ಎಚ್.ವಿ ದರ್ಶನ್
ರಾಜ್ಯ
ಯುಪಿಎಸ್ಸಿ ರಾಜ್ಯಕ್ಕೆ 48ನೇ ರ್ಯಾಂಕ್: ಅರ್ಹತೆ ಪಡೆದ 30ಕ್ಕೂ ಹೆಚ್ಚು ಮಂದಿ
ಭಾರತೀಯ ನಾಗರಿಕ ಸೇವಾ ಪರೀಕ್ಷೆ(ಯುಪಿಎಸ್ಸಿ)ಯಲ್ಲಿ ರಾಜ್ಯಕ್ಕೆ 48ನೇ ರ್ಯಾಂಕ್ ಬಂದಿದ್ದು, ಪರೀಕ್ಷೆಯಲ್ಲಿ 30ಕ್ಕೂ ಹೆಚ್ಚು ಮಂದಿ ಅರ್ಹತೆ ಪಡೆದಿದ್ದಾರೆ...
ಬೆಂಗಳೂರು: ಭಾರತೀಯ ನಾಗರಿಕ ಸೇವಾ ಪರೀಕ್ಷೆ(ಯುಪಿಎಸ್ಸಿ)ಯಲ್ಲಿ ರಾಜ್ಯಕ್ಕೆ 48ನೇ ರ್ಯಾಂಕ್ ಬಂದಿದ್ದು, ಪರೀಕ್ಷೆಯಲ್ಲಿ 30ಕ್ಕೂ ಹೆಚ್ಚು ಮಂದಿ ಅರ್ಹತೆ ಪಡೆದಿದ್ದಾರೆ.
ಕೇಂದ್ರ ಲೋಕಾಸೇವಾ ಆಯೋಗ 2015ನೇ ಸಾಲಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಹೆಸರು ಪ್ರಕಟಗೊಂಡಿದ್ದು ರಾಜ್ಯದ ದಾವರಣಗೆರೆ ಮೂಲದ ಎಚ್.ವಿ ದರ್ಶನ್ 48ನೇ ರ್ಯಾಂಕ್ ಪಡೆದರೇ, ಎಚ್.ಎಸ್ ಶ್ರೀಕಾಂತ್ 56ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಇವರಲ್ಲದೆ ಶ್ರೀನಿವಾಸ್ ಗೌಡ ಆರ್-105, ಶಿವಮೊಗ್ಗದ ಜಿಲ್ಲೆ ಸಾಗರದ ಮೊಹಮ್ಮದ್ ಇಕ್ರಾಮುಲ್ಲಾ ಷರೀಷ್ 111, ಮಿಥುನ್ ಕುಮಾರ್ ಜಿಕೆ 130, ಆಸೀಮ್ ಅನ್ವರ್ 149, ಟಿಎಸ್ ಚೇತನ್ 193, ವಿಜಯ್ ನಿರಂಜನ್ 263, ನವ್ಯಾ ಪಿ.ಶೆಟ್ಟಿ 274 ರ್ಯಾಂಕ್ ಪಡೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