ಪ್ಯಾನಿಕ್ ಬಟನ್ ಪರಿಶೀಲಿಸಲು ಓಲಾ ಕ್ಯಾಬ್ ಹತ್ತಿದ 'ಹೈ' ನ್ಯಾಯಮೂರ್ತಿ

ಕ್ಯಾಬ್ ಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಪರಿಶೀಲಿಸುವ ಸಲುವಾಗಿ ಸ್ವತಃ ಹೈಕೋರ್ಟ್ ನ್ಯಾಯಮೂರ್ತಿಗಳೇ ಓಲಾ ಕ್ಯಾಬ್ ವೊಂದನ್ನು ಹತ್ತಿ ಕ್ಯಾಬ್ ನಲ್ಲಿದ್ದ...
ಕ್ಯಾಬ್ ನಲ್ಲಿ ಅಳವಡಿಸಲಾಗಿರುವ ಪ್ಯಾನಿಕ್ ಬಟನ್
ಕ್ಯಾಬ್ ನಲ್ಲಿ ಅಳವಡಿಸಲಾಗಿರುವ ಪ್ಯಾನಿಕ್ ಬಟನ್

ಬೆಂಗಳೂರು: ಕ್ಯಾಬ್ ಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಪರಿಶೀಲಿಸುವ ಸಲುವಾಗಿ ಸ್ವತಃ ಹೈಕೋರ್ಟ್ ನ್ಯಾಯಮೂರ್ತಿಗಳೇ ಓಲಾ ಕ್ಯಾಬ್ ವೊಂದನ್ನು ಹತ್ತಿ ಕ್ಯಾಬ್ ನಲ್ಲಿದ್ದ ಪ್ಯಾನಿಕ್ ಬಟನ್ ನ್ನು ಗುರುವಾರ ಪರಿಶೀಲಿನೆ ನಡೆಸಿದ್ದಾರೆ.

ಸಾರಿಗೆ ತಂತ್ರಜ್ಞಾನ ನಿಯಮ 2016 ಪಾಲಿಸುವಲ್ಲಿ ಕೆಲ ಸಂಸ್ಥೆಗಳು ವಿಫಲರಾಗುತ್ತಿದ್ದು, ಪ್ರಯಾಣಿಕರಿಗೆ ಅಸುರಕ್ಷತೆ ಉಂಟಾಗುತ್ತಿದೆ ಎಂದು ಹೇಳಿ ಹೈ ಕೋರ್ಟ್ ನಲ್ಲಿ ಅರ್ಜಿಯೊಂದು ದಾಖಲಾಗಿತ್ತು. ನಿಯಮದ ಪ್ರಕಾರ ಕ್ಯಾಬ್ ಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸುವುದು ಕಡ್ಡಾಯವಾಗಿದೆ.

ಈ ಹಿನ್ನೆಲೆಯಲ್ಲಿ ಪ್ಯಾನಿಕ್ ಬಟನ್ ನ್ನು ಪರಿಶೀಲಿಸುವ ಸಲುವಾಗಿ ಸ್ವತಃ ನ್ಯಾಯಮೂರ್ತಿ ರಾಘವೇಂದ್ರ ಎಸ್ ಚೌಹಾಣ್ ಅವರು ನಿನ್ನೆ ನ್ಯಾಯಾಲಯದ ಹಿಂಭಾಗದಲ್ಲಿ ನಿಲ್ಲಿಸಲಾಗಿದ್ದ ಓಲಾ ಕ್ಯಾಬ್ ನ್ನು ಹತ್ತಿದ್ದರು. ಈ ವೇಳೆ ಕ್ಯಾಬ್ ನಲ್ಲಿದ್ದ ಪ್ಯಾನಿಕ್ ಬಟನ್ ಕಾರ್ಯನಿರ್ವಹಿಸುತ್ತಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸಿದರು.

