ಉಪಲೋಕಾಯುಕ್ತ ಅಡಿ ಅಧಿಕಾರ ಕುರಿತು ಸ್ಪೀಕರ್ ಪ್ರಶ್ನಿಸುವಂತಿಲ್ಲ: ರಿಜಿಸ್ಟ್ರಾರ್

ಉಪ ಲೋಕಾಯುಕ್ತ ನ್ಯಾ.ಸುಭಾಷ್ ಬಿ.ಅಡಿ ಕರ್ತವ್ಯ ನಿರ್ವಹಿಸುವಂತಿಲ್ಲ ಎಂದು ಸೂಚಿಸುವ ಅಧಿಕಾರ ಸ್ಪೀಕರ್ ಕಾಗೋಡು...
ನ್ಯಾ.ಸುಭಾಷ್ ಬಿ ಅಡಿ
ನ್ಯಾ.ಸುಭಾಷ್ ಬಿ ಅಡಿ
ಬೆಂಗಳೂರು: ಉಪ ಲೋಕಾಯುಕ್ತ ನ್ಯಾ.ಸುಭಾಷ್ ಬಿ.ಅಡಿ ಕರ್ತವ್ಯ ನಿರ್ವಹಿಸುವಂತಿಲ್ಲ ಎಂದು ಸೂಚಿಸುವ ಅಧಿಕಾರ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಇಲ್ಲ ಎಂದು ಲೋಕಾಯುಕ್ತ ರಿಜಿಸ್ಟ್ರಾರ್ ರವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ (ಡಿಪಿಎಆರ್‌) ಪತ್ರ ಬರೆದಿದ್ದಾರೆ.
ಲೋಕಾಯುಕ್ತ ಕಾಯ್ದೆ ಸೆಕ್ಷನ್ 6(14) ಪ್ರಕಾರ ಅಡಿ ಅವರು ರರ್ತ್ವ್ಯ ನಿರ್ವಹಿಸಲು ಅವಕಾಶ ಇಲ್ಲ. ಈ ಸಕ್ಷೆನ್ ಅನ್ನು ಉಲ್ಲೇಖಿಸಿ ಲೋಕಾಯುಕ್ತ ರಿಜಿಸ್ಟ್ರಾರ್ ಗೆ ಮತ್ತೊಮ್ಮೆ ಪತ್ರ ಬರೆಯುವಂತೆ ಡಿಪಿಎಆರ್ ಗೆ ಸೂಚಿಸಲಾಗುವುದು ಎಂದು ಪತ್ರಕರ್ತರಿಗೆ ತಿಳಿಸಿದ್ದರು.
ಆದರೆ, ಇದಕ್ಕೆ ಪ್ರತಿಕ್ರಯಿಸಿರುವ ಲೋಕಾಯುಕ್ತ ರಿಜಿಸ್ಟ್ರಾರ್ ಆರ್ ಎಸ್ ಪಾಟಿಲ್(ಇನ್ ಚಾರ್ಜ್) ಅವರು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನ್ಯಾ.ಅಡಿ ಅವರು ಕಚೇರಿಗೆ ಹಾಜರಾಗಬಹುದು. ಅವರ ತಪ್ಪು ಸಾಬೀತಾಗೋವರೆಗೂ ಮತ್ತು ನಂತರ ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಅವರನ್ನು ಪದಚ್ಯುತಿಗೊಳಿಸುವವರೆಗೂ ಅವರು ಕರ್ತವ್ಯ ನಿರ್ವಹಿಸಬಹುದು. ಹಾಗಾಗಿ, ನಾನು ಉಪ ಲೋಕಾಯುಕ್ತರನ್ನು ಕರ್ತವ್ಯ ನಿರ್ವಹಿಸಬೇಡಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಡಿಪಿಎಆರ್ ಗೆ ತಿಳಿಸಿದ್ದಾರೆ. 
ಉಪ ಲೋಕುಯುಕ್ತ ನ್ಯಾ.ಸುಭಾಷ್ ಅಡಿ ವಿರುದ್ಧ ಹಲವು ಆರೋಪಗಳು ಇರುವುದರಿಂದ ಅವರ ಪದಚ್ಯುತಿ ಮಾಡಬೇಕು ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ವಿಧಾನಸಭೆಯಲ್ಲಿ ಪ್ರಸ್ತಾಪ ಮಂಡಿಸಿದ್ದರು. ಈ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಇದನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಹೈಕೋರ್ಟ್ ನ್ಯಾಯಾಮೂರ್ತಿಗಳಿಗೆ ಕಳುಹಿಸಿದ್ದರು. 
ಲೋಕಾಯುಕ್ತ ಕಾಯ್ದೆ ಪ್ರಕಾರ, ಹೈಕೋರ್ಟ್ ಮುಖ್ಯ ನ್ಯಾಯಾಮೂರ್ತಿಗಳಿಗೆ ಪದಚ್ಯುತಿ ನಿರ್ಣಯ ಸಲ್ಲಿಕೆಯಾದ ನಂತರ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವಂತಿಲ್ಲ ಎಂದು ಸರ್ಕಾರದ ವಾದ ಮಾಡುತ್ತಿದೆ. ಆದರೆ, ನ್ಯಾ.ಸುಭಾಷ್ ಬಿ ಅಡಿ ಅವರು, ಸುಪ್ರೀಂಕೋರ್ಟ್ ತೀರ್ಪೊಂದರ ಪ್ರಕಾರ ಪ್ರಸ್ತಾಪ ಕುರಿತು ತೀರ್ಮಾನವಾಗುವವರೆಗೂ ಕಾರ್ಯನಿರ್ವಹಿಸಬಹುದು ಎಂದು ವಾದಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com