ಹೆದ್ದಾರಿಗಳಲ್ಲಿ ಮದ್ಯದಂಗಡಿ ನಿಷೇಧ: ಬಂದ್ ಗೆ ಕರೆ ನೀಡಿದ ಮಾರಾಟಗಾರರ ಒಕ್ಕೂಟ

ಹೆದ್ದಾರಿಗಳ ಸಮೀಪ ಮದ್ಯದ ಅಂಗಡಿಗಳನ್ನು ನಿಷೇಧಿಸುವ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಹೆದ್ದಾರಿಗಳ ಸಮೀಪ ಮದ್ಯದ ಅಂಗಡಿಗಳನ್ನು ನಿಷೇಧಿಸುವ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಕರ್ನಾಟಕ ಮದ್ಯ ಮಾರಾಟಗಾರರ ಒಕ್ಕೂಟ ಇದೇ ತಿಂಗಳ 20ರಂದು ಬಂದ್ ಗೆ ಕರೆ ನೀಡಿದೆ.
ನಗರದ ಮೂಲಕ ಹಾದುಹೋಗುವ ಹೆದ್ದಾರಿಗಳಲ್ಲಿರುವ ವೈನ್ ಶಾಪ್ ಗಳನ್ನು ಕೂಡ ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಬಂದ್ ಮಾಡಬೇಕಾಗುತ್ತದೆ. ಇದರರ್ಥ 10,000 ಅನುಮತಿ ಹೊಂದಿರುವ ಮದ್ಯದಂಗಡಿಗಳಲ್ಲಿ 6,000 ಅಂಗಡಿಗಳನ್ನು ಮುಚ್ಚಬೇಕು ಇಲ್ಲವೇ ಸ್ಥಳಾಂತರಿಸಬೇಕಾಗುತ್ತದೆ ಎಂದು ಒಕ್ಕೂಟದ ಖಜಾಂಚಿ ಟಿ.ಜೆ.ಮಹರ್ವಾಡೆ ತಿಳಿಸಿದ್ದಾರೆ.
ಈ ವಿಷಯದ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜೊತೆಗೆ ಚರ್ಚೆ ನಡೆಸಬೇಕು. ಮದ್ಯದಂಗಡಿಗಳ ಮಾಲಿಕರು ಮತ್ತು ಕೆಲಸಗಾರರು ಮಾತ್ರವಲ್ಲದೆ ಪರೋಕ್ಷವಾಗಿ ವ್ಯಾಪಾರದಲ್ಲಿ ಭಾಗಿಯಾಗಿರುವವರ ಮೇಲೆ ಕೂಡ ಪರಿಣಾಮ ಬೀರುತ್ತದೆ ಎಂದು ಮಹರ್ವಾಡೆ ಹೇಳುತ್ತಾರೆ.
 ಈ ವರ್ಷ 18,050 ಕೋಟಿ ರೂಪಾಯಿ ಆದಾಯ ಅಬಕಾರಿ ಇಲಾಖೆಯಿಂದ ಬಂದಿದ್ದು ಎಂದು ಹೇಳಲಾಗುತ್ತಿದ್ದು, ಶೇಕಡಾ 60ರಷ್ಟು ಮದ್ಯದಂಗಡಿಗಳನ್ನು ಮುಚ್ಚಿದರೆ ನಮ್ಮ ಗುರಿಯನ್ನು ತಲುಪಲು ಹೇಗೆ ಸಾಧ್ಯ ಎಂದು ಮಹರ್ವಾಡೆ ಕೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com