ್ ಪೋರ್ಟನ್ನು ಮುಟ್ಟುಗೋಲು ಹಾಕಿ ಬಂಧಿಸುವಂತೆ  ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರಿದ್ದ ಏಕಸದಸ್ಯ ಪೀಠದ ಮುಂದೆ ನಾವು ರಿಟ್ ಅರ್ಜಿಯನ್ನು ಸಲ್ಲಿಸಿದ್ದೇವೆ ಎಂದು ಬ್ಯಾಂಕಿನ ಪರ ವಕೀಲರು ತಿಳಿಸಿದ್ದಾರೆ.

ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ವಹಿವಾಟಿನಲ್ಲಿ ಮುಂಚೂಣಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಕಿಂಗ್ ಫಿಶರ್ ವಿಮಾನಯಾನದಿಂದ 7 ಸಾವಿರದ 800 ಕೋಟಿ ರೂಪಾಯಿ ಸಾಲ ಪಾವತಿ ಬಾಕಿಯಿದ್ದು, ಸಾಲ ವಸೂಲಾತಿ ಪ್ರಾಧಿಕಾರ(ಡಿಆರ್ ಟಿ) ತನ್ನ ತೀರ್ಪನ್ನು ಕಾಯ್ದಿರಿಸಿದ್ದ ಹಿನ್ನೆಲೆಯಲ್ಲಿ ಅದು ಹೈಕೋರ್ಟ್ ಮೊರೆ ಹೋಗಿದೆ.

ಮಲ್ಯ ಅವರಿಂದ ಸಾಲ ವಸೂಲಾತಿಗೆ ಸಂಬಂಧಪಟ್ಟಂತೆ ಪ್ರಾಧಿಕಾರಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಾಲ್ಕು ಅರ್ಜಿಗಳನ್ನು ಸಲ್ಲಿಸಿತ್ತು. ಮಲ್ಯ ಅವರು ಭಾರತ ಮತ್ತು ವಿದೇಶದಲ್ಲಿ ಹೊಂದಿರುವ ಆಸ್ತಿಯ ವಿವರ ಬಹಿರಂಗಪಡಿಸಬೇಕು,ನಮ್ಮ 516 ಕೋಟಿ ರೂಪಾಯಿ ಸಾಲವನ್ನು ಮರುಪಾವತಿ ಮಾಡಬೇಕು ಇತ್ಯಾದಿಗಳು ಸೇರಿ ಒಟ್ಟು 4 ಅರ್ಜಿಗಳನ್ನು ಹಾಕಿತ್ತು. ಆದರೆ ಅದು ತನ್ನ ತೀರ್ಪನ್ನು ಬುಧವಾರ ಕಾಯ್ದಿರಿಸಿದ್ದರಿಂದ ವಿಜಯ್ ಮಲ್ಯ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಎಸ್ ಬಿಐ ಹೈಕೋರ್ಟ್ ಮೊರೆ ಹೋಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com