ಕಾವೇರಿ ತೀರ್ಪಿಗೆ ವಿರೋಧ: ವಿಫಲವಾಯ್ತು ರೈಲು ಬಂದ್

ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂ ನೀಡಿದ್ದ ತೀರ್ಪು ವಿರೋಧಿ, ಸಮಸ್ಯೆ ಬಗೆಹರಿಸಲು ಪ್ರಧಾನಿ ಮೋದಿಯವರು ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಗುರುವಾರ ನಡೆಸಲಾಗಿದ್ದ ರೈಲು...
ರೈಲ್ವೆ ನಿಲ್ದಾಣದಲ್ಲಿ ಭದ್ರತೆ ನೀಡುತ್ತಿರುವ ಭದ್ರತಾ ಪಡೆ
ರೈಲ್ವೆ ನಿಲ್ದಾಣದಲ್ಲಿ ಭದ್ರತೆ ನೀಡುತ್ತಿರುವ ಭದ್ರತಾ ಪಡೆ

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂ ನೀಡಿದ್ದ ತೀರ್ಪು ವಿರೋಧಿ, ಸಮಸ್ಯೆ ಬಗೆಹರಿಸಲು ಪ್ರಧಾನಿ ಮೋದಿಯವರು ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಗುರುವಾರ ನಡೆಸಲಾಗಿದ್ದ ರೈಲು ಬಂದ್ ಆಚರಣೆಯನ್ನು ರಾಜ್ಯ ಪೊಲೀಸರು ವಿಫಲವಾಗುವಂತೆ ಮಾಡಿದ್ದಾರೆ.

ನಿನ್ನೆ ನೀಡಲಾಗಿದ್ದ ರೈಲು ಬಂದ್ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದರು. ಬೆಂಗಳೂರು, ಮಂಡ್ಯ ಸೇರಿದಂತೆ ರಾಜ್ಯದ ಬಹುತೇಕ ಕಡೆ ಕನ್ನಡಪರ ಸಂಘಟನೆಗಳ ಮುಖಂಡರನ್ನು ಮೊದಲೇ ವಶಕ್ಕೆ ಪಡೆದುಕೊಂಡಿದ್ದರು,

ಅಲ್ಲದೆ, ಈ ಮೊದಲೇ ರೈಲು ನಿಲ್ದಾಣಗಳ ಎದುರು ಬ್ಯಾರಿಕೇಡ್ ಹಾಗೂ ಪೊಲೀಸರ ಸರ್ಪಗಾವಲು ಹಾಕುವ ಮೂಲಕ ಭಾರೀ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಬಿಗಿ ಬಂದೋಬಸ್ತ್ ನಡುವೆಯೂ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಕಾರ್ಯಕರ್ತರು ನಂತರ ರೈಲು ತಡೆಗೆ ಯತ್ನಿಸಿದ್ದರು. ಈ ವೇಳೆ ಮುಖಂಡರಾದ ವಾಟಾಳ್ ನಾಗರಾಜ್ ಸೇರಿದಂತೆ 50 ಕ್ಕೂ ಹೆಚ್ಚುಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ 800ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಈ ಮಟ್ಟಿಗಿನ ಭದ್ರತೆಯನ್ನು ಈ ಹಿಂದೆಂದೂ ನೀಡಲಾಗಿರಲಿಲ್ಲ ಸರ್ಕಾರದ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಡಿ.ಸಿ. ರಾಜಪ್ಪ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com