ಮೈಸೂರಿನಲ್ಲಿ ಸಿನಿಮಾ ಮತ್ತು ಟೆಲಿವಿಷನ್ ಶಾಲೆ

ಫ್ರಾನ್ಸ್ ನ ಫ್ರಾಂಕೊ-ಇಂಡಿಯನ್ ಫಿಲ್ಮ್ ಸೊಸೈಟಿಯ(ಎಫ್ಐಎಫ್ಎಸ್) ಸಹಭಾಗಿತ್ವದಲ್ಲಿ ಮೈಸೂರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ಫ್ರಾನ್ಸ್ ನ ಫ್ರಾಂಕೊ-ಇಂಡಿಯನ್ ಫಿಲ್ಮ್ ಸೊಸೈಟಿಯ(ಎಫ್ಐಎಫ್ಎಸ್) ಸಹಭಾಗಿತ್ವದಲ್ಲಿ ಮೈಸೂರು ವಿಶ್ವ ವಿದ್ಯಾಲಯ ನಗರದಲ್ಲಿ ಸಿನಿಮಾ ಮತ್ತು ಟೆಲಿವಿಷನ್ ಶಾಲೆ ಆರಂಭಿಸಲಿದೆ.
ಫ್ರಾನ್ಸ್ ಮೂಲದ ಇತಿಹಾಸಜ್ಞ ತಾರಾ ಮೈಕೆಲ್ ಅವರು ಎಫ್ಐಎಫ್ಎಸ್ ನ ಸ್ಥಾಪಕ ಮಧು ತ್ಯಾಗರಾಜನ್ ಅವರ ಸಮ್ಮುಖದಲ್ಲಿ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ದೇಶೀಯ ಸೌಕರ್ಯಗಳೊಂದಿಗೆ 20 ಎಕರೆ ಪ್ರದೇಶದಲ್ಲಿ ಹೊಸ ಶಾಲೆ ಆರಂಭವಾಗಲಿದೆ. ಫಿಲ್ಮ್ ಸಿಟಿ ಮಾದರಿಯಲ್ಲಿ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳಲಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಒಯ್ಯುವಂತಹ ಚಿತ್ರಗಳನ್ನು ತಯಾರಿಸಲಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆ ಆರಂಭಗೊಳ್ಳಲಿದ್ದು, ಹೊಸ ಕಟ್ಟಡ ಉದ್ಘಾಟನೆಗೊಳ್ಳುವವರೆಗೆ ಸೆನೆಟ್ ಭವನದಲ್ಲಿ ನಡೆಸಲಾಗುತ್ತದೆ ಎಂದು ಮೈಸೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದ್ದಾರೆ.
ಫ್ರಾಂಕೊ-ಇಂಡಿಯನ್ ಸ್ಕೂಲ್ ಆಫ್ ಸಿನಿಮಾ ಮತ್ತು ಟೆಲಿವಿಷನ್ ನಲ್ಲಿ ಸಿನಿಮಾ, ಟೆಲಿವಿಷನ್ ಗೆ ಸಂಬಂಧಪಟ್ಟ 31 ವಿವಿಧ ಬಗೆಯ ಕೋರ್ಸ್ ಗಳನ್ನು ಹೇಳಿಕೊಡಲಾಗುತ್ತದೆ. ಶಾಲೆಯಲ್ಲಿ ಹೇಳಿಕೊಡಲು ಭಾರತೀಯ ಮತ್ತು ಯುರೋಪ್ ದೇಶಗಳ ಶಿಕ್ಷಕರು ಇರುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com