ಮರಳು ಮಾಫಿಯಾ ನಿಯಂತ್ರಣ ಹೇಗೆ? ಯಾರಿಂದ?

ಳೆದ ಕೆಲ ವರ್ಷಗಳಿಂದ ಅಕ್ರಮ ಮರಳು ದಂಧೆಕೋರರು ಹಾಗೂ ಸಾಗಣೆದಾರರಿಂದ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ, ದಾಳಿ ಯಥವತ್ತಾಗಿ ನಡೆಯುತ್ತಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ಅಕ್ರಮ ಮರಳು ದಂಧೆಕೋರರು ಹಾಗೂ ಸಾಗಣೆದಾರರಿಂದ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ, ದಾಳಿ ಯಥವತ್ತಾಗಿ ನಡೆಯುತ್ತಿವೆ. ಇತ್ತೀಚೆಗೆ ಉಡುಪಿ ಉಪ ಜಿಲ್ಲಾಧಿಕಾರಿ ಮತ್ತು ಅಸಿಸ್ಟೆಂಟ್ ಕಮಿಷನರ್ ಶಿಲ್ಪಾ ನಾಗ್ ಮೇಲೆ ನಡೆದಿದ್ದು ಸ್ವಲ್ಪದರಲ್ಲೇ ಇಬ್ಬರು ಅಧಿಕಾರಿಗಳು ಬಚಾವಾಗಿದ್ದಾರೆ. ಒಂದು ವಾರದ ಹಿಂದೆ ಕಲಬುರಗಿಯಲ್ಲೂ ಇಂಥಹುದ್ದೇ ಪ್ರಕರಣ ನಡೆದಿತ್ತು.

ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿರುವವರು ತಮಗಿರುವ ರಾಜಕೀಯ ಬೆಂಬಲ ಹಾಗೂ ಹಣದ ಪ್ರಭಾವ ಜೊತೆಗೆ ಮರಳು ಗಣಿಗಾರಿಕೆಯಿಂದ ಬರುವ ಆದಾಯದ ಕಾರಣ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವ ಧೈರ್ಯ ಮಾಡುತ್ತಾರೆ. ಯಾವುದೇ ತೊಂದರೆ ಎದುರಾದರೂ ತಮ್ಮ ರಾಜಕೀಯ ಪ್ರಭಾವ ಬಳಸಿ ಪಾರಾಗಬಹುದೆಂಬ ನಂಬಿಕೆಯಿಂದ ಕುತಂತ್ರ ನಡೆಸುತ್ತಾರೆ ಎಂದು ನಿವೃತ್ತ ಅಧಿಕಾರಿಗಳು ಮತ್ತು ತಜ್ಞರು ಅಭಿಪ್ರಾಯ ಪಡುತ್ತಾರೆ.

ಸರ್ಕಾರ  ಮರಳಿನ ಕೃತಕ ಕೊರತೆಯನ್ನು ಸೃಷ್ಟಿ ಮಾಡಿರುವುದರಿಂದ ಮರಳು ಗಣಿಗಾರಿಕೆ ಹೆಚ್ಚಿದೆ ಎಂದು ಕೆಲವರು ಸರ್ಕಾರವನ್ನು ಬೈಯ್ಯುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಅಕ್ರಮ ಮರಳು ಗಣಿಗಾರಿಕೆ ಮತ್ತು ಕಳ್ಳಸಾಗಣೆ ಆರಂಭವಾಗುವುದು ರಾತ್ರಿಯ ನಂತರ. ಜನ ಮರಳನ್ನು ಸದ್ದಿಲ್ಲದೇ ಸಾಗಿಸಲು ಯತ್ನಿಸುತ್ತಾರೆ. ಆದರೆ ಸ್ಥಳೀಯ ಪೊಲೀಸರು ಮತ್ತು ಕಂದಾಯ ಇಲಾಖೆ ಗೆ ತಿಳಿಯುತ್ತದೆ.  ಆದರೆ ಅವರು ಜಾಣ ಕುರುಡು ಪ್ರದರ್ಶಿದ ನಂತರ ಡೆಪ್ಯುಟಿ ಕಮಿಷನರ್ ಗಮನಕ್ಕೆ ಬರುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆ ಮಾಡುವವರು ಮರಳನ್ನು ಲಾರಿಯಲ್ಲಿ ಸಾಗಿಸುವಾಗ ಚೆಕ್ ಪೋಸ್ಟ್ ನಲ್ಲಿ ಲಂಚ ನೀಡುತ್ತಾರೆ. ಮೊದಲ ಬಾರಿಗೆ ಮರಳು ಲಾರಿ ಸಿಕ್ಕಿ ಹಾಕಿಕೊಂಡರೇ, ಅಧಿಕಾರಿಗೆ 30-40 ಸಾವಿರ ರೂ ಲಂಚ ನೀಡಿ ಹೋಗುತ್ತಾರೆ. ಒಂದು ವೇಳೆ ಎರಡನೇ ಬಾರಿ ಸಿಕ್ಕಿಹಾಕಿಕೊಂಡರೇ ಹೆಚ್ಚಿನ ಲಂಚ ನೀಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮಾರ್ಚ್ 31 ರಂದು ನಡೆದ ದಾಳಿಯ ಪ್ರಕರಣ ಸಂಬಂಧ ಕಲಬುರಗಿ ಡೆಪ್ಯುಟಿ ಕಮಿಷನರ್ ಉಜ್ವಲ್ ಕುಮಾರ್ ಘೋಷ್ ತನಿಖೆಗೆ ಆದೇಶಿಸಿದ್ದಾರೆ. ಇಂಥಹ ಹಲವು ಘಟನೆಗಳು ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿವೆ.

ರಾಜ್ಯದಲ್ಲಿ ಮರಳಿನ ಕೃತಕ ಅಭಾವ ಸೃಷ್ಟಿಯಾಗಿರುವುದರಿಂದ ಅಕ್ರಮ ಮರಳು ಗಣಿಗಾರಿಕೆ ದಂಧೆ ಹೆಚ್ಚುತ್ತಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ರಾಮೇಗೌಡ ಆರೋಪಿಸಿದ್ದಾರೆ. ಕರ್ನಾಟಕ ಮತ್ತು ಇತರ ರಾಜ್ಯಗಳಿಂದ ಮರಳಿಗೆ ನಿರಂತರ ಬೇಡಿಕೆಯಿದೆ. ಆದರೆ ಅವಶ್ಯಕವಾಗಿರುವ ಪ್ರಮಾಣದಲ್ಲಿ ಮರಳಿನ ಪೂರೈಕೆ ಆಗುತ್ತಿಲ್ಲ,  ಹೀಗಾಗಿ ಅಕ್ರಮ ಮರಳು ಗಣಿಗಾರಿಕೆ ಹೆಚ್ಚಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com