ರೈಲು ಟಿಕೆಟ್ ಖರೀದಿಗೂ ಇನ್ನು ಆಧಾರ್ ಕಡ್ಡಾಯ!

ವಿವಿಧ ಸರ್ಕಾರಿ ಕೆಲಸಗಳಿಗೆ ಹಾಗೂ ವಿವಿಧ ಸರ್ಕಾರಿ ಸಬ್ಸಿಡಿ ಪಡೆಯಲು ಕಡ್ಡಾಯವಾಗಿರುವ ಆಧಾರ್ ಕಾರ್ಡ್ ಇನ್ನು ರೈಲ್ವೇ ಟಿಕೆಟ್ ಖರೀದಿಯಲ್ಲೂ ಕಡ್ಡಾಯಗೊಳಿಸಲು ಕೇಂದ್ರ ರೈಲ್ವೇ ಇಲಾಖೆ ಚಿಂತನೆ ನಡೆಸಿದೆ.
ಭಾರತೀಯ ರೈಲ್ವೇ ಹಾಗೂ ಆಧಾರ್ ಕಾರ್ಡ್ (ಸಂಗ್ರಹ ಚಿತ್ರ)
ಭಾರತೀಯ ರೈಲ್ವೇ ಹಾಗೂ ಆಧಾರ್ ಕಾರ್ಡ್ (ಸಂಗ್ರಹ ಚಿತ್ರ)

ನವದೆಹಲಿ: ವಿವಿಧ ಸರ್ಕಾರಿ ಕೆಲಸಗಳಿಗೆ ಹಾಗೂ ವಿವಿಧ ಸರ್ಕಾರಿ ಸಬ್ಸಿಡಿ ಪಡೆಯಲು ಕಡ್ಡಾಯವಾಗಿರುವ ಆಧಾರ್ ಕಾರ್ಡ್ ಇನ್ನು ರೈಲ್ವೇ ಟಿಕೆಟ್ ಖರೀದಿಯಲ್ಲೂ ಕಡ್ಡಾಯಗೊಳಿಸಲು ಕೇಂದ್ರ  ರೈಲ್ವೇ ಇಲಾಖೆ ಚಿಂತನೆ ನಡೆಸಿದೆ.

ಟಿಕೆಟ್ ಖರೀದಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೇಂದ್ರ ಸರ್ಕಾರ ರೈಲ್ವೆ ಟಿಕೆಟ್‌ ಖರೀದಿಗೂ ಆಧಾರ್‌ ಸಂಖ್ಯೆ ಕಡ್ಡಾಯ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.  ಸದ್ಯದ ಯೋಜನೆ ಪ್ರಕಾರ, ಕಾಯ್ದಿರಿಸಿದ ಮತ್ತು ಸಾಮಾನ್ಯ ಟಿಕೆಟ್‌ಗಳ ಖರೀದಿಗೆ ಜೊತೆಗೆ ಆನ್‌ಲೈನ್‌ ಹಾಗೂ ರೈಲ್ವೆ ನಿಲ್ದಾಣದ ಕೌಂಟರ್‌ ಖರೀದಿಗೂ ಕೂಡಾ ಆಧಾರ್‌ ಸಂಖ್ಯೆ ಕಡ್ಡಾಯ  ಮಾಡಲಾಗುವುದು.

ಇದರಿಂದ ಮಧ್ಯವರ್ತಿಗಳ ಹಾವಳಿ ತಡೆಯುವ ಜೊತೆಗೆ, ಹಿರಿಯ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರು, ಅಂಗವಿಕಲರು, ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರಿಗೆ ರಿಯಾಯಿತಿ  ಪಡೆಯಲು ಅನುಕೂಲವಾಗುತ್ತದೆ ಎಂಬುದು ಕೇಂದ್ರ ಸರ್ಕಾರದ ಚಿಂತನೆಯಾಗಿದೆ. ಪ್ರಮುಖವಾಗಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವುದರಿಂದ ಕೇವಲ ಮಧ್ಯವರ್ತಿಗಳ ಹಾವಳಿ  ತಡೆಗಟ್ಟುವುದಲ್ಲದೇ ಪ್ರಯಾಣಿಕರ ವಯಸ್ಸಿನ ಸಂಬಂಧಿತ ಮೋಸ ಪ್ರಕರಣಗಳನ್ನೂ ಕೂಡ ಈ ಕ್ರಮದಿಂದ ಸುಲಭವಾಗಿ ತಡೆಗಟ್ಟಬಹುದಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಸರ್ಕಾರದ ಈ ನೂತನ ಕ್ರಮ ಡಿಸೆಂಬರ್ 2016ರಿಂದ ಜಾರಿಗೆ ಬರುವ ಸಾಧ್ಯತೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com