2017 ರಿಂದ ವಿದ್ಯುತ್ ಪೂರೈಕೆ ಮಾಡಲಿರುವ ಪಾವಗಡದ ಸೋಲಾರ್ ಪಾರ್ಕ್

ಪಾವಗಡದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಸೋಲಾರ್ ಪಾರ್ಕ್ ನ ಮೊದಲ ಹಂತ ಮುಂದಿನ ಏಪ್ರಿಲ್ ಗೆ ಪೂರ್ಣಗೊಳ್ಳಲಿದ್ದು ರಾಜ್ಯಕ್ಕೆ 1000 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಾಗಲಿದೆ.
ಸೋಲಾರ್ ಪಾರ್ಕ್
ಸೋಲಾರ್ ಪಾರ್ಕ್

ಬೆಂಗಳೂರು: ಪಾವಗಡದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಸೋಲಾರ್ ಪಾರ್ಕ್ ನ ಮೊದಲ ಹಂತ ಮುಂದಿನ ಏಪ್ರಿಲ್ ಗೆ ಪೂರ್ಣಗೊಳ್ಳಲಿದ್ದು ರಾಜ್ಯಕ್ಕೆ 1000 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಾಗಲಿದೆ.

ಯೋಜನೆ ಮುಂದಿನ ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ವಿದ್ಯುತ್ ಖರೀದಿಗಾಗಿ ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ ಹಾಗೂ ರಾಜ್ಯದ ಐದು ವಿದ್ಯುತ್ ಪೂರೈಕೆ ಕಂಪನಿಗಳು(ಎಸ್ಕಾಂ) ಗಳು ಮೇ.17 ರಂದು ಒಪ್ಪಂದಕ್ಕೆ ಸಹಿ ಹಾಕಿವೆ.
 
ಸುಮಾರು 11,000 ಎಕರೆ ಪ್ರದೇಶದಲ್ಲಿ 2,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಸೋಲಾರ್ ಪಾರ್ಕ್ ನಿಮಾಣವಾಗುತ್ತಿದ್ದು ಇದಕ್ಕಾಗಿ ಈಗಾಗಲೇ 9 ,025 ಎಕರೆಯಷ್ಟು ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಸೋಲಾರ್ ಪಾರ್ಕ್ ನಿರ್ಮಾಣದ ಯೋಜನೆ 2018 ಕ್ಕೆ ಪೂರ್ಣಗೊಳ್ಲಲಿದ್ದು, ಈ ಸೋಲಾರ್ ಪಾರ್ಕ್ ನಿಂದ ರಾಜ್ಯದ 5 ವಿದ್ಯುತ್ ಪೂರೈಕೆ ಕಂಪನಿಗಳಿಗೆ ವಿದ್ಯುತ್ ನೀಡುವುದಕ್ಕೆ ಎನ್ ಟಿಪಿಸಿ ಒಪ್ಪಿಗೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com