ಉಡುಪಿ: ಇತ್ತೀಚಿಗೆ ಪೊಲೀಸ್ ಇಲಾಖೆಯಲ್ಲಿ ಕಿರುಕುಳು ಹೆಚ್ಚುತ್ತಿದ್ದು, ಉಡುಪಿ ಜಿಲ್ಲೆ ಕೋಟಾ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಕಬ್ಟಾಳ್ ರಾಜ್ ಅವರು ಗುರುವಾರ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ರಾಜಿನಾಮೆ ಪತ್ರ ಬರೆದಿಟ್ಟು ತೆರಳಿರುವ ಕಬ್ಟಾಳ್ ರಾಜ್ ಅವರು ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಬರೆದಿಟ್ಟಿದ್ದಾರೆ.
ಹಲವು ಅಕ್ರಮ ಚಟುಟಿಕೆಗಳ ಅಡ್ಡೆ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿ ನಿಷ್ಟಾವಂತ ಅಧಿಕಾರಿ ಎಂದು ಹೆಸರು ಮಾಡಿದ್ದ ಕಬ್ಬಾಳ್ ರಾಜ್ ಅವರು ಈಗ ರಾಜಿನಾಮೆ ನೀಡಿದ್ದು, ಇದಕ್ಕೆ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇಂದು ಬಳಗ್ಗೆ ನಾನು ಕಬ್ಬಾಳ್ ರಾಜ್ ಅವರೊಂದಿಗೆ ಮಾತನಾಡಿದ್ದು, ವೈಯಕ್ತಿಕ ಕಾರಣಗಳಿಂದ ಅವರು ರಾಜಿನಾಮೆ ನೀಡಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ ಅವರು ಹೇಳಿದ್ದಾರೆ.