ದಾವಣಗೆರೆಯಲ್ಲಿ ಬಸ್ ಪಲ್ಟಿ: ಶಾಲಾ ಮಕ್ಕಳು ಸೇರಿ 21 ಮಂದಿಗೆ ಗಾಯ

ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಶಾಲಾ ಮಕ್ಕಳು ಸೇರಿದಂತೆ 21 ಮಂದಿ ಗಾಯಗೊಂಡಿರುವ ಘಟನೆ ದಾವರಣಗೆರೆ ಜಿಲ್ಲೆಯ ಹರಪನಹಳ್ಳಿ ಸಮೀಪದ ಹುಲಿಕಟ್ಟೆ ಗ್ರಾಮದ...
ಅಪಘಾತ
ಅಪಘಾತ
Updated on

ದಾವಣಗೆರೆ: ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಶಾಲಾ ಮಕ್ಕಳು ಸೇರಿದಂತೆ 21 ಮಂದಿ ಗಾಯಗೊಂಡಿರುವ ಘಟನೆ ದಾವರಣಗೆರೆ ಜಿಲ್ಲೆಯ ಹರಪನಹಳ್ಳಿ ಸಮೀಪದ ಹುಲಿಕಟ್ಟೆ ಗ್ರಾಮದ ಬಳಿ ಸಂಭವಿಸಿದೆ.

ಭಾಗ್ಯಲಕ್ಷ್ಮಿ ಖಾಸಗಿ ಬಸ್ ನಲ್ಲಿ 110ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದು, ನಿಗದಿಗಿಂತ ಹೆಚ್ಚು ಜನರನ್ನು ತುಂಬಿರುವುದೇ ಘಟನೆ ಕಾರಣವಾಗಿದೆ ಎನ್ನಲಾಗಿದೆ. ಇನ್ನು ಘಟನೆಯಲ್ಲಿ ಒಟ್ಟು 21 ಜನರಿಗೆ ಗಾಯವಾಗಿದ್ದು, ಇದರಲ್ಲಿ 15 ಶಾಲಾ ಮಕ್ಕಳು ಸೇರಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣ ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com