ಬಿಬಿಎಂಪಿ ವಿಭಜನೆ: ಸ್ಪಷ್ಟನೆ ಕೋರಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಬ್ಭಾಗ ಸಂಬಂಧ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸರ್ಕಾರದಿಂದ ಕೆಲ ಸ್ಪಷ್ಟೀಕರಣ ಕೋರಿದ್ದಾರೆ...
ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಬ್ಭಾಗ ಸಂಬಂಧ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸರ್ಕಾರದಿಂದ ಕೆಲ ಸ್ಪಷ್ಟೀಕರಣ ಕೋರಿದ್ದಾರೆ.

ಬಿಬಿಎಂಪಿ ವಿಭಜನೆ ಮಸೂದೆಯ ಅಂಗೀಕಾರಕ್ಕಾಗಿ ಸರ್ಕಾರ ರಾಷ್ಟ್ರಪತಿಗಳ ಬಳಿಗೆ ಮಸೂದೆ ಕಳುಹಿಸಿಕೊಟ್ಟಿದೆ. ಅಂಕಿತ ಹಾಕುವ ಮುನ್ನ ಕರ್ನಾಟಕ ಪುರಸಭೆಯನ್ನು (ತಿದ್ದುಪಡಿ) ಮಸೂದೆಯ ಬಗ್ಗೆ ಕೆಲ ಸ್ಪಷ್ಠೀಕರಣ ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಿದ್ದಾರೆ.

ಒಂದು ವೇಳೆ ವಿಭಜನೆ ಮಸೂದೆಗೆ ಅಂಕಿತ ಹಾಕಿದರೇ ಅದರಿಂದ ಎದುರಾಗುವ ಪರಿಣಾಮಗಳು ಆಗು ಹೋಗುಗಳ ಬಗ್ಗೆ ವಿವರಣೆ ನೀಡುವಂತೆ ರಾಷ್ಟ್ರಪತಿಗಳು ಕೇಳಿರುವುದಾಗಿ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.

ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದರೇ ಕೂಡಲೇ ಚುನಾವಣೆ ನಡೆಸುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾರ್ಜ್ ಮೊದಲು ರಾಷ್ಟ್ರಪತಿಗಳು ಅಂಕಿತ ಹಾಕಿದ ನಂತರವಷ್ಟೇ ಈ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವುದಾಗಿ ಅವರು ಹೇಳಿದರು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com