ಉಪಶಮನಕಾರಕ ಆರೈಕೆಯ ವಿಶೇಷ ಕೋರ್ಸ್ ಅಮೆರಿಕಾದಲ್ಲಿದೆ. ಭಾರತದಲ್ಲಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ಸಂಸ್ಥೆ ಮತ್ತು ಮುಂಬೈಯ ಟಾಟಾ ಮೆಮೋರಿಯಲ್ ನಲ್ಲಿ ಮಾತ್ರ ಈ ಕುರಿತ ಕೋರ್ಸ್ ಇದೆ. ಕಿದ್ವಾಯಿ ಮುಂದಿನ ವರ್ಷದಿಂದ ಜಾರಿಗೆ ತರಲು ನಿಶ್ಚಯಿಸಿದೆ. ಕಿದ್ವಾಯಿಯಲ್ಲಿ ಈ ಚಿಕಿತ್ಸೆ ನೀಡುವ ಮೂವರು ವೈದ್ಯರ ತಂಡವಿದ್ದು 20 ಬೆಡ್ ಗಳಿವೆ. ನಗರದ ಕರುಣಾಶ್ರಯ, ಕಿದ್ವಾಯಿ ಮತ್ತು ಸೈಂಟ್ ಜಾನ್ಸ್ ಹಾಸ್ಪಿಟಲ್ ನಲ್ಲಿ 20 ಸಿಬ್ಬಂದಿಗಳಿದ್ದು ಅವರು ಉಪಶಮನಕಾರಿ ಆರೈಕೆಯ ತರಬೇತುದಾರರಾಗಿದ್ದಾರೆ. ಹೆಚ್ ಸಿಜಿ, ನಾರಾಯಣ ಹೃದಯಾಲಯ, ವೈದೇಹಿ ಆಸ್ಪತ್ರೆಗಳಲ್ಲಿ ಪ್ಯಾಲಿಯೇಟಿವ್ ಕೇರ್ ವೃತ್ತಿಪರರಿದ್ದಾರೆ. ಆದರೆ ಅವರೆಲ್ಲಾ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ. ಈ ಚಿಕಿತ್ಸೆ ನಗರಗಳಲ್ಲಿ ಮಾತ್ರವಲ್ಲದೆ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸಿಗುವಂತಾಗಬೇಕು ಎನ್ನುತ್ತಾರೆ ಕಿದ್ವಾಯಿ ನಿರ್ದೇಶಕ ಡಾ.ಕೆ.ಬಿ.ಲಿಂಗೇ ಗೌಡ.