ರಾಮಸೇನೆ ಕಾರ್ಯಕರ್ತನ ಹತ್ಯೆ ಪ್ರಕರಣ: ಮೈಸೂರು ಬಂದ್

ಶ್ರೀ ರಾಮಸೇನೆ ಕಾರ್ಯಕರ್ತ ರಾಜು ಹತ್ಯೆ ಖಂಡಿಸಿರುವ ಬಿಜೆಪಿಯು ಸೋಮವಾರ ನಗರದಾದ್ಯಂತ ಬಂದ್ ಗೆ ಕರೆ ನೀಡಿದೆ. ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಿರುವ ಅಧಿಕಾರಿಗಳು ಇದೀಗ ನಗರದಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ...
ರಾಮಸೇನೆ ಕಾರ್ಯಕರ್ತನ ಹತ್ಯೆ ಪ್ರಕರಣ: ಇಂದು ಮೈಸೂರು ಬಂದ್
ರಾಮಸೇನೆ ಕಾರ್ಯಕರ್ತನ ಹತ್ಯೆ ಪ್ರಕರಣ: ಇಂದು ಮೈಸೂರು ಬಂದ್

ಮೈಸೂರು: ಶ್ರೀ ರಾಮಸೇನೆ ಕಾರ್ಯಕರ್ತ ರಾಜು ಹತ್ಯೆ ಖಂಡಿಸಿರುವ ಬಿಜೆಪಿಯು ಸೋಮವಾರ ನಗರದಾದ್ಯಂತ ಬಂದ್ ಗೆ ಕರೆ ನೀಡಿದೆ. ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಿರುವ ಅಧಿಕಾರಿಗಳು ಇದೀಗ ನಗರದಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ.

ರಾಜು ಹತ್ಯೆ ಹಿನ್ನೆಲೆಯಲ್ಲಿ ಬಿಜೆಪಿ ಬಂದ್ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿರುವ ಪೊಲೀಸು ಈಗಾಗಲೇ ನಗರದಾದ್ಯಂತ ತೀವ್ರ ಕಟ್ಟೆಚ್ಚರವನ್ನು ವಹಿಸಿದ್ದಾರೆ. ಎಲ್ಲೆಡೆ ಬ್ಯಾರಿಕೇಡ್ ಗಳನ್ನು ಹಾಕಿ ಬಿಗಿ ಪೊಲೀಸರ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಶ್ರೀ ರಾಮಸೇನೆ ಕಾರ್ಯಕರ್ತರಾಗಿರುವ ಕ್ಯಾತಮಾರನಹಳ್ಳಿ ರಾಜು ಅವರು ಭಾನುವಾರ ಉದಯಗಿರಿ ಬಡಾವಣೆಯ ನೇತಾಜಿ ವೃತ್ತದ ಬಳಿಯಿರುವ ಟೀ ಅಂಗಡಿ ಬಳಿ ನಿಂತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

ರಾಜು ಹತ್ಯೆಗೆ ಬಿಜೆಪಿ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಮೈಸೂರು ಬಂದ್ ಗೆ ಕರೆ ನೀಡಿದ್ದರು. ಇದರಂತೆ ಇಂದು ಹತ್ಯೆಗೀಡಾದ ರಾಜು ಅವರ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಕೆ.ಆರ್. ಆಸ್ಪತ್ರೆಗೆ ಶವವನ್ನು ರವಾನೆ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಶವ ರವಾನೆ ಮಾಡುವ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಮರಣೋತ್ತರ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಬಂದ್ ಪರಿಣಾಮ ಪರೀಕ್ಷೆಗಳ ಮೇಲಿಲ್ಲ
ನಗರದಲ್ಲಿ ಈಗಾಗಲೇ ಕರೆ ನೀಡಲಾಗಿರುವ ಬಂದ್ ಆಚರಣೆಗೆ ಕುರಿತಂತೆ ಹಲವು ಗೊಂದಲಗಳು ಮೂಡಿದ್ದವು. ಇಂದು ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆ ಇದೆಯೋ, ಇಲ್ಲವೋ ಎಂಬ ಗೊಂದಲಗಳು ಮೂಡಿದ್ದವು. ಈ ಹಿನ್ನೆಲೆಯಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಅಧಿಕಾರಿಗಳು, ಬಂದ್ ಪರಿಣಾಮ ಪರೀಕ್ಷೆಗಳ ಮೇಲೆ ಆಗುವುದಿಲ್ಲ. ಎಂದಿನಂತೆ ಪರೀಕ್ಷೆ ಮುಂದುವರೆಯಲಿದೆ. ವಿದ್ಯಾರ್ಥಿಗಳು ಭಯಪಡಬೇಕಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com