
ಮಂಡ್ಯ: ಕಾವೇರಿ ವಿವಾದವೇನಿದ್ದರೂ ನ್ಯಾಯಾಧಿಕರಣದ ಮೂಲಕ ಬಗೆಹರಿಯಬೇಕೇ ಹೊರತು ನ್ಯಾಯಾಂಗದ ಮೂಲಕವಲ್ಲ. ಮದ್ಯಂತರ ಆದೇಶ ನ್ಯಾಯಾಂಗದ ಕೆಲಸವೇ ಅಲ್ಲ ಆದರೂ ನೀರು ಬಿಡುವ ಸಂಬಂಧ ತೀರ್ಪು ನೀಡಿದೆ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಮಾದೇಗೌಡ ಅವರು, ಸುಪ್ರೀಂ ಕೋರ್ಟ್ ನ ತೀರ್ಪನ್ನು ಮೊದಲೇ ಶಂಕಿಸಿದ್ದೆ. ಕಾವೇರಿ ನದಿ ನೀರು ವಿಚಾರವಾಗಿ ತೀರ್ಪು ನೀಡುವುದು ನ್ಯಾಯಾಂಗದ ಕೆಲಸವಲ್ಲ. ಆದೇನಿದ್ದರೂ ನ್ಯಾಯಾಧಿಕರಣ ಅಥವಾ ಕಾವೇರಿ ಮೇಲುಸ್ತುವಾರಿ ಕೆಲಸವಾಗಿದೆ. ಹೀಗಿದ್ದೂ ನ್ಯಾಯಾಲಯ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಗೆ ಮದ್ಯಂತರ ಅರ್ಜಿಗಳನ್ನು ಸಲ್ಲಿಸುವುದರಿಂದ ಅಥವಾ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದರಿಂದ ಯಾವುದೇ ಲಾಭವಿಲ್ಲ ಎಂದು ಮಾದೇಗೌಡ ಹೇಳಿದ್ದಾರೆ.
Advertisement