ಮೈಸೂರು: ಅರಮನೆ ಮುಂಭಾಗದ ಭೂಮಿಗಾಗಿ ರಾಜವಂಶಸ್ಥರು ಮತ್ತು ಸರ್ಕಾರದ ಜಟಾಪಟಿ

ಅಂಬಾವಿಲಾಸ ಅರಮನೆ ಮುಂಭಾಗದ ದೊಡ್ಡಕೆರೆ ಮೈದಾನದ ಒಡೆತನಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥರು ಹಾಗೂ ಜಿಲ್ಲಾಡಳಿತದ ನಡುವೆ ಜಟಾಪಟಿ ಶುರುವಾಗಿದೆ...
ಮೈಸೂರು ಅರಮನೆ
ಮೈಸೂರು ಅರಮನೆ
Updated on

ಮೈಸೂರು:  ಅಂಬಾವಿಲಾಸ ಅರಮನೆ ಮುಂಭಾಗದ ದೊಡ್ಡಕೆರೆ ಮೈದಾನದ ಒಡೆತನಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥರು ಹಾಗೂ ಜಿಲ್ಲಾಡಳಿತದ ನಡುವೆ ಜಟಾಪಟಿ ಶುರುವಾಗಿದೆ.

ಶನಿವಾರ ದೊಡ್ಡಕೆರೆ ಮೈದಾನದ 10 ಎಕರೆ 36 ಗುಂಟೆ ಭೂಮಿಯನ್ನು ರಾಜವಂಶಸ್ಥರು ಸುಪರ್ದಿಗೆ ಪಡೆದು, ಶುಚಿಗೊಳಿಸುತ್ತಿದ್ದರು. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ರಮೇಶ್‌ ಬಾಬು, ಕಾಮಗಾರಿ ಮುಂದುವರಿಸದಂತೆ ಸೂಚಿಸಿದ್ದಾರೆ. ಸರ್ಕಾರಕ್ಕೆ ಸೇರಿದ ಭೂಮಿಯಲ್ಲಿ ಅತಿಕ್ರಮ ಪ್ರವೇಶ ಮಾಡಿ, ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದರ ವಿರುದ್ಧ ನಜರಬಾದ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನಿಯಮಾನುಸಾರ ಖಾತೆ ಮಾಡಿಕೊಡುವಂತೆ ಮಹಾನಗರ ಪಾಲಿಕೆಗೆ ಹೈಕೋರ್ಟ್‌ ಸೂಚಿಸಿದೆ. ಭೂ ಪರಿವರ್ತನೆ ಸೇರಿದಂತೆ ಕೆಲ ದಾಖಲೆಗಳನ್ನು ತರುವಂತೆ ಜುಲೈ 25ರಂದು ರಾಜವಂಶಸ್ಥರಿಗೆ ಸೂಚಿಸಿದ್ದೇವೆ. ಸೂಕ್ತ ದಾಖಲೆ ಒದಗಿಸಿದರೆ ಖಾತೆ ಮಾಡಿಕೊಡಲು ನಮ್ಮ
ದೇನೂ ತಕರಾರು ಇಲ್ಲ. ಈ ಪ್ರಕ್ರಿಯೆ ಮುಗಿಯುವವರೆಗೆ ಇದು ಸರ್ಕಾರಿ ಭೂಮಿತಹಶೀಲ್ದಾರ್ ಸ್ಪಷ್ಟ ಪಡಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ರಾಜವಂಶಸ್ಥರ ಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ ಇದು ರಾಜವಂಶಸ್ಥರಿಗೆ ಸೇರಿದ ಭೂಮಿ ಎಂದು ನ್ಯಾಯಾಲಯವೇ ತೀರ್ಮಾನಿಸಿದೆ. ಸರ್ಕಾರಿ ಭೂಮಿ ಎಂಬುದಕ್ಕೆ ಅಧಿಕಾರಿಗಳ ಬಳಿ ಸೂಕ್ತ ದಾಖಲೆ ಇಲ್ಲ. ಖಾಸಗಿ ಭೂಮಿಯಲ್ಲಿ ತಹಶೀಲ್ದಾರ್‌ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗರಿಕೆಮಾಳ ಮತ್ತು ದೊಡ್ಡಕೆರೆ ಮೈದಾನ ಪ್ರತ್ಯೇಕ ಆಸ್ತಿಗಳು. ಗರಿಕೆಮಾಳವನ್ನು ಖಾತೆ ಮಾಡಿಕೊಡುವಂತೆ ಕಳೆದ ಏಪ್ರಿಲ್‌ 20ರಂದು ಹೈಕೋರ್ಟ್‌ ಆದೇಶ ನೀಡಿತ್ತು. ಮೇ 3ರಂದು ಖಾತೆ ಮಾಡಿಕೊಡಲು ಪಾಲಿಕೆಗೆ ಅರ್ಜಿ ಸಲ್ಲಿಸಲಾಗಿತ್ತು. 8 ವಾರದೊಳಗೆ ಖಾತೆ ಮಾಡಿಕೊಡಬೇಕಿತ್ತು. ಈಗ ಇದು ಕೆರೆ ಜಾಗ ಎಂದು ತಗಾದೆ ತೆಗೆದಿದ್ದಾರೆ ಎಂದು ರಾಜಮಾತೆ ಪ್ರಮೋದಾ ದೇವಿ ಆರೋಪಿಸಿದ್ದಾರೆ.

ಅರಮನೆಯ ಜಯಮಾರ್ತಾಂಡ ದ್ವಾರದ ಮುಂಭಾಗದ ಜಾಗವಾದ ಗರಿಕೆ ಮಾಳಅಥವಾ ಪರೇಡ್‌ ಮೈದಾನವನ್ನು ಖಾತೆ ಮಾಡಿಕೊಡದಿದ್ದರೆ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com