ನಾನು ಅಪಘಾತದಲ್ಲಿ ಸತ್ತಿದ್ದೇನೆ ಅಂದುಕೋ: ತಾಯಿಗೆ ವಿಕೃತ ಕಾಮಿ ಉಮೇಶ್ ರೆಡ್ಡಿ

ವಿಕೃತ ಕಾಮಿ, ಸರಣಿ ಹಂತಕ ಉಮೇಶ್ ರೆಡ್ಡಿ ಮರಣದಂಡನೆ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ತಿರಸ್ಕೃತಗೊಂಡು ನೇಣಿಗೆ ಹತ್ತಿರವಾಗುತ್ತಿದ್ದು...
ಉಮೇಶ್ ರೆಡ್ಡಿ
ಉಮೇಶ್ ರೆಡ್ಡಿ
Updated on: 

ಬೆಳಗಾವಿ: ವಿಕೃತ ಕಾಮಿ, ಸರಣಿ ಹಂತಕ ಉಮೇಶ್ ರೆಡ್ಡಿ ಮರಣದಂಡನೆ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ತಿರಸ್ಕೃತಗೊಂಡು ನೇಣಿಗೆ ಹತ್ತಿರವಾಗುತ್ತಿದ್ದು, ಈ ಮಧ್ಯೆ ತಾಯಿಗೆ ಫೋನ್ ಮಾಡಿ ತಾನು ಅಪಘಾತದಲ್ಲಿ ಸತ್ತಿರುವುದಾಗಿ ಭಾವಿಸುವಂತೆ ಹೇಳಿದ್ದಾನೆ.

ಇನ್ನು ಸುಪ್ರೀಂಕೋರ್ಟ್ ಆದೇಶ ಪ್ರತಿ ಉಮೇಶ್ ರೆಡ್ಡಿ ಕೈಸೇರಿದೆ. ಈ ಮಧ್ಯೆ ಉಮೇಶ್ ರೆಡ್ಡಿಗೆ ಮರಣ ದಂಡನೆ ವಿಧಿಸಿಲು ಬೆಂಗಳೂರಿನ 61ನೇ ಅಡಿಷನ್ ಸಿಟಿ ಸಿವಿಲ್ ಕೋರ್ಟ್ ಬ್ಲ್ಯಾಕ್ ವಾರೆಂಟ್ ಹೊರಡಿಸಬೇಕು. ಈ ವಾರೆಂಟ್ ಪಡೆಯಲು ಬೆಳಗಾವಿ ಜೈಲು ಅಧೀಕ್ಷಕರು ಟಿ. ಶೇಷ ಬೆಂಗಳೂರಿಗೆ ತೆರಳಿದ್ದಾರೆ.

ಹಿಂಡಲಗಾ ಜೈಲಿನಲ್ಲಿ ಉಮೇಶ್ ಗಲ್ಲು ಶಿಕ್ಷೆ ವಿಧಿಸುವ ಕಾರ್ಯ ನಡೆಯಲಿದ್ದು. ರೆಡ್ಡಿ ಮರಣದಂಡನೆ ಕುರಿತಂತೆ ಸಂಬಂಧಿಕರಿಗೆ ಸಹ ಎಲ್ಲಾ ರೀತಿಯ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

ತನ್ನ ಕೊನೆಗಾಲ ಸಮೀಪಿಸುತ್ತಿದ್ದಂತೆ ತಾಯಿಗೆ ದೂರವಾಣಿ ಕರೆ ಮಾಡಿ 15 ನಿಮಿಷಗಳ ಕಾಲ ಮಾತನಾಡಿರುವ ಉಮೇಶ್, ರಸ್ತೆ ಅಪಘಾತದಲ್ಲಿ ಅನೇಕರು ಸಾಯುತ್ತಾರೆ. ಅದೇ ರೀತಿ ನನ್ನ ಸಾವು ಸಂಭವಿಸಿದೆ ಎಂದು ಭಾವಿಸುವಂತೆ ತಾಯಿಗೆ ಹೇಳಿಕೊಂಡಿದ್ದಾನೆ.

ನಾಸ್ತಿಕನಾಗಿದ್ದ ರೆಡ್ಡಿ ಇದೀಗ ದೇವರ ಮೊರೆ ಹೋಗಿದ್ದಾನಂತೆ. ಆಂಜನೇಯ ದೇವರ ಧ್ಯಾನದಲ್ಲಿ ಮಗ್ನನಾಗಿರುವ ರೆಡ್ಡಿ ಪ್ರತಿ ದಿನ ಎರಡು ಬಾರಿ ದೇವರ ದರ್ಶನ ಪಡೆಯುತ್ತಿದ್ದಾನೆ. ಇನ್ನು ರೆಡ್ಡಿ ಬಳಸುತ್ತಿದ್ದ ಬುಕ್, ಫೋಟೋ ಆಲ್ಬಮ್ ಗಳನ್ನು ಜೈಲಿನ ಅಧಿಕಾರಿಗಳಿಗೆ ವಾಪಸ್ ನೀಡಿದ್ದಾನೆ ಎಂದು ಜೈಲಿನ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com