ಜೀವಂತ ವ್ಯಕ್ತಿಯ ಶವಯಾತ್ರೆ
ರಾಜ್ಯ
ವಿಚಿತ್ರ ಆಚರಣೆ: ಬಳ್ಳಾರಿಯಲ್ಲಿ ಮಳೆಗಾಗಿ ಜೀವಂತ ವ್ಯಕ್ತಿಯ ಶವ ಯಾತ್ರೆ
ಮಳೆಗಾಗಿ ಕಪ್ಪೆಗಳಿಗೆ-ಕತ್ತೆಗಳಿಗೆ ಮದುವೆ ಮಾಡುವುದನ್ನು ನೋಡಿರುತ್ತೀರಾ. ಆದರೆ ಬಳ್ಳಾರಿಯಲ್ಲಿ ಮಳೆಗಾಗಿ ಜೀವಂತವಾಗಿರುವ ವ್ಯಕ್ತಿಯನ್ನು ಶವ ಸಂಸ್ಕಾರದ ವಿಧಿವಿಧಾನಗಳ...
ಬಳ್ಳಾರಿ: ಮಳೆಗಾಗಿ ಕಪ್ಪೆಗಳಿಗೆ-ಕತ್ತೆಗಳಿಗೆ ಮದುವೆ ಮಾಡುವುದನ್ನು ನೋಡಿರುತ್ತೀರಾ. ಆದರೆ ಬಳ್ಳಾರಿಯಲ್ಲಿ ಮಳೆಗಾಗಿ ಜೀವಂತವಾಗಿರುವ ವ್ಯಕ್ತಿಯನ್ನು ಶವ ಸಂಸ್ಕಾರದ ವಿಧಿವಿಧಾನಗಳ ರೀತಿಯಲ್ಲಿ ಸಿದ್ಧಗೊಳಿಸಿ ಶವದಂತೆ ಊರು ತುಂಬಾ ಮೆರವಣಿಗೆ ಮಾಡಿ, ಸ್ಮಶಾನದಲ್ಲಿಟ್ಟು ಬರುವ ವಿಚಿತ್ರ ಸಂಪ್ರದಾಯ ಇದೀಗ ಬೆಳಕಿಗೆ ಬಂದಿದೆ.
ಇಂತಹ ವಿಚಿತ್ರ ಸಂಪ್ರದಾಯ ಆಚರಣೆ ಮಾಡುವುದು ಬಳ್ಳಾರಿ ಕೂಡ್ಲಿಗಿ ತಾಲೂಕಿನ ಭೀಮಸಮುದ್ರದಲ್ಲಿ. ಈ ಭಾರೀ 70 ವರ್ಷದ ವೃದ್ಧನನ್ನು ಶವದ ರೀತಿಯಲ್ಲಿ ಸಿದ್ಧಗೊಳಿಸಿ ಗ್ರಾಮದಲ್ಲೆಲ್ಲಾ ಮೆರವಣಿಗೆ ಮಾಡಿ ಸ್ಮಶಾನದಲ್ಲಿಟ್ಟು ತಿರುಗಿ ನೋಡದಂತೆ ಹಿಂತಿರುಗಿ ಬಂದಿದ್ದಾರೆ.

