ಬಿಬಿಎಂಪಿಯಿಂದ ಕೆ ಮಥಾಯಿ ರೆಕ್ಕೆ ಪುಕ್ಕ ಕಟ್?

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ಜಾಹೀರಾತು ಹಗರಣ ಬಯಲಿಗೇಳೆದ ಬಿಬಿಎಂಪಿ ಸಹಾಯಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ಜಾಹೀರಾತು ಹಗರಣ ಬಯಲಿಗೇಳೆದ ಬಿಬಿಎಂಪಿ ಸಹಾಯಕ ಆಯುಕ್ತ ಕೆ.ಮಥಾಯಿ ಅವರ ರೆಕ್ಕೆ ಪುಕ್ಕ ಕತ್ತರಿಸಲು ಮುಂದಾಗಿದೆ.
ಈಗಾಗಲೇ ಮಥಾಯಿ ಅವರನ್ನು ಜಾಹೀರಾತು ವಿಭಾಗದಿಂದ ಎತ್ತಂಗಡಿ ಮಾಡುವ ಯತ್ನ ನಡೆದಿದ್ದು, ಮಥಾಯಿಗೆ ಮಾರುಕಟ್ಟೆ ವಿಭಾಗದ ಜವಾಬ್ದಾರಿ ನೀಡುವಂತೆ ಬಿಬಿಎಂಪಿ ಮೇಯರ್ ಬಿ.ಎನ್.ಮಂಜುನಾಥ್ ರೆಡ್ಡಿ ಅವರು ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ.
ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮೇಯರ್ ಮಂಜುನಾಥ್ ಅವರು ಮಥಾಯಿ ವರ್ಗಾವಣೆ ಆದೇಶ ಹೊರಡಿಸಿದ್ದಾರೆ. ಆದರೆ ಬಿಬಿಎಂಪಿ ಕೌನ್ಸಿಲ್​ನಲ್ಲಿ ಮೇಯರ್​ನೀಡಿರೊ ಆದೇಶವೇ ಕೊನೆಯಲ್ಲ. ಬದಲಾಗಿ ಬಿಬಿಎಂಪಿ ಆಯುಕ್ತರು ಕೌನ್ಸಿಲ್​ನಿರ್ಣಯವನ್ನ ಆಧರಿಸಿ ವಾಸ್ತವ ಅಗತ್ಯಗಳನ್ನ ಪರಿಗಣಿಸಿ ನಿರ್ಣಯವನ್ನ ರದ್ದುಪಡಿಸುವ ಅಧಿಕಾರವನ್ನ ಆಯುಕ್ತರು ಹೊಂದಿದ್ದಾರೆ. ಸದ್ಯ ಮೇಯರ್ ಹಾಗೂ ಆಯುಕ್ತರು ಪಾಲಿಕೆ ಕರ್ತವ್ಯ ನಿಮಿತ ದೆಹಲಿಗೆ ತೆರಳಲಿರುವ ಹಿನ್ನೆಲೆಯಲ್ಲಿ ಮಥಾಯಿ ಜಾಹೀರಾತು ಹಾಗೂ ಮಾರುಕಟ್ಟೆ 2 ವಿಭಾಗದಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಥಾಯಿ ಅವರು 2014ರಿಂದ ಬಿಬಿಎಂಪಿಯ ಜಾಹೀರಾತು ವಿಭಾಗದ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಸುತ್ತಿದ್ದು, ಇದಕ್ಕು ಮುನ್ನ ಅವರು ರಾಜ್ಯದ ಹಲವು ಕಡೆ ಕಾರ್ಯನಿರ್ವಹಿಸಿದ್ದಾರೆ. ಅವರನ್ನು ಆರು ತಿಂಗಳಲ್ಲಿ ಮೂರು ಬಾರಿ ವರ್ಗಾವಣೆ ಮಾಡಲಾಗಿತ್ತು.
