ಬೆಳಗಾವಿಯ ಈ ಗ್ರಾಮಸ್ಥರಿಗೆ ಸಿಗುವುದು ದಿನಕ್ಕೆ ಒಂದು ಬಿಂದಿಗೆ ನೀರು

ದಿನಕ್ಕೆ ಒಂದು ಬಿಂದಿಗೆ ನೀರು. ಇದು ಬೆಳಗಾವಿಯ ಖಾನಾಪುರ ತಾಲ್ಲೂಕಿನ ವಡಗಾಂವ್ ಗ್ರಾಮಸ್ಥರಿಗೆ ಅಲ್ಲಿನ ಬಾವಿಯಿಂದ ...
ಬೆಳಗಾವಿಯ ವಡಗಾಂವ್ ಗ್ರಾಮದಲ್ಲಿರುವ ಬಾವಿಯಿಂದ ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಮಾತ್ರ ನೀರು ಸೇದಲು ಅವಕಾಶ.
ಬೆಳಗಾವಿಯ ವಡಗಾಂವ್ ಗ್ರಾಮದಲ್ಲಿರುವ ಬಾವಿಯಿಂದ ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಮಾತ್ರ ನೀರು ಸೇದಲು ಅವಕಾಶ.

ಬೆಳಗಾವಿ: ದಿನಕ್ಕೆ ಒಂದು ಬಿಂದಿಗೆ ನೀರು. ಇದು ಬೆಳಗಾವಿಯ ಖಾನಾಪುರ ತಾಲ್ಲೂಕಿನ ವಡಗಾಂವ್ ಗ್ರಾಮಸ್ಥರಿಗೆ ಅಲ್ಲಿನ ಬಾವಿಯಿಂದ ಸಿಗುವ ನೀರು. ಒಂದು ವೇಳೆ ಯಾರಾದರೂ ಹೆಚ್ಚು ನೀರು ಸೇದಿಕೊಂಡರೆ 500 ರೂಪಾಯಿ ದಂಡ ಕಟ್ಟಬೇಕು.

ಈ ನಿಯಮ ಯಾಕೆಂದರೆ ಈ ವರ್ಷದ ಬರಗಾಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನತೆ ಬರಗಾಲದಿಂದ ಕಂಗೆಟ್ಟು ಹೋಗಿದ್ದು, ವಡಗಾಂವ್ ಗ್ರಾಮಸ್ಥರು ಇದುವರೆಗೆ ಕಂಡು ಕೇಳಿರದಷ್ಟು ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ, ಹೀಗಾಗಿ ಅಲ್ಲಿನ ಗ್ರಾಮ ಪಂಚಾಯತ್ ಈ ನಿಯಮ ಜಾರಿಗೆ ತಂದಿದೆ.

ಈ ಗ್ರಾಮದಲ್ಲಿ ಎರಡು ಬಾವಿಗಳಿದ್ದರೂ, ಒಂದರಲ್ಲಿ ನೀರು ಸೇದಿದರೆ ಇನ್ನೊಂದು ಬಾವಿಯ ನೀರು ಆಳಕ್ಕೆ ಹೋಗುತ್ತದೆ. ಹಾಗಾಗಿ ಒಂದೇ ಬಾವಿಯಿಂದ ನೀರು ಸೇದಬೇಕೆಂದು ಪಂಚಾಯತ್ ನಿಯಮ ತಂದಿದೆ.

ಟ್ಯಾಂಕರ್ ನೀರು ದುಬಾರಿ: ಬೇಸಿಗೆಯ ಆರಂಭದಲ್ಲಿ ನೀರಿನ ಟ್ಯಾಂಕರ್ ನವರು ವಡಗಾಂವ್ ಗ್ರಾಮಕ್ಕೆ ಬರುತ್ತಿದ್ದರು. ಆದರೆ ಅವರು ಬಿಂದಿಗೆಯೊಂದಕ್ಕೆ 10 ರೂಪಾಯಿ, ಟ್ಯಾಂಕರ್ ವೊಂದಕ್ಕೆ 800 ರೂಪಾಯಿ ಕೇಳುತ್ತಾರೆ. ಸರ್ಕಾರ ಪ್ರತಿ ಟ್ಯಾಂಕರ್ ಮಾಲಿಕರಿಗೆ 348 ರೂಪಾಯಿ ಕೊಡುತ್ತದೆ. ಆದರೆ ಈ ಹಣ ಕಡಿಮೆಯಾಗುತ್ತದೆ ಎಂದು ಟ್ಯಾಂಕರ್ ನವರು ಈಗ ಬರುತ್ತಿಲ್ಲ. ಖಾಸಗಿಯಾಗಿ ನೀರು ಖರೀದಿಸಿದರೆ ತುಂಬಾ ವೆಚ್ಚವಾಗುತ್ತದೆ ಎಂದು ಗ್ರಾಮಸ್ಥರು ಕೊಂಡುಕೊಳ್ಳುವುದನ್ನು ನಿಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com