ನೋಟುಗಳ ವಿನಿಮಯ: ಗುರುತು ಪತ್ರಗಳ ದುರುಪಯೋಗ, ಅಸಹಾಯಕತೆಯಲ್ಲಿ ಬ್ಯಾಂಕುಗಳು

500 ಮತ್ತು 100 ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿದ ನಂತರ ಜನರು ಬ್ಯಾಂಕ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: 500 ಮತ್ತು 100 ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿದ ನಂತರ ಜನರು ಬ್ಯಾಂಕ್, ಪೋಸ್ಟ್ ಆಫೀಸ್ ಗಳತ್ತ ಮುಖ ಮಾಡುತ್ತಿರುವ ಸಂದರ್ಭದಲ್ಲಿ ಕೆಲವರು ನಿಮ್ಮ ಗುರುತು ಪತ್ರವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಹಣ ತೆಗೆದುಕೊಳ್ಳಲೆಂದು ಬ್ಯಾಂಕ್ ಗಳತ್ತ ಮುಖಮಾಡಿದವರು ಅವರ ಗುರುತು ಪತ್ರವನ್ನು ಪಡೆದುಕೊಂಡು ಹಣ ವಿನಿಮಯ ಮಾಡಿಕೊಂಡು ನಿಜವಾದ ಗ್ರಾಹಕರು ಖಾಲಿ ಕೈಯಿಂದ ಮನೆಗೆ ವಾಪಾಸ್ಸಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಡೆದ ಘಟನೆಯೇನು?: ಮೊನ್ನೆ ಶನಿವಾರ ಇಂದಿರಾ ನಗರದ 80 ಫೀಟ್ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ಗೆ ಅನ್ನಾ ಇಸಾಕ್ ಎಂಬುವವರು 3,500 ರೂಪಾಯಿ ಹಣಕ್ಕೆ ವಿನಿಮಯ ಮಾಡಿಸಿಕೊಳ್ಳಲು ಹೋಗಿದ್ದರು. ಬ್ಯಾಂಕಲ್ಲಿ ಅವರ ಪ್ಯಾನ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಕೇಳಿದ್ದರು. ಮೊಬೈಲ್ ಸಂಖ್ಯೆ ಕೊಟ್ಟ ತಕ್ಷಣ ಅದಾಗಲೇ ಅವರ ಪ್ಯಾನ್ ಸಂಖ್ಯೆಯನ್ನು ಬಳಸಿಕೊಂಡು ಯಾರೋ 4 ಸಾವಿರ ರೂಪಾಯಿ ವಿನಿಮಯ ಮಾಡಿಕೊಂಡಿದ್ದರು.
''ನನಗೆ ಶಾಕ್ ಆಗಿ ನನ್ನ ವಿವರ ಪಡೆದುಕೊಂಡು ಯಾರು ಹಣ ಪಡೆದಿದ್ದಾರೆ ಎಂದು ನನಗೆ ಆಘಾತವಾಯಿತು. ನನಗೆ ಬ್ಯಾಂಕ್ ಸಿಬ್ಬಂದಿಯಿಂದ ಸರಿಯಾದ ಉತ್ತರ ಸಿಗಲಿಲ್ಲ. ನನ್ನ ಗಮನಕ್ಕೆ ಬಾರದೆ ಬೇರೆಯವರು ನನ್ನ ಪ್ಯಾನ್ ಸಂಖ್ಯೆ ಮತ್ತು ಫೋನ್ ನಂಬರ್ ನ್ನು ಬಳಸಿಕೊಂಡು ಹೇಗೆ ಹಣ ವಿನಿಮಯ ಮಾಡಿಕೊಳ್ಳಲು ಸಾಧ್ಯ ಎಂದು ಕೇಳುತ್ತಾರೆ ಅನ್ನಾ.
ಮನೆಗೆ ಹೋಗಿ ಅವರ ಪೋಷಕರನ್ನು ವಿಚಾರಿಸಿದಾಗ ಅವರು ಬ್ಯಾಂಕ್ ನಲ್ಲಿ ನೋಟು ವಿನಿಮಯ ಮಾಡಿಕೊಂಡಿಲ್ಲ ಎಂದು ಗೊತ್ತಾಯಿತು. ಇದೀಗ ಯಾರು ತಮ್ಮ ಫೋನ್ ನಂಬರ್ ಮತ್ತು ಪ್ಯಾನ್ ಸಂಖ್ಯೆಯನ್ನು ದುರುಪಯೋಗಪಡಿಸಿಕೊಂಡಿರಬಹುದು ಎಂದು ಚಿಂತೆಯಾಗುತ್ತಿದೆ ಎನ್ನುತ್ತಾರೆ.
ಕ್ಸೆರಾಕ್ಸ್ ಅಂಗಡಿಗಳಲ್ಲಿ ಐಡಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ವರದಿಗಳು ಮಾಧ್ಯಮದಲ್ಲಿ ಬಂದಿವೆ. ಈ ಬಗ್ಗೆ ಪ್ರಮುಖ ಬ್ಯಾಂಕ್ ವೊಂದರ ಅಧಿಕಾರಿಯನ್ನು ಸಂಪರ್ಕಿಸಿದಾಗ, ಇಂತಹ ಪ್ರಕರಣಗಳು ನಡೆದಿರುವುದು ತಮ್ಮ ಗಮನಕ್ಕೆ ಬಂದಿದ್ದರೂ ಕೂಡ ಇದನ್ನು ನಿಯಂತ್ರಿಸುವುದು ಕಷ್ಟ. ಕೆಲವರು ವಯಸ್ಸಾದವರ ಮತ್ತು ಅಶಕ್ತರ ಸಂಬಂಧಿಕರೆಂದು ಹೇಳಿಕೊಂಡು ಬರುತ್ತಾರೆ. ಅವರನ್ನು ಪರೀಕ್ಷಿಸುವ ಕಾರಣಗಳು, ಉದ್ದೇಶಗಳು ನಮಗೆ ಸಿಗುವುದಿಲ್ಲ, ಅಂತಹ ಸಂದರ್ಭಗಳಲ್ಲಿ ದುರುಪಯೋಗವಾಗಬಹುದು ಎನ್ನುತ್ತಾರೆ.
ಎರಡು ದಿನಗಳ ಹಿಂದೆ, ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಆಧಾರ್ ಸಂಖ್ಯೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ವರದಿಯಾಗಿತ್ತು.
ಪ್ಯಾನ್ ಕಾರ್ಡ್ ಘಟನೆಗಳ ಬಗ್ಗೆ ರಾಜ್ಯ ಮಟ್ಟದ ಬ್ಯಾಂಕರ್ ಗಳ ಸಮಿತಿ ಸಂಚಾಲಕ ಎಂ.ಮೋಹನ್ ರೆಡ್ಡಿ ಮಾತನಾಡಿ,ಇಂತಹ ಘಟನೆ ಒಂದೋ, ಎರಡೋ ನಡೆಯಬಹುದು. ಬ್ಯಾಂಕ್ ಗಳಲ್ಲಿ ಗ್ರಾಹಕರು ಹಣ ಇಡುವಾಗ ನಾವು ಎಲ್ಲಾ ಅಗತ್ಯ ದಾಖಲೆಗಳನ್ನು ಪಡೆಯುತ್ತೇವೆ.  ಪ್ಯಾನ್ ಕಾರ್ಡ್ ದುರುಪಯೋಗದ ಪ್ರಕರಣವನ್ನು ಬ್ಯಾಂಕ್ ಗಳು ಪರಿಶೀಲಿಸಲಿವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com