ಬಾತ್‌ರೂಂ ಗಾಯಕರಿಗಾಗಿ ಮಗ್ ಟು ಮೈಕ್ ಎಂಬ ಕಾರ್ಯಾಗಾರ ಆರಂಭಿಸಿ ಬಾತ್‌ರೂಂನಲ್ಲಿ ಮಾತ್ರ ಹಾಡುತ್ತಿದ್ದ ಪ್ರತಿಭೆಗಳನ್ನು ಸ್ಟುಡಿಯೋವರೆಗೆ ಕರೆತಂದ ಟೆಕಿ, ಯುವ ಗಾಯಕ ಸುನೀಲ್ ಕೋಶಿ. ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳಲ್ಲಿ ಆತ್ಮ ವಿಶ್ವಾಸವನ್ನು ತುಂಬಿ ಹಾಡುಗಾರಿಕೆಯ ಕೌಶಲ್ಯವನ್ನು ಹೇಳಿಕೊಟ್ಟು ಸ್ಟುಡಿಯೋದಲ್ಲೂ, ವೇದಿಕೆಯ ಮೇಲೆಯೂ ಹಾಡುವಂತೆ ಮಾಡಿದ ಕೀರ್ತಿ ಸುನಿಲ್‌ಗೆ ಸಲ್ಲುತ್ತದೆ.