ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದರಲ್ಲೂ ವಿದ್ಯಾರ್ಥಿನಿಯರೇ ಮುಂದು

ಪ್ರತೀ ಬಾರಿ ಯಾವುದೇ ಫಲಿತಾಂಶ ಹೊರ ಬಿದ್ದರೂ ಹುಡುಗಿಯರೇ ಮುಂದಿರುತ್ತಾರೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಇದು ಸಾಕಷ್ಟು ಬಾರಿ ಸತ್ಯವಾಗಿರುವುದೂ ಕೂಡ ಹೌದು. ಇದು ಒಂದೊಡೆ ಎಲ್ಲಾ ಹೆಣ್ಣು ಮಕ್ಕಳು ಸಂತಸ ಪಡುವ...
ಪರೀಕ್ಷಾ ಸಮಯಲ್ಲಿ ವಿದ್ಯಾರ್ಥಿನಿಯೊಬ್ಬಳು ತಂದಿದ್ದ ಕಾಪಿ ಚೀಟಿಯನ್ನು ಪ್ರದರ್ಶಿಸುತ್ತಿರುವ ಮಹಿಳಾ ಸ್ಕ್ವಾಡ್
ಪರೀಕ್ಷಾ ಸಮಯಲ್ಲಿ ವಿದ್ಯಾರ್ಥಿನಿಯೊಬ್ಬಳು ತಂದಿದ್ದ ಕಾಪಿ ಚೀಟಿಯನ್ನು ಪ್ರದರ್ಶಿಸುತ್ತಿರುವ ಮಹಿಳಾ ಸ್ಕ್ವಾಡ್

ಬೆಂಗಳೂರು: ಪ್ರತೀ ಬಾರಿ ಯಾವುದೇ ಫಲಿತಾಂಶ ಹೊರ ಬಿದ್ದರೂ ಹುಡುಗಿಯರೇ ಮುಂದಿರುತ್ತಾರೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಇದು ಸಾಕಷ್ಟು ಬಾರಿ ಸತ್ಯವಾಗಿರುವುದೂ ಕೂಡ ಹೌದು. ಇದು ಒಂದೊಡೆ ಎಲ್ಲಾ ಹೆಣ್ಣು ಮಕ್ಕಳು ಸಂತಸ ಪಡುವ ವಿಚಾರವಾದರೆ, ಮತ್ತೊಂದೆಡೆ ಕಾಪಿ ಹೊಡೆಯೋದರಲ್ಲೂ ವಿದ್ಯಾರ್ಥಿನಿಯರೇ ಮುಂದಿದ್ದಾರೆಂಬುದನ್ನು ಬೆಂಗಳೂರು ವಿಶ್ವವಿದ್ಯಾಲಯ ಬಯಲು ಮಾಡಿದೆ.

ಬೆಂಗಳೂರು ವಿಶ್ವವಿದ್ಯಾಲಯ ಪದವಿ ಪರೀಕ್ಷೆಯನ್ನು ನಡೆಸುತ್ತಿದ್ದು, ಈ ಬಾರಿ ನಡೆದ ಪರೀಕ್ಷೆಯಲ್ಲಿ ಹುಡುಗರಿಗಿಂತಲೂ ಹುಡುಗಿಯರೇ ಹೆಚ್ಚು ಕಾಪಿ ಮಾಡಿ ಸಿಕ್ಕಿಹಾಕಿಕೊಂಡಿರುವುದಾಗಿ ತಿಳಿದುಬಂದಿದೆ. ಪ್ರಸ್ತುತ ತಿಳಿದುಬಂದಿರುವ ಪ್ರಕಾರ ಕಾಪಿ ಹೊಡೆಯುತ್ತಿರುವುದರಲ್ಲಿ 43 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 33 ರಷ್ಟು ಪ್ರಕರಣಗಳು ವಿದ್ಯಾರ್ಥಿನಿಯರ ವಿರುದ್ಧವೇ ಹೆಚ್ಚು ದಾಖಲಾಗಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ರಿಜಿಸ್ಟ್ರಾರ್ ಕೆ.ಎನ್ ನಿಂಗೇಗೌಡ ಅವರು, ಪರೀಕ್ಷಾ ಸಮಯದಲ್ಲಿ ಸಾಮಾನ್ಯವಾಗಿ ಪುರುಷರೇ ಸ್ಕ್ವಾಡ್ ಗಳಾಗಿ ಹೋಗುತ್ತಿರುತ್ತಾರೆ. ಇದರಿಂದಾಗಿ ಕಾಪಿ ಮಾಡುವ ವಿದ್ಯಾರ್ಥಿನಿಯರು ತಪ್ಪಿಸಿಕೊಳ್ಳುವ ದಾರಿಯಿರುತ್ತದೆ. ಇದರಂತೆ ಕಾಪಿ ಮಾಡುವ ಪ್ರಕರಣಗಳು ಹೆಚ್ಚಾಗಿದೆ. ಹೀಗಾಗಿ ಈ ಬಾರಿ ನಡೆದ ಪರೀಕ್ಷಾ ಸಮಯದಲ್ಲಿ ಮಹಿಳಾ ಸದಸ್ಯರನ್ನು ಸ್ಕ್ವಾಡ್ ಗಳಾಗಿ ಕಳುಹಿಸಲಾಗಿತ್ತು ಎಂದು ಹೇಳಿದ್ದಾರೆ.

