ಅಕ್ರಮ ಮರಳು ಗಣಿಗಾರಿಕೆ: ರಾಜ್ಯದಲ್ಲಿ ಪ್ರತಿದಿನ 16 ಕೇಸು ದಾಖಲು

ಕಳೆದ ಎರಡು ವರ್ಷಗಳಿಂದ ಅಕ್ರಮ ಮರಳು ಗಣಿಗಾರಿಕೆ ಸಂಬಂಧ ಪ್ರತಿದಿನ ರಾಜ್ಯದಲ್ಲಿ ಸುಮಾರು 16 ಕೇಸುಗಳು ದಾಖಲಾಗುತ್ತಿವೆ ಎಂದು ಗಣಿ ಮತ್ತು ಭೂ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಅಕ್ರಮ ಮರಳು ಗಣಿಗಾರಿಕೆ ಸಂಬಂಧ ಪ್ರತಿದಿನ ರಾಜ್ಯದಲ್ಲಿ ಸುಮಾರು 16 ಕೇಸುಗಳು ದಾಖಲಾಗುತ್ತಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾಹಿತಿ ನೀಡಿದೆ.

ಅಕ್ರಮ ಮರಳು ಗಣಿಗಾರಿಕೆ, ಸಾಗಣೆ, ಸಂಗ್ರಹ ಮತ್ತು ಫಿಲ್ಟರ್ ಮರಳು ಬಳಕೆ ಹಿನ್ನೆಲೆಯಲ್ಲಿ 2015-16ನೇ ಹಾಗೂ 2016-17 ನೇ ಸಾಲಿನಲ್ಲಿ  ಒಟ್ಟು 12,318 ಕೇಸುಗಳು ದಾಖಲಾಗಿವೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಇದೇ ಸಾಲಿನಲ್ಲಿ 5,515 ಎಫ್ ಐ ಆರ್ ಗಳು ದಾಕಲಾಗಿದ್ದು, 20.26 ಕೋಟಿ ರೂ ದಂಡ ಸಂಗ್ರಹವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೊಂದು ಬಹು ಕೋಟಿರು ವ್ಯವಹಾರವಾಗಿದ್ದು, ಪ್ರಭಾವಿ ವ್ಯಕ್ತಿಗಳು ಇದರ ಹಿಂದೆ ಇದ್ದಾರೆ, ಹೀಗಾಗಿ ಅವರನ್ನು ಹಿಡಿಯುವುದು ಕಷ್ಟದ ಕೆಲಸ. ಇಂಥ ಪ್ರಬಲ ವ್ಯಕ್ತಿಗಳ ವಿರುದ್ಧ ನಮ್ಮ ಅಧಿಕಾರಿಗಳು ಹೋರಾಟ ನಡೆಸಬೇಕು ಎಂದು ನಾವು ನಿರೀಕ್ಷಿಸಲಾಗದು, ಯಾಕೆಂದರೇ ಇದನ್ನು ತಡೆಯಲು ಹೋದ ನಮ್ಮ ಅಧಿಕಾರಿಗಳಿಗೆ ಬೆದರಿಕೆ ಬರುತ್ತದೆ. ಕಾನೂನುಗಳು ಕೂಡ ಮಾಫಿಯವನ್ನು ರಕ್ಷಿಸುತ್ತಿರುವುದು ದುರಾದೃಷ್ಟಕರ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಅಕ್ರಮ ಗಣಿಗಾರಿಕೆ ಮಾಡುವವರು ಮೈನ್ ಲೇನ್ ಗಳಿಂದ ವಿದ್ಯುತ್ ಚ್ಛಕ್ತಿ ಕೂಡ ಕದಿಯುತ್ತಿದ್ದಾರೆ. ಅಂಡರ್ ಗ್ರೌಂಡ್ ನಲ್ಲೂ ವಿದ್ಯುತ್ ಕಳ್ಳತನ ನಡೆಯುತ್ತಿದೆ, ಅವರು ಅನುಮತಿಯನ್ನು ಪಡೆದಿಲ್ಲ ಜೊತೆಗೆ ಗೌರವಧನವನ್ನೂ ಕೂಡ ಪಾವತಿಸುತ್ತಿಲ್ಲ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂದು ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.

ಇಲಾಖೆ ಸಿಬ್ಬಂದಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಹಲವು ವಿದ್ಯುತ್ ಕಳ್ಳತನ ಕೇಸುಗಳು ಗಮನಕ್ಕೆ ಬರುತ್ತಿಲ್ಲ. ಪರವಾನಗಿ ಪಡೆದು ಮರಳು ಗಣಿಗಾರಿಕೆ ನಡೆಸುವ ಘಟಕಗಳು ಇಲೆ. ಆದರೆ ಅವರು ಎಷ್ಟು ಪ್ರಮಾಣದ ಮರಳು ಸಾಗಿಸಿದರೆಂಬ ಲೆಕ್ಕ ಇರುವುದಿಲ್ಲ ಎಂದು ಹೇಳಿದ್ದಾರೆ.

ಒಂದು ಲಾರಿ ಫಿಲ್ಟರ್ ಮರಳು ತುಂಬಿದರೇ ಅದರಿಂದ ಅವರಿಗೆ 80 ಸಾವಿರ ರು ಆದಾಯ ಬರುತ್ತದೆ. ಒಂದು ವೇಳೆ ಅವರು 50 ಟನ್ ಮರಳು ಸಾಗಿಸಿದರೇ ಒಂದು ಲಾರಿ ಲೋಡ್ ಮರಳನ್ನು 10 ಸಾವಿರ ರೂ ಗೆ ಮಾರಾಟ ಮಾಡುತ್ತಾರೆ. ಹೀಗಿದ್ದಾಗ ಅಕ್ರಮ ಮರಳು ಗಣಿಗಾರಿಕೆ ನಡೆಸುವ ಮಾಲೀಕರು ತಿಂಗಳಿಗೆ ಎಷ್ಟು ಹಣ ಸಂಪಾದಿಸುತ್ತಾರೆ ಎಂಬುದನ್ನು ಕಲ್ಪಿಸಿಕೊಳ್ಳಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆಗೆ1 ಲಕ್ಷ ದಂಡ ವಿಧಿಸುವ ಅಧಿಕಾರ  ಡೆಪ್ಯೂಟಿ ಕಮಿಷನರ್ ಗಿದೆ, ಆದರೆ ಮರಳು ದಂಧೆಕೋರರಿಗೆ 1 ಲಕ್ಷ ದಂಡ ಲೆಕ್ಕವೇ ಇಲ್ಲ ಎಂಬಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com