ಕೆರೆಗಳ ಪುನಶ್ಚೇತನಕ್ಕೆ ಕೆರೆ ಸಂಜೀವಿನಿ ಯೋಜನೆ

ರಾಜ್ಯದಲ್ಲಿ ನೀರಿಗಾಗಿ ಬರ ಎದುರಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಕೊರತೆಯನ್ನು ಎದುರಿಸಲು ಸರ್ಕಾರ ಕೆರೆ ಸಂಜೀವಿನಿ ಎಂಬ ಹೊಸ ಯೋಜನೆಯನ್ನು ರೂಪಿಸಿದೆ.
ಬರದಿಂದ ಬತ್ತಿರುವ ಕೆರೆ
ಬರದಿಂದ ಬತ್ತಿರುವ ಕೆರೆ

ಕಾರವಾರ: ರಾಜ್ಯದಲ್ಲಿ ನೀರಿಗಾಗಿ ಬರ ಎದುರಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಕೊರತೆಯನ್ನು ಎದುರಿಸಲು ಸರ್ಕಾರ ಕೆರೆ ಸಂಜೀವಿನಿ ಎಂಬ ಹೊಸ ಯೋಜನೆಯನ್ನು ರೂಪಿಸಿದೆ.
ಕೆರೆಗಳನ್ನು ಪುನರುಜ್ಜೀವನಗೊಳಿಸಲಿರುವುದು ಕೆರೆ ಸಂಜೀವಿನಿಯ ಉದ್ದೆಶವಾಗಿದ್ದು, ಜೀವನಾಡಿಯಾಗಿರುವ ನೀರಿನ ಮೂಲವನ್ನು ಪುನರುಜ್ಜೀವನಗೊಳಿಸಲು ಸರ್ಕಾರ ಮುಂದಾಗಿದೆ. ಕೆರೆಗಳು ಸಂಪೂರ್ಣ ಬತ್ತಿಹೋಗಿದ್ದು ಈ ವರ್ಷ ನೀರಿಗೆ ಹಾಹಾಕಾರ ಉಂಟಾಗಿದೆ. ಇದರ ಪರಿಣಾಮವಾಗಿ ಎಚ್ಚೆತ್ತಿರುವ ರಾಜ್ಯ ಸರ್ಕಾರ ಜೂ.15 ರೊಳಗೆ ಬರ ಪೀಡಿತ ಪ್ರದೇಶದ ಕೆರೆಗಳಲ್ಲಿ ಹೂಳೆತ್ತುವ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ ನೀಡಿದೆ.
ಪಂಚಾಯತ್ ರಾಜ್ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಅಡಿಯಲ್ಲಿ ಬರುವ ಸುವರ್ಣ ಗ್ರಾಮೋದ್ಯೋಗ ಯೋಜನೆಯ ನಿರ್ದೇಶಕ ನಾಗರಾಜ್, ಕೆರೆಗಳನ್ನು ಪುನರುಜ್ಜೀವನಗೊಳಿಸಲು ಆದೇಶ ಹೊರಡಿಸಿದ್ದಾರೆ. ರೈತರು ಕೆರೆಗಳ ಹೂಳನ್ನು ಜಮೀನಿಗೆ ಕೊಂಡೊಯ್ಯಲು ಅವಕಾಶ ಇರುವ ಕೆರೆಗಳ ಪುನರುಜ್ಜೀವನಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಕೆರೆಯಿಂದ ಹೊರತೆಗೆಯಲಾಗುವ ಹೂಳು ಕೃಷಿ ಭೂಮಿಗೆ ಉಪಯುತವಾಗಿದ್ದು ಇಳುವರಿಯನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ಹೂಳನ್ನು ಜಮೀನಿಗೆ ಕೊಂಡೊಯ್ಯಲು ಅವಕಾಶ ವಿರುವ ಕೆರೆಗಳನ್ನು ಶೀಘ್ರವೇ ಪುನರುಜ್ಜೀವನಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ. 
ಇನ್ನು ಪುನರುಜ್ಜೀವನಗೊಳಿಸಬೇಕಾಗಿರುವ ಕೆರೆಗಳನ್ನು ಗುರುತಿಸಲು ಜಿಲ್ಲಾ ಪಂಚಾಯಿತಿ ಸಿಇಒ, ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಗಳನ್ನು ನಿಯೋಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com