ಬೆಂಗಳೂರು: ಒಂದು ವಿದೇಶಿ ತಳಿ ನಾಯಿಗೆ ಒಂದು ಲಕ್ಷ ಅಥವಾ ಹತ್ತು ಲಕ್ಷ ರುಪಾಯಿ ಕೊಟ್ಟು ಖರೀದಿಸುವುದನ್ನು ನೋಡಿರುತ್ತೀರಿ. ಆದರೆ ಬೆಂಗಳೂರಿನ ಶ್ವಾನ ಪ್ರಿಯನೊಬ್ಬ ಬರೋಬ್ಬರಿ 1 ಕೋಟಿ ರುಪಾಯಿ ನೀಡಿ ಕೊರಿಯನ್ ತಳಿಯ ನಾಯಿಯನ್ನು ಖರೀದಿಸಿದ್ದಾರೆ.
ತಲಾ ಕೋಟಿ ರುಪಾಯಿ ಕೊಟ್ಟು ಎರಡು ನಾಯಿಗಳನ್ನು ಖರೀದಿಸಿರುವ ಬೆಂಗಳೂರಿನ ಸತೀಶ್ ಹೇಳುವ ಪ್ರಕಾರ ಇವರು ಬಹಳ ದಿನಗಳಿಂದ ದೋಸಾ ತಳಿಯ ನಾಯಿಯನ್ನು ಕೊಳ್ಳುವ ಯೋಚನೆಯಲ್ಲಿದ್ದರು, ಇದಕ್ಕಾಗಿ ಬಹಳಷ್ಟು ಹುಡುಕಾಟವನ್ನೂ ನಡೆಸಿದ್ದರು. ಹೀಗಾಗಿ ಈ ನಾಯಿ ಇರುವ ವಿಚಾರ ತಿಳಿದ ಕೂಡಲೇ ಇದಕ್ಕಾಗಿ ಆರ್ಡರ್ ನೀಡಿದ್ದರಂತೆ.
ಸತೀಶ್ ಬಳಿ ಈಗಾಗಲೇ 150 ಶ್ವಾನಗಳಿದ್ದು, ಈಗ ಖರೀದಿಸಿರುವ ಕೊರಿಯನ್ ನಾಯಿಗಳ ತಿಂಗಳ ವೆಚ್ಚ 30 ಸಾವಿರ ವ್ಯಯವಾಗಲಿದೆಯಂತೆ.
ಈ ತಳಿಯ ಶ್ವಾನಗಳಲ್ಲಿ ವಾಸನೆ ಕಂಡು ಹಿಡಿಯುವ ಶಕ್ತಿ ಅಧಿಕವಾಗಿರುವುದರೊಂದಿಗೆ ಯಾವುದೇ ವಾತಾವರಣದಲ್ಲಿ ಇವುಗಳು ಹೊಂದಿಕೊಳ್ಳುತ್ತವೆ. ಜೊತೆಗೆ ಇವುಗಳು ತಮ್ಮ ಪ್ರಾಮಾಣಿಕತೆ ಹಾಗೂ ಶಾಂತತೆಗೆ ಹೆಸರುವಾಸಿಯಾಗಿವೆಯಂತೆ.
Advertisement