ಜಾಹೀರಾತು ವಿಭಾಗದ ಅವ್ಯವಸ್ಥೆ, ಜಾಹೀರಾತು ತೆರಿಗೆ ಸಂಗ್ರಹದ ವೈಫಲ್ಯದ ಬಗ್ಗೆ ಕೆ.ಮಥಾಯಿ ಅವರು 5 ವರದಿಗಳನ್ನು ನೀಡಿದ್ದರು. ತೆರಿಗೆ ಸಂಗ್ರಹ ವೈಫಲ್ಯದಿಂದ 2000 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ಅವರು ವರದಿಯಲ್ಲಿ ಹೇಳಿದ್ದರು. ಅಲ್ಲದೆ ಬಿಬಿಎಂಪಿಯ ಜಾಹೀರಾತು, ಕಂದಾಯ ವಿಭಾಗದ ಅಧಿಕಾರಿಗಳು, ನೌಕರರು, ಹಿರಿಯ ಅಧಿಕಾರಿಗಳ ಅಡಳಿತ ವೈಫಲ್ಯವೇ ಈ ನಷ್ಟಕ್ಕೆ ಕಾರಣ ಎಂದು ವರದಿಯಲ್ಲಿ ಹೇಳಿದ್ದರು. ಈ ಜಾಹೀರಾತು ಹಗರಣದ ಬಗ್ಗೆ ಸಿಬಿಐ ಅಥವ ಸಿಐಡಿ ತನಿಖೆಯಾಗಬೇಕು ಎಂದು ಶಿಫಾರಸು ಮಾಡಿದ್ದರು.
ಬಿಬಿಎಂಪಿಯಲ್ಲಿ ಟಿ.ಎಂ.ವಿಜಯಭಾಸ್ಕರ್‌ ಅವರು ಆಡಳಿತಾಧಿಕಾರಿ ಆಗಿದ್ದಾಗ ಶಾಂತಲಾನಗರ ವಾರ್ಡ್‌ನಲ್ಲಿ ಜಾಹೀರಾತು ವರಮಾನಕ್ಕೆ ಸಂಬಂಧಿಸಿದಂತೆ ಸಹಾಯಕ ಆಯುಕ್ತ ಕೆ.ಮಥಾಯಿ ಅವರ ನೇತೃತ್ವದಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಲಾಗಿತ್ತು. ಮೊದಲು ಈ ವಾರ್ಡ್‌ನಿಂದ 15 ಲಕ್ಷ ರುಪಾಯಿ ಆದಾಯ ಬರುತ್ತಿತ್ತು.
ಆದರೆ ಮಥಾಯಿ ಅವರ ತಂಡ ಶಾಂತಲಾನಗರ ವಾರ್ಡ್‌ನ ಜಾಹೀರಾತು ಫಲಕಗಳಿಂದ ರು.3.96 ಕೋಟಿಯಷ್ಟು ಆದಾಯ ಬರಬೇಕು ಎಂಬ ವರದಿ ನೀಡಿತ್ತು. ಆ ವರದಿಯನ್ವಯ ವಿಶೇಷ ಕಾರ್ಯಾಚರಣೆ ನಡೆಸಿದಾಗ ರು. 3 ಕೋಟಿಯಷ್ಟು ಆದಾಯ ಸಂಗ್ರಹವಾಗಿತ್ತು. ಬಳಿಕ ಕಂದಾಯ ಅಧಿಕಾರಿಗಳ ಅಸಹಕಾರದಿಂದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.
ಶಾಂತಲಾನಗರ ವಾರ್ಡ್‌ನಲ್ಲಿ ನಡೆಸಿದಂತೆಯೇ ನಗರದ ಉಳಿದ 197 ವಾರ್ಡ್‌ಗಳಲ್ಲೂ ವಾಸ್ತವಿಕ ಅಧ್ಯಯನ ನಡೆಸಬೇಕು. ವಿಡಿಯೊ ಚಿತ್ರೀಕರಣ ಮಾಡಿಸುವುದಲ್ಲದೆ ಫೋಟೊ ತೆಗೆಸುವ ಮೂಲಕ ಜಾಹೀರಾತಿಗೆ ಸಂಬಂಧಿಸಿದ ಪ್ರತಿ ವಿವರವನ್ನು ದಾಖಲೆ ಮಾಡಬೇಕು. ಇದರಿಂದ ಪ್ರತಿಯೊಂದು ವಾರ್ಡ್‌ನಿಂದ ಕೋಟ್ಯಂತರ ಆದಾಯ ತರಲು ಸಾಧ್ಯವಾಗುತ್ತದೆ ಎಂಬ ಸಲಹೆಯನ್ನು ಸಹಾಯಕ ಆಯುಕ್ತರು ನೀಡಿದ್ದರು ಎಂದು ಗೊತ್ತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com