ಕ್ಯಾಬ್ ವೊಂದರ ಹಿಂಬದಿ ಸೀಟ್ ನಲ್ಲಿ ಕುಳಿತ ನ್ಯಾಯಮೂರ್ತಿಗಳು ಚಾಲಕ ಹಾಗೂ ಪ್ರಯಾಣಿಕರ ಮಧ್ಯಭಾಗದಲ್ಲಿ ಅಳವಡಿಸಲಾಗಿದ್ದ ಪ್ಯಾನಿಕ್ ಬಟನ್ ನ್ನು ಪರಿಶೀಲಿಸಿದರು. ಕ್ಯಾಬ್ ನಲ್ಲಿ ಕುಳಿತ ಕೆಲ ನಿಮಿಷದಲ್ಲೇ ಪ್ಯಾನಿಕ್ ಬಟನ್ ನ್ನು ಒತ್ತಿದ್ದರು. ಈ ವೇಳೆ ಕಾರ್ ನ ಸಿಗ್ನಲ್ ನ್ನು ಕಂಡು ಹಿಡಿದ ಅಧಿಕಾರಿಗಳು ಕೂಡಲೇ ಕರೆ ಮಾಡಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದಾರೆ.

ಈ ವೇಳೆ ನ್ಯಾಯಮೂರ್ತಿಗಳು ಕಾರಿನ ಚಾಲಕನೊಂದಿಗೆ ಕೆಲ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದರು. ಕಾರಿನ ಇಂಜಿನ್ ಆನ್ ಆಗಿರಲಿಲ್ಲ. ಈ ವೇಳೆ ಪ್ಯಾನಿಕ್ ಬಟನ್ ಕೆಲಸ ನಿರ್ವಹಿಸುತ್ತಿದೆ ಎಂದು ಕೇಳಿದರು. ಇದಕ್ಕುತ್ತರಿಸಿ ಚಾಲಕನು, ಪ್ಯಾನಿಕ್ ಬಟನ್ ನ್ನು ಕಾರಿನ ಬ್ಯಾಟರಿಗೆ ಅಳವಡಿಸಲಾಗಿದ್ದು, ಕಾರಿನ ಇಂಜಿನ್ ಆಫ್ ಆಗಿದ್ದರೂ ಬ್ಯಾಟರಿ ಸಹಾಯದ ಮೂಲಕ ಪ್ಯಾನಿಕ್ ಬಟನ್ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಅಧಿಕಾರಿಗಳಿಗೆ ಆಗಾಗ ಸಿಗ್ನಲ್ ಗಳು ಹೋಗುತ್ತಿರುತ್ತದೆ ಎಂದು ಹೇಳಿದ.

ಕ್ಯಾಬ್ ನಲ್ಲಿ ವಿವಿಧ ರೀತಿಯ ಬಟನ್ ಗಳನ್ನು ಅಳವಡಿಸಲಾಗಿದೆ. ಪ್ರತೀ ಬಟನ್ ಗಳೂ ಒಂದೊಂದು ಸಂಸ್ಥೆಗಳ ಸಂಪರ್ಕವನ್ನು ಹೊಂದಿರುತ್ತದೆ. ಪ್ರಯಾಣಿಕರಿಗಿರುವ ಗೊಂದಲಗಳ ನಿವಾರಣೆಗಾಗಿ ಈ ರೀತಿಯಾಗಿ ಮಾಡಲಾಗಿದೆ ಎಂದು ಹೇಳಿದ. ಈ ಮೂಲಕ ನ್ಯಾಯಮೂರ್ತಿಗಳು ಸ್ವತಃ ತಾವೇ ಕ್ಯಾಬ್ ನಲ್ಲಿ ಪ್ರಯಾಣ ಮಾಡುವ ಮೂಲಕ ಪ್ರಯಾಣಿಕರ ಸುರಕ್ಷತೆ ಕುರಿತಂತೆ ಪ್ರರಿಶೀಲನೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com