ಮ್ಯಾನ್'ಹೋಲ್ ದುರಂತ: ತಿಂಗಳ ಬಳಿಕ ವಿಚಾರಣೆಗೊಳಗಾದ ರಾಮ್ಕಿ ಅಧ್ಯಕ್ಷ

ನಗರದಲ್ಲಿ ಸಂಭವಿಸಿದ್ದ ಮ್ಯಾನ್'ಹೋಲ್ ದುರಂತಕ್ಕೆ ಮೂವರು ಬಲಿಯಾಗಿದ್ದರು. ಘಟನೆ ಸಂಭವಿಸಿ ತಿಂಗಳು ಕಳೆದ ಬಳಿಕ ಇದೀಗ ರಾಮ್ಕಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಅಧ್ಯಕ್ಷ ಅಲ್ಲ ಅಯೋಧ್ಯ ರಾಮಿ ರೆಡ್ಡಿಯನ್ನು...
ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಹಾಜರಾದ ರಮಿ ರೆಡ್ಡಿಯವರೊಂದಿಗೆ ಮಾತನಾಡುತ್ತಿರುವ ಪೊಲೀಸರು
ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಹಾಜರಾದ ರಮಿ ರೆಡ್ಡಿಯವರೊಂದಿಗೆ ಮಾತನಾಡುತ್ತಿರುವ ಪೊಲೀಸರು
ಬೆಂಗಳೂರು: ನಗರದಲ್ಲಿ ಸಂಭವಿಸಿದ್ದ ಮ್ಯಾನ್'ಹೋಲ್ ದುರಂತಕ್ಕೆ ಮೂವರು ಬಲಿಯಾಗಿದ್ದರು. ಘಟನೆ ಸಂಭವಿಸಿ ತಿಂಗಳು ಕಳೆದ ಬಳಿಕ ಇದೀಗ ರಾಮ್ಕಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಅಧ್ಯಕ್ಷ ಅಲ್ಲ ಅಯೋಧ್ಯ ರಾಮಿ ರೆಡ್ಡಿಯವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. 
ನಿನ್ನೆಯಷ್ಟೇ ಪೊಲೀಸ್ ಕಾನೂನು ತಜ್ಞರು ಹಾಗೂ ನಿರೀಕ್ಷಣಾ ಜಾಮೀನಿನೊಂದಿಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಬಂದಿರುವ ರಾಮಿ ರೆಡ್ಡಿಯವರನ್ನು ಹಲವು ಗಂಟೆಗಳ ಕಾಲ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. 
ಮೂಲಗಳು ತಿಳಿಸಿರುವ ಪ್ರಕಾರ, ವಿಚಾರಣೆಗೆ ರಾಮಿ ರೆಡ್ಡಿಯವರು ಸಹಕಾರ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ, ದುರ್ಘಟನೆಗೆ ತಮ್ಮಿಂದ ಯಾವುದೇ ತಪ್ಪಿಲ್ಲ ಎಂದಿರುವ ರೆಡ್ಡಿ ಘಟನೆ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳನ್ನು ತಿರಸ್ಕರಿಸಿದ್ದಾರೆಂದು ಹೇಳಲಾಗುತ್ತಿದೆ. 
ರಾಮಿ ರೆಡ್ಡಿಗೆ ನೀಡಿರುವ ನಿರೀಕ್ಷಣಾ ಜಾಮೀನನ್ನು ರದ್ದು ಮಾಡುವಂತೆ ಶೀಘ್ರದಲ್ಲಿಯೇ ನ್ಯಾಯಾಲಯದ ಬಳಿ ಮನವಿ ಮಾಡಿಕೊಳ್ಳಲಾಗುತ್ತೆದ ಎಂದು ಪೊಲೀಸರು ಹೇಳಿದ್ದಾರೆ. 
ರಾಮ್ಕಿ ಇನ್ಫ್ರಾಸ್ಟ್ರಕ್ಚರ್ ಕಂಪನಿಗೆ ರೂ.46 ಕೋಟಿ ಯೋಜನೆಯನ್ನು ಸರ್ಕಾರ ನೀಡಿತ್ತು. ನಂತರ ಯೋಜನೆಗಳನ್ನು ಗುತ್ತಿಗೆದಾರರಿರೆ ಹಂಚಿಕೆ ಮಾಡಲಾಗಿತ್ತು. ಆದರೆ, ಬಿಡಬ್ಲ್ಯೂಎಸ್ಎಸ್'ಬಿ ಈ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. 
ಈ ರೀತಿಯ ಪ್ರಕರಣಗಳಲ್ಲಿ ಕಂಪನಿ ಹಾಗೂ ಸಹ ಗುತ್ತಿಗೆದಾರರು ಇಬ್ಬರ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಬೇಕಾಗುತ್ತದೆ. ಈ ಪ್ರಕರಣವನ್ನು ಗಮನಿಸುವುದಾದರೆ, ಅಧಿಕೃತವಾಗಿ ಯೋಜನೆಗಳನ್ನು ಸಹ ಗುತ್ತಿಗೆದಾರರಿಗೆ ಹಂಚಿಕೆ ಮಾಡಿರುವುದರ ಬಗ್ಗೆ ಅಧಿಕೃತ ದಾಖಲೆಗಳು ದೊರಕಿಲ್ಲ. ಹೀಗಾಗಿ ರಾಮ್ಕಿ ಕಂಪನಿಯ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. 
ಕಳೆದ ಮಾರ್ಚ್.7 ರಂದು ಸಿ.ವಿ.ರಾಮನ್ ನಗರದಲ್ಲಿ ಮಧ್ಯರಾತ್ರಿ ಮ್ಯಾನ್ ಹೋಲ್ ಸ್ವಚ್ಛಗೊಳಿಸುತ್ತಿರುವಾಗ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com