ವೇತನ ಹೆಚ್ಚಳ ಬೇಡಿಕೆ: ಜೂ.2 ರಂದು 5 ಲಕ್ಷ ರಾಜ್ಯ ಸರ್ಕಾರಿ ನೌಕರರಿಂದ ಸಾಮೂಹಿಕ ರಜೆ

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನೌಕರರಿಗೆ ನೀಡುತ್ತಿರುವ ವೇತನ ಪ್ರಮಾಣದಲ್ಲಿ ಅಸಮಾನತೆಯನ್ನು ವಿರೋಧಿಸಿ 5 ಲಕ್ಷ ರಾಜ್ಯ ಸರ್ಕಾರಿ ನೌಕರರು ಜೂ.2 ರಂದು ರಜೆ ಹಾಕಲಿದ್ದಾರೆ.
ವೇತನ ಹೆಚ್ಚಳ ಬೇಡಿಕೆ: ಜೂ.2 ರಂದು 5 ಲಕ್ಷ ರಾಜ್ಯ ಸರ್ಕಾರಿ ನೌಕರರಿಂದ ಸಾಮೂಹಿಕ ರಜೆ
ವೇತನ ಹೆಚ್ಚಳ ಬೇಡಿಕೆ: ಜೂ.2 ರಂದು 5 ಲಕ್ಷ ರಾಜ್ಯ ಸರ್ಕಾರಿ ನೌಕರರಿಂದ ಸಾಮೂಹಿಕ ರಜೆ

ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನೌಕರರಿಗೆ ನೀಡುತ್ತಿರುವ ವೇತನ ಪ್ರಮಾಣದಲ್ಲಿ ಅಸಮಾನತೆಯನ್ನು ವಿರೋಧಿಸಿ 5 ಲಕ್ಷ ರಾಜ್ಯ ಸರ್ಕಾರಿ ನೌಕರರು ಜೂ.2 ರಂದು ರಜೆ ಹಾಕಲಿದ್ದಾರೆ.
7 ನೇ ವೇತನ ಆಯೋಗದ ಪ್ರಕಾರ ಕೇಂದ್ರ ಸರ್ಕಾರದ ನೌಕರರಿಗೆ ಶೇ.23 .5 ರಷ್ಟು ವೇತನ ಹೆಚ್ಚಿಸಲಾಗಿದೆಯಾದರೂ, ಸರ್ಕಾರಿ ನೌಕರರು ಇನ್ನೂ ಹೆಚ್ಚಿನ ವೇತನಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಪರಿಣಾಮ ವೇತನ ಆಯೋಗ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಶೇ.23 .5 ರಷ್ಟು ವೇತನ ಹೆಚ್ಚಿಸಲಾಗಿದ್ದರೂ ರಾಜ್ಯ ಡಿ ಗ್ರೂಪ್ ನೌಕರರಿಗೆ ಹಾಗೂ ಕೇಂದ್ರ ಡಿ ಗ್ರೂಪ್ ನೌಕರರಿಗೆ ನೀಡುತ್ತಿರುವ ವೇತನ ಪ್ರಮಾಣದಲ್ಲಿ ಶೇ.111 .33 ರಷ್ಟು ವ್ಯತ್ಯಾಸ ಇದೆ. ಈ ಹಿನ್ನೆಲೆಯಲ್ಲಿ ವೇತನ ತಾರತಮ್ಯವನ್ನು ವಿರೋಧಿಸಿ ರಾಜ್ಯ ಸರ್ಕಾರದ 5 ಲಕ್ಷ ನೌಕರರು ಜೂ.2 ರಂದು ಸಾಮೂಹಿಕ ರಜೆ ಹಾಕಲಿದ್ದಾರೆ ಎಂದು ರಾಜ್ಯ ಸರ್ಕಾರ ನೌಕರರ ಸಂಘದ ಅಧ್ಯಕ್ಷ ಬಿಪಿ ಮಂಜೇಗೌಡ ಹೇಳಿದ್ದಾರೆ.
ರಾಜ್ಯ ಸರ್ಕಾರದ ನೌಕರರು ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವಷ್ಟೇ ದೈನಂದಿನ ಭತ್ಯೆಯನ್ನು ನೀಡಬೇಕು ಎಂಬುಡು ರಾಜ್ಯ ಸರ್ಕಾರದ ನೌಕರರ ಬೇಡಿಕೆಯಾಗಿದೆ. ವೇತನ ಹೆಚ್ಚಳಕ್ಕೆ ಆಗ್ರಹಿಸಿ ಹುಬ್ಬಳ್ಳಿಯ ವಿಭಾಗಾದ 63 ಇಲಾಕೆಹಗಳ ಸುಮಾರು 6 ,000 ನೌಕರರು  ಜೂ.2 ರಂದು ಸಾಮೂಹಿಕ ರಜೆಹಾಕಲಿದ್ದಾರೆ ಎಂದು ಸಂಘದ ಅಧ್ಯಕ್ಷ ಬಿಪಿ ಮಂಜೇಗೌಡ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com