ವಿಜಯಪುರದಲ್ಲಿ ಟಿಪ್ಪರ್-ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ: 6 ಸಾವು

ವಿಜಯಪುರ ತಾಲೂಕಿನ ಹೊರ್ತಿ ಸಮೀಪ ಬೆಳಗ್ಗೆ ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಹೆಣ್ಣು ಮಗು ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ....
ಅಪಘಾತದ ದೃಶ್ಯಾವಳಿ
ಅಪಘಾತದ ದೃಶ್ಯಾವಳಿ
Updated on

ವಿಜಯಪುರ: ವಿಜಯಪುರ ತಾಲೂಕಿನ ಹೊರ್ತಿ ಸಮೀಪ ಬೆಳಗ್ಗೆ ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಹೆಣ್ಣು ಮಗು ಸೇರಿ 6 ಮಂದಿ ಸಾವನ್ನಪ್ಪಿದ್ದು, 15 ಮಂದಿಗೆ ಗಾಯಗಳಾಗಿವೆ.

ಮಹಾರಾಷ್ಟ್ರದಿಂದ ವಿಜಯಪುರ ನಂದಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವು ಮಾಡುವ ಕೆಲಸಕ್ಕೆಂದು ಆಗಮಿಸಿದ್ದ ಕೂಲಿ ಕಾರ್ಮಿಕರೆ ಮೃತಪಟ್ಟಿದ್ದಾರೆ.

ಮೃತರನ್ನು ಮುಸ್ತಾಕಿನ್ ಫತ್ರು(30), ಮುಮ್ತಾಜ್ ಮಹೆಬೂಬ ಬೇಗ್(35), ಮೆಹರೂನ್ ಹಕೀಂಬೇಗ್(41), ಡಿಕೆಜೆ ರೋಹಿಂದ ಡಂಬಳೆ(40), ವಿಮಲಾ ರೋಹಿದಾಸ ಡಂಬಳೆ(65) ಮತ್ತು ಎರಡು ವರ್ಷ ವಯಸ್ಸಿನ ಹೆಣ್ಣುಮಗು ಆರೋಹಿ ರೋಹಿನ ದಾಳೆ ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಗಾಯಗೊಂಡಿರುವ 15 ಮಂದಿಯನ್ನು ವಿಜಯಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com