ಕಾಮೆಡ್'ಕೆ ಫಲಿತಾಂಶ ಪ್ರಕಟ: ರಾಜ್ಯಕ್ಕೆ 7 ರ್ಯಾಂಕ್

ವೃತ್ತಿಪರ ಕೋರ್ಸ್ ಗಳ ಖಾಸಗಿ ಕಾಲೇಜುಗಳ ಪ್ರವೇಶಕ್ಕೆ ನಡೆಸಲಾಗುವ ಕಾಮೆಡ್ ಕೆ ಯುಜಿಇಟಿ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಟಾಪ್ 10 ರಲ್ಲಿ 7 ರ್ಯಾಂಕ್...
ಕಾಮೆಡ್'ಕೆ ಫಲಿತಾಂಶ ಪ್ರಕಟ: ಮೊದಲೆರಡು ಸ್ಥಾನಗಳಲ್ಲಿ ಬೆಂಗಳೂರಿನ ಅಧೋಕ್ಷಜ ಮಾಧ್ವರಾಜ್, ಆರ್. ರಾಹುಲ್
ಕಾಮೆಡ್'ಕೆ ಫಲಿತಾಂಶ ಪ್ರಕಟ: ಮೊದಲೆರಡು ಸ್ಥಾನಗಳಲ್ಲಿ ಬೆಂಗಳೂರಿನ ಅಧೋಕ್ಷಜ ಮಾಧ್ವರಾಜ್, ಆರ್. ರಾಹುಲ್

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಖಾಸಗಿ ಕಾಲೇಜುಗಳ ಪ್ರವೇಶಕ್ಕೆ ನಡೆಸಲಾಗುವ ಕಾಮೆಡ್ ಕೆ ಯುಜಿಇಟಿ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಟಾಪ್ 10 ರಲ್ಲಿ 7 ರ್ಯಾಂಕ್ ಗಳು ರಾಜ್ಯಕ್ಕೆ ಲಭಿಸಿವೆ.

ದೇಶದಲ್ಲಿ ವೈದ್ಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ದೇಶದಲ್ಲಿ ಏಕರೂಪದ ಪರೀಕ್ಷೆ ನೀಟ್ ಜಾರಿಯಾದ ಹಿನ್ನೆಲೆಯಲ್ಲಿ ಎಂಜಿನಿಯರಿಂಗ ಕೋರ್ಸ್ ಗಳ ಪ್ರವೇಶಕ್ಕೆ ಮಾತ್ರ ಕಾಮೆಡ್ ಕೆ ಯುಜಿಇಜಿಯನ್ನು ಮೊದಲ ಬಾರಿಗೆ ಆನ್ ಲೈನ್ ಮೂಲಕ ನಡೆಸಿತ್ತು. ಇದರಂತೆ ನಿಗದಿ ದಿನಾಂಕಕ್ಕಿಂತ ಒಂದು ದಿನ ಮೊದಲೇ ಫಲಿತಾಂಶ ಹೊರಬಿದ್ದಿದ್ದು, ಮೊದಲ ಹಾಗೂ ಎರಡನೇ ರ್ಯಾಂಕ್ ಸೇರಿದಂತೆ ಟಾಪ್ 10ರಲ್ಲಿ 7 ರ್ಯಾಂಕ್ ಗಳನ್ನು ರಾಜ್ಯದ ವಿದ್ಯಾರ್ಥಿಗಳು ಪಡೆದಿದ್ದಾರೆ.

ಇದರಂತೆ ಇಂದು ಮಧ್ಯಾಹ್ನ 12 ಗಂಟೆ ನಂತರ ವಿದ್ಯಾರ್ಥಿಗಳು ಕಾಮೆಡ್ ಕೆ ವೆಬ್ ಸೈಟ್ ನಲ್ಲಿ ಫಲಿತಾಂಶವನ್ನು ನೋಡಬಹುದಾಗಿದೆ.

ಪ್ರಸ್ತುಕ ಪ್ರಕಟಗೊಂಡಿರುವ ಫಲಿತಾಂಶದ ಪ್ರಕಾರ ಮೊದಲ ಹಾಗೂ ದ್ವಿತೀಯ ರ್ಯಾಂಕ್ ಬೆಂಗಳೂರಿನ ಅಧೋಕ್ಷಜ ವಿ. ಮಾಧಅವರಾಜ್ ಹಾಗೂ ಆರ್. ರಾಹುಲ್ ಎಂಬುವವರು ಪಡೆದಿದ್ದು, ತೃತೀಯ ರ್ಯಾಂಕ್ ನ್ನು ತೆಲಂಗಾಣದ ಸಾಯಿ ಹಿಮಲ್ ಅಲ್ಲು ಪಡೆದುಕೊಂಡಿದ್ದಾರೆ.

ಮೊದಲ 10 ರ್ಯಾಂಕ್ ಗಳ ಪೈಕಿ 56 ರ್ಯಾಂಕ್ ಗಳನ್ನು ಕರ್ನಾಟಕದ ವಿದ್ಯಾರ್ಥಿಗಳ ಪಾಲಾಗಿವೆ. ಮೊದಲ 1000ರ್ಯಾಂಕ್ ಪಡೆದವರು ಪರೀಕ್ಷೆಯಲ್ಲಿ ಶೇ.70 ಅಂಕ ಪಡೆದಿದ್ದಾರೆ.

1361 ಅಭ್ಯರ್ಥಿಗಳು ಶೇ.66ರಿಂದ ಶೇ.70. ಇದೇ ರೀತಿ 2373 ಅಭ್ಯರ್ಥಿಗಳು ಶೇ.60 ರಿಂದ ಶೇ.65 ಮತ್ತು 6854 ಅಭ್ಯರ್ಥಿಗಳು ಶೇ.60 ರಿಂದ 50 ಅಭ್ಯರ್ಥಿಗಳ ಪೈಕಿ 55, 680 (ಶೇ.81) ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಿದ್ದರು. ಇದರಂತೆ ಎಂಜಿನಿಯರಿಂಗ್ ನಲ್ಲಿ ಪರೀಕ್ಷೆ ಬರೆದ ಎಲ್ಲರಿಗೂ ಅರ್ಹತಾ ನೀಡುವುದರಿಂದ ಪರೀಕ್ಷೆ ಬರೆದ 55,680 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com