ಫಲಿತಾಂಶ ಪ್ರಕಟಿಸದ ಕಾಲೇಜು ವಿರುದ್ಧ ಪ್ರತಿಭಟನೆ: ಶಿಕ್ಷಕರನ್ನು ಕೂಡಿ ಹಾಕಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ

ಕಳೆದೆರಡು ವರ್ಷಗಳಿಂದ ಫಲಿತಾಂಶ ಪ್ರಕಟಿಸಿದ ಕಾಲೇಜೊಂದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ವಿದ್ಯಾರ್ಥಿಯೊಬ್ಬ ಶಿಕ್ಷಕರನ್ನು ಕೊಠಡಿಯೊಳಗೆ ಕೂಡಿ ಹಾಕಿ, ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು...
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ (ಸಂಗ್ರಹ ಚಿತ್ರ)
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ (ಸಂಗ್ರಹ ಚಿತ್ರ)

ಅಥಣಿ: ಕಳೆದೆರಡು ವರ್ಷಗಳಿಂದ ಫಲಿತಾಂಶ ಪ್ರಕಟಿಸಿದ ಕಾಲೇಜೊಂದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ವಿದ್ಯಾರ್ಥಿಯೊಬ್ಬ ಶಿಕ್ಷಕರನ್ನು ಕೊಠಡಿಯೊಳಗೆ ಕೂಡಿ ಹಾಕಿ, ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ಅಥಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದಿದೆ.

ಪರೀಕ್ಷಾ ಶುಲ್ಕ ಕಟ್ಟದ ಹಿನ್ನೆಲೆಯಲ್ಲಿ ಬಿಎ. ಬಿಕಾಂ ಮತ್ತು ಬಿಎಸ್ ಸಿ ಕೋರ್ಸ್ ನ 90 ವಿದ್ಯಾರ್ಥಿಗಳ ಫಲಿತಾಂಶವನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ತಡೆಹಿಡಿದಿತ್ತು. ಶುಲ್ಕ ಕಟ್ಟಿದ ವಿದ್ಯಾರ್ಥಿಗಳಿಗೆ ರಸೀದಿ ಕೊಟ್ಟ ಹಿನ್ನೆಲೆಯಲ್ಲಿ ರಸೀದಿಯನ್ನು ಕಾಲೇಜಿಗೆ ನೀಡಿದ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಆದರೆ, ಶುಲ್ಕ ಕಟ್ಟದ ವಿದ್ಯಾರ್ಥಿಗಳ ಫಲಿತಾಂಶವನ್ನು ಕಾಲೇಜು ತಡೆಹಿಡಿದಿದೆ.
 
ಇದರಂತೆ ತಾನು ಪರೀಕ್ಷೆಯನ್ನೇ ಬರೆದಿಲ್ಲ ಎಂದು ಕುಟುಂಬಸ್ಥರು ಹೇಳುತ್ತಿದ್ದು, ಸತ್ಯ ಹೇಳಿದರೂ ನಂಬುತ್ತಿಲ್ಲ ಎಂದು ಹೇಳಿ ಕಾಲೇಜಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮನಪ್ಪ ಜಮದಾರ್ ಎಂಬ ವಿದ್ಯಾರ್ಥಿ ಕಾಲೇಜಿನ ಮಹಡಿ ಮೇಲಿಂದ ಬೀಳಲು ಯತ್ನಿಸಿದ್ದಾನೆ. ಈ ವೇಳೆ ಕೆಲ ಸಿಬ್ಬಂದಿಗಳು ಬಂದು ಆತನನ್ನು ತಡೆದಿದ್ದಾರೆ.

ನಂತರ ಕೊಠಡಿಯಿಂದ ಹೊರಬಂದ ಸಿಬ್ಬಂದಿಗಳು ಹಾಗೂ ಪ್ರಾಂಶುಪಾಲ ಜೆಪಿ. ದೊಡ್ಡಮಣಿ ಅವರು, ಶೀಘ್ರದಲ್ಲೇ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com