ಬೆಂಗಳೂರು: ಇಬ್ಬರು ಮಕ್ಕಳನ್ನು ಕೊಂದಿದ್ದ ತಂದೆ ಬಂಧನ

ಹೆಂಡತಿ ಜೊತೆ ಜಗಳ ಮಾಡಿಕೊಂಡು ತನ್ನ ಇಬ್ಬರು ಮಕ್ಕಳನ್ನ ಕೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಮಣ್ಯಪುರ ಪೊಲೀಸರು ಗುರುವಾರ ಆರೋಪಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಹೆಂಡತಿ ಜೊತೆ ಜಗಳ ಮಾಡಿಕೊಂಡು ತನ್ನ ಇಬ್ಬರು ಮಕ್ಕಳನ್ನ ಕೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಮಣ್ಯಪುರ ಪೊಲೀಸರು ಗುರುವಾರ ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

ಬೀರೇಶ್ವರ ನಗರದ ಸತೀಶ್ ಕುಮಾರ್ ಬಂಧಿತ ಆರೋಪಿ. ಚುಂಚನಕಟ್ಟೆ ಬಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸತೀಶ್ ಅನುಮಾನಸ್ಪಾದವಾಗಿ ಓಡಾಡುತ್ತಿದ್ದುದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ತಾನು ಕುಡಿಯುತ್ತಿದ್ದ ಕಾರಣ ತನ್ನ ಪತ್ನಿ ತನಗೆ ಡೈವೋರ್ಸ್ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಳು. ಸತೀಶ್ ಮತ್ತು ಜ್ಯೋತಿ ನಡುವೆ ಪರಸ್ಪರ ಜಗಳವಾಗುತ್ತಿತ್ತು. ಜ್ಯೋತಿಯ ಶೀಲದ ಬಗ್ಗೆ ಸತೀಶ್ ಅನುಮಾನ ವ್ಯಕ್ತ ಪಡಿಸುತ್ತಿದ್ದ.

ಮಂಗಳವಾರ ರಾತ್ರಿ ಕೂಡ ಕುಡಿದು ಬಂದ ಸತೀಶ್ ಜ್ಯೋತಿ ಜೊತೆ ಜಗಳ ಮಾಡಿದ್ದಾನೆ. ಜೊತೆಗೆ ಜ್ಯೋತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಜ್ಯೋತಿ ತನ್ನ ಇಬ್ಬರು ಮಕ್ಕಳ ಜೊತೆಗೆ ತನ್ನ ತಾಯಿ ಮನೆಗೆ ತೆರಳಿದ್ದಳು.ಮರುದಿನ ಬೆಳಗ್ಗೆ 10 ಗಂಟೆ ವೇಳೆಗೆ ನರ್ಸರಿಗೆ ತೆರಳಿದ ಸತೀಶ್ ಮಕ್ಕಳಿಬ್ಬರನ್ನು ಕರೆದುಕೊಂಡು ಬಂದು ಮನೆಯಲ್ಲಿ ಹತ್ಯೆ ಮಾಡಿ ಪರಾರಿಯಾಗಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com