ಹುಬ್ಬಳ್ಳಿ-ಧಾರವಾಡ ಪಾಲಿಕೆ ಮತ್ತೆ ಬಿಜೆಪಿ ವಶ, ಮೇಯರ್, ಉಪ ಮೇಯರ್ ಸ್ಥಾನ ಮಹಿಳೆಯರ ಪಾಲು

ವಿಶ್ವ ಮಹಿಳಾ ದಿನದಂದೆ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಈ ಬಾರಿಯೂ ಎರಡೂ ಸ್ಥಾನಗಳು ಮಹಿಳೆಯರ ಮಡಿಲು ಸೇರಿದ್ದು,...
ನೂತನ ಮೇಯರ್, ಉಪ ಮೇಯರ್ ಗೆ ಅಭಿನಂದನೆ ಸಲ್ಲಿಸುತ್ತಿರುವ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ
ನೂತನ ಮೇಯರ್, ಉಪ ಮೇಯರ್ ಗೆ ಅಭಿನಂದನೆ ಸಲ್ಲಿಸುತ್ತಿರುವ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ವಿಶ್ವ ಮಹಿಳಾ ದಿನದಂದೆ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಈ ಬಾರಿಯೂ ಎರಡೂ ಸ್ಥಾನಗಳು ಮಹಿಳೆಯರ ಮಡಿಲು ಸೇರಿದ್ದು, ಬಿಜೆಪಿಯ ಮಂಜುಳಾ ಅಕ್ಕೂರ ಅವರು ಮೇಯರ್ ಆಗಿ ಹಾಗೂ ಅದೇ ಪಕ್ಷದ ಲಕ್ಷ್ಮಿ ಉಪ್ಪಾರ ಅವರು ಉಪ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತೆ ಬಿಜೆಪಿ ವಶವಾಗಿದೆ. 
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮೇಯರ್ ಸ್ಥಾನಕ್ಕಾಗಿ ಬಿಜೆಪಿಯ ಮಂಜುಳಾ ಅಕ್ಕೂರ ಹಾಗೂ ಜೆಡಿಎಸ್‌ನ ಶ್ರೀಕಾಂತ ಜಮನಾಳ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ಶ್ರೀಕಾಂತ ಜಮನಾಳ ಅವರು ತಮ್ಮ ನಾಮಪತ್ರವನ್ನು ಮಧ್ಯಾಹ್ನ ವಾಪಸ್ ಪಡೆದಿದ್ದರಿಂದ ಮಂಜುಳಾ ಅಕ್ಕೂರ ಅವರು ಅವಿರೋಧವಾಗಿ ಆಯ್ಕೆಯಾದರು.
ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯವರೇ ಆದ ಲಕ್ಷ್ಮಿ ಉಪ್ಪಾರ ನಾಮಪತ್ರ ಸಲ್ಲಿಸಿದರೆ, ನಿಗದಿತ ಸಮಯ ದಾಟಿ 10 ಗಂಟೆಯ ನಂತರ ನಾಮಪತ್ರ ಸಲ್ಲಿಸಲು ಬಂದ ಕಾಂಗ್ರೆಸ್‌ನ ರಬಿಯಾಬಿ ಯಕ್ಕುಂಡಿಯವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ಸ್ವೀಕರಿಸಲಿಲ್ಲ. ಹೀಗಾಗಿ ಕಣದಲ್ಲಿ ಉಳಿದ ಏಕೈಕ ಅಭ್ಯರ್ಥಿಯಾದ ಲಕ್ಷ್ಮಿ ಉಪ್ಪಾರ ಉಪಮಹಾಪೌರರಾಗಿ ಅವಿರೋಧವಾಗಿ ಆಯ್ಕೆಯಾದರು.
ಆಯ್ಕೆಯಾದ ನೂತನ ಮೇಯರ್ ಹಾಗೂ ಉಪ ಮೇಯರ್ ಗೆ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅಭಿನಂದನೆ ಸಲ್ಲಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com