ಹೊಸ ನೋಟು ಪಡೆಯುವ ವೇಳೆ ಬ್ಯಾಂಕ್ ಮುಂದೆ ಯುವಕರಿಬ್ಬರ ಮಾರಾಮಾರಿ

ದೇಶಾದ್ಯಂತ 500-1000 ರುಪಾಯಿ ಮುಖಬೆಲೆಯ ನೋಟು ನಿಷೇಧದ ಹಿನ್ನೆಲೆಯಲ್ಲಿ ಹೊಸ ನೋಟು ಪಡೆಯುಲು ಬ್ಯಾಂಕ್ ಗೆ ಬಂದಿದ್ದ ಗ್ರಾಹಕರಿಬ್ಬರು...
ಯುವಕರು ಮಾರಾಮಾರಿ
ಯುವಕರು ಮಾರಾಮಾರಿ
Updated on: 
ಹುಬ್ಬಳ್ಳಿ: ದೇಶಾದ್ಯಂತ 500-1000 ರುಪಾಯಿ ಮುಖಬೆಲೆಯ ನೋಟು ನಿಷೇಧದ ಹಿನ್ನೆಲೆಯಲ್ಲಿ ಹೊಸ ನೋಟು ಪಡೆಯುಲು ಬ್ಯಾಂಕ್ ಗೆ ಬಂದಿದ್ದ ಗ್ರಾಹಕರಿಬ್ಬರು ಹೊಡೆದಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 
ಹುಬ್ಬಳಿಯ ದೇಶಪಾಂಡೆನಗರದ ಐಸಿಐಸಿಐ ಬ್ಯಾಂಕ್ ನಲ್ಲಿ ಎಂದಿನಂತ ಗ್ರಾಹಕರು ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಯುವಕನೊಬ್ಬ ಸರತಿ ಸಾಲಿನಿಂದ ಮುಂದೆ ಹೋಗಲು ಯತ್ನಿಸಿದಾಗ ಮತ್ತೊಬ್ಬ ಯುವಕ ಆತನನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಯುವಕರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ಗ್ರಾಹಕರು ಇಬ್ಬರು ಯುವಕರನ್ನು ಸಮಾಧಾನ ಪಡಿಸಲು ಯತ್ನಿಸಿದ ಘಟನೆ ನಡೆದಿದೆ. 
ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಮಾರಾಮಾರಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವಕರಿಬ್ಬರನ್ನು ಸಮಾಧಾನಪಡಿಸಿ ಕಳುಹಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com