ತಮ್ಮ ಪ್ರತಿಷ್ಠೆ, ಗೌರವಕ್ಕಾಗಿ ರಾಜ್ಯವನ್ನು ಕತ್ತಲೆ ಕೂಪಕ್ಕೆ ತಳ್ಳಿದ ವಕೀಲ ನಾರಿಮನ್

ತಮ್ಮ ಗೌರವ ಹಾಗೂ ಪ್ರತಿಷ್ಠೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ರಾಜ್ಯಪ ಪರ ವಕೀಲ ನಾರಿಮನ್ ಕರ್ನಾಟಕವನ್ನು ಸಂಕಷ್ಟಕ್ಕೆ ಸಿಲುಕಿಸಿದರು...
ಕಾವೇರಿ ಜಲಾನಯನ ಪ್ರದೇಶ
ಕಾವೇರಿ ಜಲಾನಯನ ಪ್ರದೇಶ

ಬೆಂಗಳೂರು: ತಮ್ಮ ಗೌರವ ಹಾಗೂ ಪ್ರತಿಷ್ಠೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ರಾಜ್ಯಪ ಪರ ವಕೀಲ ನಾರಿಮನ್ ಕರ್ನಾಟಕವನ್ನು ಸಂಕಷ್ಟಕ್ಕೆ ಸಿಲುಕಿಸಿದರು ಎಂದು ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕಾವೇರಿ ವಿವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸದೇ ಹಿಂದೆ ಸರಿದ ಸಂಬಂಧ ಪ್ರತಿಕ್ರಿಯಿಸಿದ ಅವರು, ಕಾವೇರಿ ಮತ್ತು ಕೃಷ್ಣಾ ನದಿ ವಿವಾದಗಳಿಗೆ ಕಳೆದ 23 ವರ್ಷಗಳಿಂದ ನಾರಿಮನ್ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಎರಡು ಸಂದರ್ಭಗಳನ್ನು ಹೊರತು ಪಡಿಸಿ, ಎರಡು ದಶಕಗಳಿಂದ ನಾರಿಮನ್ ರಾಜ್ಯದ ಹಿತಾಸಕ್ತಿ ಕಾಯ್ದು ಕೊಂಡು ಬಂದಿದ್ದಾರೆ.

ರಾಜ್ಯ ಸರ್ಕಾರದ ಅನುಮತಿಯಿಲ್ಲದೇ ಕರ್ನಾಟಕ ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುತ್ತದೆ ಎಂದು ನಾರಿಮನ್ ಸುಪ್ರೀಂಕೋರ್ಟ್ ನಲ್ಲಿ ಹೇಳಿದ್ದರು. ನಂತರ ಶುಕ್ರವಾರ ರಾಜ್ಯದ ಪರ ಯಾವುದೇ ವಾದ ಮಂಡಿಸದೇ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿ ಕತ್ತಲೆ ಕೂಪಕ್ಕೆ ತಳ್ಳಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ತಮ್ಮ ಗೌರವ ಹಾಗೂ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಸಲುವಾಗಿ ನಾರಿಮನ್ ಶುಕ್ರವಾರ ರಾಜ್ಯ ಪರ ಯಾವುದೇ ವಾದ ಮಂಡಿಸಲಿಲ್ಲ.ರಾಜ್ಯ ಪದೇ ಪದೇ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದೆ ಎಂದು ಕಾರಣ ನೀಡಿದ್ದಾರೆ. ಕಾವೇರಿ ತೀರ್ಪೀನಿ ವಿರುದ್ಧ ರಾಜ್ಯ ಹಲವು ಭಾರಿ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿ ಹಿನ್ನಡೆ ಅನುಭವಿಸಿದೆ ಎಂದು ಹೇಳಿದ್ದಾರೆ.

ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸುವ ವಿಷಯದಲ್ಲಿ ನಾರಿಮನ್ ರಾಜ್ಯದ ಪರವಾಗಿ ಕೆಲಸ ಮಾಡಿ ಜಯ ಗಳಿಸಿದ್ದರು. ತಮಿಳುನಾಡಿಗೆ 380 ಟಿಎಂಸಿ ನೀರು ಬಿಡುವುದರ ಬದಲು 192 ಟಿಎಂಸಿ ನೀರು ಬಿಡುವಂತೆ ವಾದ ಮಾಡಿ ನೀರು ಬಿಡುವ ಪ್ರಮಾಣ ತಗ್ಗಿಸಿದ ಕೀರ್ತಿ ನಾರಿಮನ್ ಅವರದ್ದು. ಆದರೆ ಈ ಬಾರಿ ತಮ್ಮ ಗೌರವಕ್ಕಾಗಿ ರಾಜ್ಯಕ್ಕಾಗಿರು ಗಾಯದ ಮೇಲೆ ಉಪ್ಪು ಸುರಿದಂತೆ ಮಾಡಿರುವ ನಾರಿಮನ್ ತೀವ್ರ ಟೀಕೆಗೊಳಗಾಗಿದ್ದಾರೆ ಎಂದು ಅಶೋಕ್ ಹಾರನಹಳ್ಳಿ ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com