ಪರೀಕ್ಷಾ ಸಮಯಲ್ಲಿ ವಿದ್ಯಾರ್ಥಿನಿಯರು ಪುಟಗಳಗಟ್ಟಲೇ ಕಾಪಿ ಚೀಟಿ ತಂದಿರುವುದು ತಿಳಿದುಬಂದಿತ್ತು. ವಿದ್ಯಾರ್ಥಿನಿಯ ಬಳಿ ಈ ಮಟ್ಟದಲ್ಲಿ ಕಾಪಿ ಚೀಟಿ ಇರುವುದನ್ನು ನೋಡಿ ಸಾಕಷ್ಟು ಆಶ್ಚರ್ಯವಾಗಿತು ಎಂದು ಸ್ಕ್ವಾಡ್ ಆಗಿ ಹೋಗಿದ್ದ ಸಂಗೀತಾ ಅವರು ಹೇಳಿದ್ದಾರೆ.

ಪರೀಕ್ಷಾ ಕೊಠಡಿಯಲ್ಲಿ ವಾಚ್ ಮತ್ತು ಮೊಬೈಲ್ ಫೋನ್ ಗಳಿಗೆ ನಿಷೇಧ ಹೇರಲಾಗಿತ್ತು. ವಿದ್ಯಾರ್ಥಿಗಳು ಯಾವುದೇ ಗ್ಯಾಜೆಟ್ ಗಳನ್ನು ಬಳಕೆ ಮಾಡುತ್ತಿರಲಿಲ್ಲ. ನೇರವಾಗಿ ಕಾಪಿ ಚೀಟಿಯನ್ನೇ ಪರೀಕ್ಷಾ ಕೊಠಡಿಗೆ ತಂದು ಕಾಪಿ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಇನ್ನು .ಸಿಕ್ಕಿ ಹಾಕಿಕೊಂಡಿರುವ ಬಹುತೇಕ ವಿದ್ಯಾರ್ಥಿನಿಯರು ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿಗಳೇ ಆಗಿದ್ದಾರೆಂದು ನಿಂಗೇಗೌಡ ಅವರು ಹೇಳಿದ್ದಾರೆ.

ಇನ್ನು ಕಾಪಿ ಹೊಡೆದು ಸಿಕ್ಕಿ ಹಾಕಿಕೊಂಡಿರುವ ವಿದ್ಯಾರ್ಥಿಗಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನಿಂಗೇಗೌಡ ಅವರು ಇದೀಗ ವಿದ್ಯಾರ್ಥಿನಿಯರ ಪೋಷಕರನ್ನು ಕರೆದು ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ. ಸಾಮಾನ್ಯವಾಗಿ ಹೆಣ್ಣುಮಕ್ಕಳು ಅತಿಸೂಕ್ಷ್ಮ ಮನಸ್ಥಿತಿಯುಳ್ಳವರಾಗಿತ್ತಾರೆ. ಒಂದು ವೇಳೆ ಕಾಪಿ ಮಾಡಿದ ಸಮಯದಲ್ಲಿ ಡಿಬಾರ್ ಮಾಡಿದರೆ ಅವರು ಮುಂದೆ ಯಾವ ಹೆಜ್ಜೆ ತೆಗೆದುಕೊಳ್ಳುತ್ತಾರೆಂಬುದು ತಿಳಿಯುವುದಿಲ್ಲ. ಹೀಗಾಗಿ ವಿದ್ಯಾರ್ಥಿನಿಯರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂಬುದು ಗೊಂದಲ ವಿಚಾರವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com