ಚಾರ್ ಧಾಮ್ ಯಾತ್ರೆ (ಸಂಗ್ರಹ ಚಿತ್ರ)
ಚಾರ್ ಧಾಮ್ ಯಾತ್ರೆ (ಸಂಗ್ರಹ ಚಿತ್ರ)

ಉ.ಖಂಡದಲ್ಲಿ ಮೇಘಸ್ಫೋಟ; ಕರ್ನಾಟಕದ ಯಾತ್ರಾರ್ಥಿಗಳು ಸುರಕ್ಷಿತ

ಉತ್ತರಾಖಂಡದಲ್ಲಿ ಸಂಭವಿಸಿರುವ ಮೇಘಸ್ಫೋಟದಿಂದಾಗಿ ಸುರಿಯುತ್ತಿರುವ ಭಾರಿ ಮಳೆಯಲ್ಲಿ ಸಿಲುಕಿದ್ದ ಕರ್ನಾಟಕದ ಸುಮಾರು 350ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು: ಉತ್ತರಾಖಂಡದಲ್ಲಿ ಸಂಭವಿಸಿರುವ ಮೇಘಸ್ಫೋಟದಿಂದಾಗಿ ಸುರಿಯುತ್ತಿರುವ ಭಾರಿ ಮಳೆಯಲ್ಲಿ ಸಿಲುಕಿದ್ದ ಕರ್ನಾಟಕದ ಸುಮಾರು 350ಕ್ಕೂ ಹೆಚ್ಚು ಯಾತ್ರಾರ್ಥಿಗಳು  ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಜ್ಯ ಸರ್ಕಾರದ ದೆಹಲಿಯ ಸ್ಥಾನಿಕ ಆಯುಕ್ತ ಅತುಲ್ ಕುಮಾರ್ ತಿವಾರಿ ಅವರು, ಚಾರ್ ಧಾಮ್ ಯಾತ್ರೆಗಾಗಿ ಕರ್ನಾಟಕದ ಬೆಂಗಳೂರು,  ತುಮಕೂರು ಜಿಲ್ಲೆಗಳಿಂದ ತೆರಳಿದ್ದ ಸುಮಾರು 350ಕ್ಕೂ ಹೆಚ್ಚು ಮಂದಿ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಸದ್ಯಕ್ಕೆ ಉತ್ತರಾಖಂಡದಲ್ಲಿ ಕನ್ನಡಿಗರಿಗೆ ಯಾವುದೇ ಸಮಸ್ಯೆಯಾಗಿಲ್ಲ.  ಯಾತ್ರಿಕರಿಗೆ ಸಹಾಯವಾಗುವಂತೆ ರಸ್ತೆಗಳನ್ನ ಸರಿಪಡಿಸಲಾಗುತ್ತಿದೆ. ನಮ್ಮ ಬಳಿ ಇರೋ ಪಟ್ಟಿಯಂತೆ 130 ಕನ್ನಡಿಗರ ಜತೆ ಸಂಪರ್ಕದಲ್ಲಿದ್ದೇವೆ. ಉತ್ತರಾಖಂಡದ ಎಸಿಪಿ ಮತ್ತು  ಜಿಲ್ಲಾಧಿಕಾರಿಗಳೊಂದಿಗೂ ಮಾತುಕತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ತಿಳಿಸಿದ್ದಾರೆ.

ಸಂಪರ್ಕಕ್ಕೆ ಸಿಗದ 10 ಸ್ವಾಮೀಜಿಗಳು
ಉತ್ತರಾಖಂಡದಲ್ಲಿ ಸಂಭವಿಸಿದ ಮೇಘ ಸ್ಪೋಟದಲ್ಲಿ ಸಿಲುಕಿದ ರಾಜ್ಯದ 10 ಸ್ವಾಮೀಜಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದ್ದು, ಕಳೆದ ಜೂನ್ 1ರಂದು ಕೇದಾರದಲ್ಲಿ  ನಡೆಯಲಿರುವ ಜಗದ್ಗುರು ಭೀಮಾಶಂಕರಲಿಂಗ ಸ್ವಾಮೀಜಿಗಳ ಷಷ್ಠ್ಯಬ್ಧಿ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯದಿಂದ ಸುಮಾರು 60 ಸ್ವಾಮೀಜಿಗಳು ಮತ್ತು ಭಕ್ತರು ಅಲ್ಲಿಗೆ ತೆರಳಿದ್ದಾರೆ. ಕೇದಾರ,  ಸುತ್ತಮುತ್ತಲ ಪ್ರದೇಶದಲ್ಲಿ ಸತತ ಸುರಿಯುತ್ತಿರುವ ಕುಂಭದ್ರೋಣ ಮಳೆ, ಮೇಘಸ್ಪೋಟದಿಂದ ಅನೇಕ ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ತಿಳಿದುಬಂದಿದೆ.

ಸಹಾಯವಾಣಿಗೆ ಕರೆಗಳ ಸರಮಾಲೆ
ಕೇದಾರನಾಥದಲ್ಲಿ ಮೊಬೈಲ್ ನೆಟ್ವರ್ಕ್ ಸ್ಥಗಿತಗೊಂಡ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ತೆರೆಯಲಾಗಿರುವ ಸಹಾಯವಾಣಿ ಕೇಂದ್ರಕ್ಕೆ ಯಾತ್ರಾರ್ಥಿಗಳ ಸಂಬಂಧಿಗಳಿಂದ ಸೋಮವಾರ 30ಕ್ಕೂ  ಹೆಚ್ಚು ಕರೆಗಳು ಬಂದಿವೆ. ಇದರಲ್ಲಿ ಹಲವರು ಯಾತ್ರೆಗೆ ಹೋದವರ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com